ಬೆಂಗಳೂರು: ಸಂಚಾರಿ ವಿಜಯ್ ಕುಟುಂಬ ವಿಜಯ್ ಅವರ ಅಂಗಾಗ ದಾನ ಮಾಡಲು ನಿರ್ಧಾರ ಮಾಡಿರುವ ಹಿನ್ನೆಲೆ ಸದ್ಯ ಅಪೊಲೋ ಆಸ್ಪತ್ರೆಗೆ ಜೀವ ಸಾರ್ಥಕತೆ ತಂಡ ಭೇಟಿ ನೀಡಿದೆ. ಈ ಜೀವ ಸಾರ್ಥಕತೆ ತಂಡ ಆರೋಗ್ಯ ಇಲಾಖೆ ಅಡಿಯಲ್ಲಿ ‌ಬರುತ್ತದೆ.
ಈಗಾಗಲೇ ಒಮ್ಮೆ ಸಂಚಾರಿ ವಿಜಯ್ ಅವರ ಬ್ರೈನ್​ ಡೆಡ್ ಪರೀಕ್ಷೆ ನಡೆಸಲಾಗಿದ್ದು ಇದೀಗ ಜೀವ ಸಾರ್ಥಕತೆ ಟೀಮ್ ಎರಡನೇ ಬಾರಿ ಬ್ರೈನ್ ಡೆಡ್ ಡಿಕ್ಲರೇಷನ್ ಮಾಡಲಿದೆ.

ಹೇಗೆ ನಡೆಯುತ್ತದೆ ಬ್ರೈನ್ ಡೆಡ್ ಡಿಕ್ಲರೇಷನ್..?

  • ಮಧ್ಯಾಹ್ನ ‌12 ಗಂಟೆಗೆ ಒಮ್ಮೆ ಅಪ್ನಿಯಾ ಟೆಸ್ಟ್ ಮಾಡಲಾಗಿದೆ.. ಸಂಜೆ 6 ಗಂಟೆ ನಂತರ ಎರಡನೇ ಅಪ್ನಿಯಾ ಟೆಸ್ಟ್ ‌ಮಾಡಲಾಗುತ್ತೆ. ಮೊದಲ ಅಪ್ನಿಯಾ ಟೆಸ್ಟ್​ಗೂ ಎರಡನೇ ಟೆಸ್ಟ್ ಗೂ 6 ಗಂಟೆಯ ಅಂತರ ಇರುತ್ತದೆ. ಅಪ್ನಿಯಾ ಟೆಸ್ಟ್​​ನಲ್ಲಿ ಮೆದುಳು ಕೆಲಸ ಮಾಡ್ತಿದೆಯಾ ಇಲ್ವಾ ಎನ್ನುವುದನ್ನ ಖಚಿತಪಡಿಸಿಕೊಳ್ಳಲಾಗತ್ತೆ..
  • ಕಣ್ಣಿನ ಮೇಲೆ ಹತ್ತಿ ಇಂದ ಸವರುವುದು, ಕಿವಿಯಲ್ಲಿ ತಣ್ಣೀರು ಹಾಕುವುದು, ಹೀಗೆ 10 ಬಗೆಯ ಟೆಸ್ಟ್ ಗಳನ್ನ ಮಾಡಲಾಗುತ್ತೆ. ಈ ಟೆಸ್ಟ್ ಗಳಲ್ಲಿ ಮೆದುಳು ಸ್ಪಂದಿಸದೇ ಇದ್ದರೆ ಬ್ರೈನ್ ಡೆಡ್ ಘೋಷಣೆ ಮಾಡಲಾಗುತ್ತೆ.
  • ಬಳಿಕ ವೈದ್ಯರಿಂದ Form 10 ಗೆ ಜೀವ ಸಾರ್ಥಕತೆ ತಂಡ ಸಹಿ‌ ಪಡೆಯಲಿದೆ. ಇದಾದ ನಂತರ ಅಂಗಾಂಗ ದಾನಕ್ಕೆ ಒಪ್ಪಿಗೆ ಪತ್ರಕ್ಕೆ ಕುಟುಂಬದವರ ಸಹಿ ಪಡೆಯಲಾಗತ್ತೆ. ನಂತರ ಆಪರೇಷನ್ ಥಿಯೇಟರ್​ನಲ್ಲಿ ಅಂಗಾಂಗ ‌ತೆಗೆಯುವ ಪ್ರಕ್ರಿಯೆ ನಡೆಯಲಿದೆ. ಬ್ರೈನ್ ಡೆಡ್ ಆದ ವ್ಯಕ್ತಿಯಿಂದ ಹೃದಯ, ಶ್ವಾಸಕೋಶ, ಕಿಡ್ನಿ, ಕಣ್ಣು, ಪ್ಯಾಂಕ್ರಿಯಾಸ್ ತೆಗೆಯಬಹುದು.
  • ಜೀವ ಸಾರ್ಥಕತೆಯ ಮತ್ತೊಂದು ತಂಡ ಅಂಗಾಂಗ ಪಡೆಯುವ ರೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ತಯಾರಿರುವಂತೆ ಆಸ್ಪತ್ರೆಗಳಿಗೆ ಸೂಚನೆ ನೀಡಿರುತ್ತದೆ. ಅಂಗಾಂಗ ‌ತೆಗೆದ ಬಳಿಕ ಅದರಲ್ಲಿನ ಬ್ಲಡ್ ಸೆಲ್​ಗಳನ್ನ ತೆಗೆದು ಲಿಕ್ವಿಡ್ ಹಾಕಿ ಐಸ್​ಬಾಕ್ಸ್ ನಲ್ಲಿ ಪ್ಯಾಕ್ ಮಾಡಲಾಗುತ್ತೆ.
  • ಕಿಡ್ನಿಯನ್ನ ಜಯನಗರ TTK ಬ್ಲಡ್ ಬ್ಯಾಂಕ್​ಗೆ ಕಳಿಸಿಕೊಡಲಾಗತ್ತೆ. ಅಲ್ಲಿ DNA ಮ್ಯಾಚ್‌ ಆಗುವ ರೋಗಿಗಳನ್ನ ಪತ್ತೆ ಮಾಡಿ ನಂತರ ಕಿಡ್ನಿ ಕಸಿಗೆ ಕಳಿಸಿಕೊಡಲಾಗುತ್ತೆ. ಇಂದು ರಾತ್ರಿಯೊಳಗೆ ಎಲ್ಲಾ ಪ್ರಕ್ರಿಯೆಗಳು ಮುಗಿಯಲಿದೆ ಎಂದು ಜೀವ ಸಾರ್ಥಕತೆ ತಂಡದಿಂದ ಮಾಹಿತಿ ಲಭ್ಯವಾಗಿದೆ.

The post ಅಪೊಲೋ ಆಸ್ಪತ್ರೆಗೆ ಜೀವ ಸಾರ್ಥಕತೆ ತಂಡ ಭೇಟಿ; ಅಂಗಾಂಗ ದಾನ ಹಿನ್ನೆಲೆ ವಿಜಯ್ ಪರೀಕ್ಷೆ appeared first on News First Kannada.

Source: newsfirstlive.com

Source link