ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ತಮ್ಮ ಮುದ್ದಾದ ಮಗ ಜ್ಯೂನಿಯರ್ ಚಿರುವಿನ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ನಟಿ ಮೇಘನಾ ರಾಜ್ ಮಗನನ್ನು ಎತ್ತಿಕೊಂಡು ಚಿರಂಜೀವಿ ಸರ್ಜಾ ಫೋಟೋವನ್ನು ತೋರಿಸಿ, ಅಪ್ಪನನ್ನು ನೋಡು ಎಂದು ಹೇಳುತ್ತಾರೆ. ಆಗ ಜ್ಯೂನಿಯರ್ ಚಿರು ಫೋಟೋದಲ್ಲಿ ಚಿರಂಜೀವಿ ಸರ್ಜಾರನ್ನು ಕಣ್ಣು ಮಿಟಿಕಿಸದೇ ದಿಟ್ಟಿಸಿ ನೋಡುತ್ತಾ, ತನ್ನ ಎರಡು ಕೈಗಳಿಂದ ಫೋಟೋವನ್ನು ಮುಟ್ಟಿ ಮುಗುಳುನಗೆ ಬೀರಿ, ಅಪ್ಪನ ಫೋಟೋದೊಂದಿಗೆ ಆಟ ಆಡಿದ್ದಾನೆ.

 

View this post on Instagram

 

A post shared by Meghana Raj Sarja (@megsraj)

ಈ ವೀಡಿಯೋವನ್ನು ಮೇಘನಾ ರಾಜ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಮ್ಮ ಪವಾಡ- ಶಾಶ್ವತ ಮತ್ತು ಯಾವಾಗಲೂ ಎಂದು ಕ್ಯಾಪ್ಷನ್ ಹಾಕಿಕೊಂಡಿದ್ದಾರೆ. ಈ ವೀಡಿಯೋಗೆ ನಟ ಪ್ರಜ್ವಾಲ್ ದೇವರಾಜ್ ಪತ್ನಿ ರಾಗಿಣಿ, ಪನ್ನಾಗಭರಣ, ಕಿರುತರೆ ನಟಿ ಶ್ವೇತ ಚೆಂಗಪ್ಪ ಸೇರಿದಂತೆ ಅನೇಕ ಮಂದಿ ಕಾಮೆಂಟ್ ಮಾಡಿದ್ದಾರೆ.

The post ಅಪ್ಪನ ಫೋಟೋ ಜೊತೆ ಆಟ ಆಡಿದ ಜ್ಯೂನಿಯರ್ ಚಿರು! appeared first on Public TV.

Source: publictv.in

Source link