ಚೆನ್ನೈ: ತಮಿಳುನಾಡಿನಲ್ಲಿ 11 ವರ್ಷದ ಪುಟ್ಟ ಬಾಲಕಿಯೊಬ್ಬಳು ತನಗಾದ ನೋವು ಬೇರೆ ಯಾರಿಗೂ ಆಗದಿರಲಿ ಎಂದು,  2 ಸಾವಿರ ರೂಪಾಯಿ ಹಣವನ್ನ ಕೊರೊನಾ ವಿರುದ್ಧದ ಸಿಎಂ ಪಬ್ಲಿಕ್ ರಿಲೀಫ್ ಫಂಡ್​ಗೆ ನೀಡಿದ್ದಾಳೆ. ಎನ್.ರಿಧನಾ ಅನ್ನೋ ಬಾಲಕಿ ತಾನು ನಾಲ್ಕು ವರ್ಷಗಳಿಂದ ಕೂಡಿಟ್ಟಿದ್ದ ಹಣವನ್ನ ದೇಣಿಗೆಯಾಗಿ ಕೊಟ್ಟಿದ್ದಾಳೆ.

ರಿಧನಾಳ ತಂದೆಗೆ ಹೃದಯಸಂಬಂಧಿ ಕಾಯಿಲೆ ಇತ್ತು. ಬಾಲಕಿ ತನ್ನ ಪಾಕೆಟ್​ ಮನಿಯಲ್ಲಿ ಕೂಡಿಟ್ಟ ಹಣವನ್ನ ಅವರ ಚಿಕಿತ್ಸೆಗೆ ಬಳಸಬೇಕು ಎಂದುಕೊಂಡಿದ್ದಳು. ದುರಾದೃಷ್ಟವಶಾತ್, ಕಳೆದ ವರ್ಷ ಫೆಬ್ರವರಿಯಲ್ಲಿ ಆಕೆಯ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಸಂಗ್ರಹಿಸಿಟ್ಟುಕೊಂಡಿದ್ದ ಹಣವನ್ನ ಕೊರೊನಾ ಸೋಂಕಿತರಿಗೆ ನೆರವಾಗಲಿ ಅಂತಾ ಸಿಎಂ ಪರಿಹಾರ ನಿಧಿಗೆ ನೀಡಿದ್ದಾಳೆ.

ತಂದೆಯನ್ನ ಕಳೆದುಕೊಂಡ ಬಾಲಕಿಯ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಹೀಗಿದ್ದರೂ ಆಕೆ ನನ್ನ ಹಾಗೆ ಇನ್ನೊಂದು ಮಗು ಹೆತ್ತವರನ್ನ ಕಳೆದುಕೊಂಡು ನರಳುವುದು ನಂಗೆ ಇಷ್ಟ ಇಲ್ಲ ಎನ್ನುತ್ತ ಸಂಸದೆ ಕನಿಮೋಳಿ ಮೂಲಕ ಹಣವನ್ನ ಹಸ್ತಾಂತರಿಸಿದ್ದಾಳೆ ಎಂದು ವರದಿಯಾಗಿದೆ.

ಇನ್ನು ತಮಿಳುನಾಡಿನಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 2 ಲಕ್ಷ ಮೀರಿದೆ. ಈವರೆಗೆ  ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 17 ಸಾವಿರಕ್ಕೂ ಅಧಿಕ. ಚೆನ್ನೈ ಒಂದರಲ್ಲೇ 5,700 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

The post ಅಪ್ಪನ ನಿಧನ: ಕೂಡಿಟ್ಟ ₹2000 ಹಣವನ್ನ ಕೋವಿಡ್ ಪರಿಹಾರ ನಿಧಿಗೆ ಕೊಟ್ಟ 11ರ ಬಾಲಕಿ appeared first on News First Kannada.

Source: newsfirstlive.com

Source link