ಅಪರಾಧಿ ಎಂದು ತೀರ್ಪು ಬಂದಕೂಡಲೆ ಕೋರ್ಟ್​ನಿಂದ ಪರಾರಿಯಾದ ಉತ್ತರ ಪ್ರದೇಶದ ಸಚಿವ | UP minister Rakesh Sachan flees from courtroom after guilty verdict Police to launch probe


1991ರಲ್ಲಿ ಪೊಲೀಸರು ರಾಕೇಶ್ ಸಚನ್‌ ಅವರಿಂದ ಅಕ್ರಮ ಬಂದೂಕನ್ನು ವಶಪಡಿಸಿಕೊಂಡಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಮುನ್ನ ರಾಕೇಶ್ ಸಚನ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಅಪರಾಧಿ ಎಂದು ತೀರ್ಪು ಬಂದಕೂಡಲೆ ಕೋರ್ಟ್​ನಿಂದ ಪರಾರಿಯಾದ ಉತ್ತರ ಪ್ರದೇಶದ ಸಚಿವ

ರಾಕೇಶ್ ಸಚನ್

Image Credit source: India Today

ನವದೆಹಲಿ: ಉತ್ತರ ಪ್ರದೇಶದ ಸಚಿವ ರಾಕೇಶ್ ಸಚನ್ (Rakesh Sachan) ಅವರಿಗೆ 1991ರ ಶಸ್ತ್ರಾಸ್ತ್ರ ಕಾಯ್ದೆ (Arms Act) ಪ್ರಕರಣದಲ್ಲಿ ಶಿಕ್ಷೆ ಘೋಷಿಸಲಾಗಿದೆ. ತಮ್ಮನ್ನು ಅಪರಾಧಿ ಎಂದು ಘೋಷಿಸಿ, ಶಿಕ್ಷೆ ಪ್ರಕಟಿಸಿದ ನಂತರ ಅವರು ಕಾನ್ಪುರದ ನ್ಯಾಯಾಲಯದಿಂದ ಓಡಿ ಹೋಗಿದ್ದಾರೆ. 3 ದಶಕಗಳಷ್ಟು ಹಳೆಯದಾದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಶನಿವಾರ ನ್ಯಾಯಾಲಯವು ಸಚಿವ ರಾಕೇಶ್ ಸಚನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತು. ಇದಾದ ನಂತರ ಅವರು ಜಾಮೀನು ಬಾಂಡ್​ಗಳನ್ನು ಒದಗಿಸದೆ ನ್ಯಾಯಾಲಯದಿಂದ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳು ಅವರಿಗೆ ಕರೆ ಮಾಡಿದಾಗ ತಾವು ನಾಪತ್ತೆಯಾಗಿರುವ ಆರೋಪವನ್ನು ನಿರಾಕರಿಸಿದ ಅವರು, ತಮ್ಮ ಪ್ರಕರಣವನ್ನು ಅಂತಿಮ ತೀರ್ಪಿಗೆ ಪಟ್ಟಿ ಮಾಡಲಾಗಿಲ್ಲ ಎಂದು ಹೇಳಿದ್ದಾರೆ.

ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸ್ ದೂರಿನಲ್ಲಿ ಸಚಿವರ ವಿರುದ್ಧ ಹೊರಿಸಲಾದ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸಹಾಯಕ ಪೊಲೀಸ್ ಆಯುಕ್ತ ಕೊತ್ವಾಲಿ ಅಶೋಕ್ ಕುಮಾರ್ ಸಿಂಗ್ ಅವರಿಗೆ ಸೂಚಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಬಿಪಿ ಜೋಗ್ದಂಡ್ ಹೇಳಿದ್ದಾರೆ.

TV9 Kannada


Leave a Reply

Your email address will not be published. Required fields are marked *