ಮೊನ್ನೆ ತಾನೆ ಅಂದ್ರೆ ಕಳೆದ ವರ್ಷ ಕಂಣ್ರಿ.. ಡಿಸೆಂಬರ್ನಲ್ಲಿ ಭಾರತದ ಕ್ರಿಕೆಟ್ ಲೋಕದ ಇತಿಹಾಸ 83 ವರ್ಲ್ಡ್ ಕಪ್ ಬಗ್ಗೆ ಸಿನಿಮಾ ಮಾಡಿದ್ರು ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್. ಈಗ ಮತ್ತೊಂದು ಸ್ಫೋರ್ಟ್ಸ್ ಅಡ್ವೆಂಚರ್ ಡ್ರಾಮಾವನ್ನ ಮಾಡಲು ‘ರಾಮ್ ಲೀಲಾ’ ಸಿನಿಮಾದ ಗಂಡ ಹೆಂಡ್ತಿ ಪ್ಲಾನ್ ಮಾಡ್ತಿದ್ದಾರೆ. ಹಾಗಾದ್ರೆ ಯಾವುದು ಕ್ರೀಡಾ ಜಗತ್ತಿನ ಕಥೆ..? ಜಸ್ಟ್ ವಾಚ್ ಇಟ್.
ಇವತ್ತು ಭಾರತೀಯ ಬ್ಯಾಡ್ಮಿಂಟನ್ ಲೋಕದಲ್ಲಿ ಸೈನಾ ನೆಹ್ವಾಲ್, ವಿ.ಪಿ ಸಿಂಧು ಮುಂತಾದವರ ಹೆಸರುಗಳು ಫೇಮಸೋ ಫೇಮಸ್. ಆದ್ರೆ ಒಂದು 30 ವರ್ಷದ ಹಿಂದೆ ಬ್ಯಾಡ್ಮಿಂಟನ್ ಪರಪಂಚದಲ್ಲಿ ಪ್ರಕಾಶ್ ಪಡುಕೋಣೆಯವರ ಹೆಸರು ದೇಶದಲ್ಲೇ ಮುಂಚುಣಿಯಲ್ಲಿತ್ತು. ಪ್ರಕಾಶ್ ಪಡುಕೋಣೆಯವರ ಬಯೋಪಿಕ್ ಬರಲಿದೆ ಅನ್ನೋ ಸುದ್ದಿ ಸಮಚಾರ ಬಾಲಿವುಡ್ ಲೋಕದ ತುಂಬ ಹರಿದಾಡುತ್ತಿದೆ. ಈ ಸುದ್ದಿ ವೇಗವಾಗಿ ಹಬ್ಬಲು ಕಾರಣ ದೀಪಿಕಾ ಪಡುಕೋಣೆ ಮತ್ತು ಡಿಪ್ಪಿಗೆ ಪಪ್ಪಿ ಕೊಡುವ ಯಜಮಾನ ರಣ್ವೀರ್ ಸಿಂಗ್.
ತನ್ನ ತಂದೆಯ ಬಯೋಪಿಕ್ನಲ್ಲಿ ದೀಪಿಕಾ ಪಡುಕೋಣೆ!
ಹೌದು.. ಇಂಥದೊಂದು ಸಮಾಚಾರ ಬಾಲಿವುಡ್ ಲೋಕದ ತುಂಬ ಹರಿದಾಡುತ್ತಿದೆ. 83 ಸಿನಿಮಾವನ್ನ ಮಾಡಿ ಗೆದ್ದಿರುವ ‘ರಾಮ್ ಲೀಲಾ’ ಜೋಡಿ ರಣ್ವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತೊಂದು ಸ್ಪೋರ್ಟ್ ಅಡ್ವೆಂಚರ್ ಸಿನಿಮಾದಲ್ಲಿ ನಟಿಸುವ ಸೂಚನೆ ಕೊಟ್ಟಿದ್ದಾರೆ. ತನ್ನ ತಂದೆಯ ಸಿನಿಮಾವನ್ನ ಮಾಡೋ ಮನಸಿನಲ್ಲಿ ಡಿಪ್ಪಿ ಇದ್ದು ತನ್ನ ಗಂಡನಿಂದಲೇ ತನ್ನ ಡ್ಯಾಡಿ ಪ್ರಕಾಶ್ ಪಡುಕೋಣೆಯ ಪಾತ್ರವನ್ನ ಮಾಡಿಸೋ ಆಸೆಯಲ್ಲಿದ್ದಾರಂತೆ.
ಸಿನಿಮಾ ಮಂದಿ ಸದಾ ಸ್ಫೂರ್ತಿದಾಯಕ ಕಥೆಯನ್ನ ಹುಡುಕುತ್ತಾ ಇರ್ತಾರೆ. ಆದ್ರೆ ದೀಪಿಕಾ-ರಣ್ವೀರ್ ಜೋಡಿಗೆ ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರುತುಂಬ ತುಪ್ಪಾ ಹುಡುಕಿದಂಗೆ ಆಗಿದೆ. ಪ್ರಕಾಶ್ ಪಡುಕೋಣೆಯವರ ಕಥೆಯನ್ನ ಸಿನಿಮಾವನ್ನಾಗಿ ಮಾಡಲು ಯೋಚಿಸಿದ್ದಾರಂತೆ ಬಿಟೌನ್ ಬಾಕ್ಸಾಫೀಸ್ ಪದ್ಮಾವತಿ.
ತನ್ನ ತಂದೆಯಂತೆ ತಾನು ಕೂಡ ಬ್ಯಾಡ್ಮಿಂಟನ್ ಪ್ಲೇಯರ್ ಆಗಬೇಕು ಅನ್ಕೋಂಡು ರಾಕೇಟ್ ಹಿಡಿದವರು ದೀಪಿಕಾ. ಆದ್ರೆ ಅಪ್ಪನಂತೆ ಬ್ಯಾಡ್ಮಿಂಟನ್ ಪ್ಲೇಯರ್ ಆಗೋಕ್ಕೆ ಆಗದೆ ಫ್ಯಾಷನ್ ಲೋಕದಲ್ಲಿ ಕ್ಯಾಟ್ ವಾಕ್ ಮಾಡ್ತಾ ಬಣ್ಣದ ಲೋಕದಲ್ಲಿ ನಯನ ಮನೋಹರ ನಕ್ಷತ್ರವಾಗಿ ಬಿಟ್ಟರು ದೀಪಿಕಾ. ಅಪ್ಪನ ಬಯೋಪಿಕ್ ಮಾಡಿಯಾದ್ರು ಅಪ್ಪನನ್ನ ಫಾಲೋ ಮಾಡಬೇಕು ಅನ್ನೊದು ಬೆಂಗಳೂರು ಬ್ಯೂಟಿ ಬಿಟೌನ್ ಹಾಟಿ ದೀಪಿಕಾ ಅವರ ಆಸೆ ಇದ್ದರು ಇರಬಹುದು. ಇನೇನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.