ಬೆಂಗಳೂರು: ನಟ ಸಂಚಾರಿ ವಿಜಯ್ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಸಂಚಾರಿ ಪೊಲೀಸರು ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಬೈಕ್ ಅಪಘಾತವಾದಾಗ ಸಂಚಾರಿ ವಿಜಯ್ ಜೊತೆಯಲ್ಲಿದ್ದ ಸ್ನೇಹಿತ ನವೀನ್ ಹೇಳಿಕೆ ಪಡೆಯಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಬನ್ನೇರುಘಟ್ಟ ಅಪೊಲೋ ಆಸ್ಪತ್ರೆಯಲ್ಲಿ ಹೇಳಿಕೆಯನ್ನ ದಾಖಲು ಮಾಡಿಕೊಂಡಿದ್ದಾರೆ.

ನವೀನ್ ವಿರುದ್ಧ ಸಂಚಾರಿ ವಿಜಯ್ ಸಹೋದರ ಸಿದ್ದೇಶ್ ದೂರು ನೀಡಿದ್ದರು. ಅದರಂತೆ ಪೊಲೀಸರು ನವೀನ್​ ಮೇಲೆ FIR ದಾಖಲಿಸಿದ್ದಾರೆ. ಅಜಾಗರೂಕತೆ ಹಾಗೂ ಸಂಚಾರಿ ನಿಯಮ ಉಲ್ಲಂಘನೆ ಅಡಿ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ.

The post ಅಪೊಲೋ ಆಸ್ಪತ್ರೆಗೆ ಭೇಟಿ ನೀಡಿ ವಿಜಯ್ ಸ್ನೇಹಿತನ ಹೇಳಿಕೆ ಪಡೆದ ಪೊಲೀಸ್​ appeared first on News First Kannada.

Source: newsfirstlive.com

Source link