ಅಪ್ಘಾನಿಸ್ತಾನ: ಟಿವಿ ನಿರೂಪಕಿಯರು ಮುಖ ಮುಚ್ಚಬೇಕು ಎಂದು ಆದೇಶಿಸಿದ ತಾಲಿಬಾನ್ | Afghanistan’s Taliban rulers ordered all women TV anchors to cover their faces


ಅಪ್ಘಾನಿಸ್ತಾನ: ಟಿವಿ ನಿರೂಪಕಿಯರು ಮುಖ ಮುಚ್ಚಬೇಕು ಎಂದು ಆದೇಶಿಸಿದ ತಾಲಿಬಾನ್

ಅಫ್ಘಾನಿಸ್ತಾನದ ಟಿವಿ ನಿರೂಪಕಿ

Image Credit source: AP

ಹಲವಾರು ಮಹಿಳಾ ಆ್ಯಂಕರ್‌ಗಳು ಮತ್ತು ನಿರೂಪಕರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ಫೇಸ್ ಮಾಸ್ಕ್‌ಗಳಿಂದ ಮುಖವನ್ನು ಮುಚ್ಚಿರುವ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ

ಅಫ್ಘಾನಿಸ್ತಾನದ (Afghanistan) ತಾಲಿಬಾನ್ ಆಡಳಿತಗಾರರು ಟಿವಿ ಚಾನೆಲ್‌ಗಳಲ್ಲಿನ ಎಲ್ಲಾ ನಿರೂಪಕಿಯರು ತಮ್ಮ ಮುಖವನ್ನು ಮುಚ್ಚುವಂತೆ ಆದೇಶಿಸಿದ್ದಾರೆ ಎಂದು ದೇಶದ ಅತಿದೊಡ್ಡ ಮಾಧ್ಯಮ ಗುರುವಾರ ತಿಳಿಸಿದೆ. ಈ ಆದೇಶವು ತಾಲಿಬಾನ್‌ನ (Taliban)  ಸದ್ಗುಣ ಹಾಗೂ ದುರಾಚಾರ ತಡೆ ಸಚಿವಾಲಯದ ಹೇಳಿಕೆಯಲ್ಲಿ ಬಂದಿದೆ. ಜೊತೆಗೆ ಮಾಹಿತಿ ಮತ್ತು ಸಂಸ್ಕೃತಿ ಸಚಿವಾಲಯದಿಂದ TOLOnews ಚಾನೆಲ್ ಟ್ವೀಟ್‌ನಲ್ಲಿ ತಿಳಿಸಿದೆ. ಈ ಆದೇಶವನ್ನು “ಅಂತಿಮ ಮತ್ತು ಬದಲಾಯಿಸಲು ಸಾಧ್ಯವಿಲ್ಲ ಎಂದು ಚಾನೆಲ್ ಹೇಳಿದೆ. TOLOnews ಮತ್ತು ಹಲವಾರು ಇತರ ಟಿವಿ ಮತ್ತು ರೇಡಿಯೋ ನೆಟ್‌ವರ್ಕ್‌ಗಳನ್ನು ಹೊಂದಿರುವ ಮೊಬಿ ಗ್ರೂಪ್‌ಗೆ ಹೇಳಿಕೆಯನ್ನು ಕಳುಹಿಸಲಾಗಿದೆ ಮತ್ತು ಇದನ್ನು ಇತರ ಅಫ್ಘಾನ್ ಮಾಧ್ಯಮಗಳಿಗೂ ಅನ್ವಯಿಸಲಾಗುತ್ತಿದೆ ಎಂದು ಟ್ವೀಟ್ ಹೇಳಿದೆ. ಅಫ್ಘಾನ್ ಸ್ಥಳೀಯ ಮಾಧ್ಯಮ ಅಧಿಕಾರಿಯೊಬ್ಬರು ತಮ್ಮ ಕಚೇರಿಯು ಈ ಆದೇಶವನ್ನು ಸ್ವೀಕರಿಸಿದೆ ಎಂದು ದೃಢಪಡಿಸಿದ್ದು, ಈ ಬಗ್ಗೆ ಚರ್ಚೆಗೆ ಅವಕಾಶವಿಲ್ಲ ಎಂದು ಹೇಳಲಾಗಿದೆ. ನಮಗೆ ಬೇರೆ ದಾರಿಯಿಲ್ಲ ಎಂದ ಅವರು ಅಧಿಕಾರಿಗಳೊಂದಿಗೆ ಸಮಸ್ಯೆಗಳ ಭಯದಿಂದ ಹೆಸರು ಗೌಪ್ಯವಾಗಿರಿಸುವಂತೆ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಹಲವಾರು ಮಹಿಳಾ ಆ್ಯಂಕರ್‌ಗಳು ಮತ್ತು ನಿರೂಪಕರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ಫೇಸ್ ಮಾಸ್ಕ್‌ಗಳಿಂದ ಮುಖವನ್ನು ಮುಚ್ಚಿರುವ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. TOLOದ ಪ್ರಧಾನ ನಿರೂಪಕಿ, ಯಾಲ್ಡಾ ಅಲಿ, ” ಸದ್ಗುಣ ಹಾಗೂ ದುರಾಚಾರ ತಡೆ ಸಚಿವಾಲಯದ ಆದೇಶದ ಮೇರೆಗೆ ಮಹಿಳೆಯರನ್ನು ಇಲ್ಲವಾಗಿಸುತ್ತಿದ್ದಾರೆ ಎಂಬ ಶೀರ್ಷಿಕೆಯೊಂದಿಗೆ ಮುಖವಾಡವನ್ನು ಹಾಕಿಕೊಳ್ಳುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

ಶಂಶಾದ್ ಟಿವಿಯಲ್ಲಿ ಆದೇಶದ ಅನುಷ್ಠಾನವು ಮಿಶ್ರವಾಗಿತ್ತು. ಒಬ್ಬ ನಿರೂಪಕಿ ಗುರುವಾರ ಫೇಸ್ ಮಾಸ್ಕ್ ಧರಿಸಿ ಕಾಣಿಸಿಕೊಂಡಿದ್ದು ನಂತರ ದಿನದಲ್ಲಿ ಇನ್ನೊಬ್ಬರು ಮುಖ ತೋರಿಸದೆ ಹೋದರು.

1996-2001ರ ಅವಧಿಯಲ್ಲಿ ತಾಲಿಬಾನ್‌ನ ಮೊದಲ ಬಾರಿಗೆ ಅಧಿಕಾರದಲ್ಲಿದ್ದಾಗ, ಅವರು ಮಹಿಳೆಯರ ಮೇಲೆ ಅಗಾಧವಾದ ನಿರ್ಬಂಧಗಳನ್ನು ಹೇರಿದರು.ಮಹಿಳೆಯರು ಬುರ್ಖಾವನ್ನೇ ಧರಿಸಬೇಕು, ಸಾರ್ವಜನಿಕ ಜೀವನ ಮತ್ತು ಶಿಕ್ಷಣದಿಂದಲೂ ದೂರವಿರುವಂತೆ ಅವರಿಗೆ ನಿರ್ಬಂಧ ಹೇರಲಾಯಿತು. ಆಗಸ್ಟ್‌ನಲ್ಲಿ ಅವರು ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರವನ್ನು ವಶಪಡಿಸಿಕೊಂಡ ನಂತರ, ತಾಲಿಬಾನ್ ಆರಂಭದಲ್ಲಿ ಮಹಿಳೆಯರಿಗೆ ಯಾವುದೇ ಡ್ರೆಸ್ ಕೋಡ್ ಅನ್ನು ಘೋಷಿಸದೆ, ತಮ್ಮ ನಿರ್ಬಂಧಗಳನ್ನು ಸ್ವಲ್ಪಮಟ್ಟಿಗೆ ಮಿತಗೊಳಿಸಿದರು. ಆದರೆ ಇತ್ತೀಚಿನ ವಾರಗಳಲ್ಲಿ ತಾಲಿಬಾನ ತೀಕ್ಷ್ಣವಾದ, ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ವಿದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

TV9 Kannada


Leave a Reply

Your email address will not be published. Required fields are marked *