ಅಬ್ಬಬ್ಬಾ!! ಏನ್ರೀ ಈ ಪುಟಾಣಿ ಹವಾ ಸದ್ಯ ಎಲ್ಲಿ ನೋಡಿದ್ರೂ ಈ ಮಗುವಿನದ್ದೆ ಮಾತು.. ಸೋಶಿಯಲ್ ಮೀಡಿಯಾದಲ್ಲಂತು ಇವಳು ಹವಾ ಕೇಳೊದೆ ಬೇಡ.. ಅಪ್ಪನ ಮೀರಿಸುವಂತಹ ಪಟಾಕಿ.
ಅಯ್ಯೊ ಅಷ್ಟೊಂದು ಸದ್ದು ಮಾಡ್ತಾಯಿರುವ ಆ ಗೊಂಬೆ ಯಾರು..? ಆ ಮುದ್ದು ಹುಡುಗಿಯ ತಂದೆ ಯಾರು ಅನ್ನೋ ಪ್ರಶ್ನೆ ನಿಮಗೆ ಮೂಡಿರೊದು ಸಹಜ.. ಆದ್ರೆ ಕಲವರಿಗೇ ಅವರು ಯಾರು ಅಂತಾ ಗೊತ್ತಾಗಿದೆ.. ಯೆಸ್, ಅವರು ಮತ್ಯಾರು ಅಲ್ಲ ನಟ, ನಿರೂಪಕ ಮಾಸ್ಟರ್ ಆನಂದ್ ಹಾಗೂ ಅವರು ಪುತ್ರಿ ವಂಶಿಕಾ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗ್ತಾಯಿರುವ ನನ್ನಮ್ಮ ಸೂಪರ್ ಸ್ಟಾರ್ ಪ್ರೋಮೋ ಬಂದಿದ್ದೆ ಬಂದಿದ್ದು. ಮನೆ ಮಂದಿಯಲ್ಲ ವಂಶಿಕಾಳ ಮಾತು ಕೇಳಿ ಫುಲ್ ಫಿದಾ.. ಅದರಲ್ಲೂ ಎಪಿಸೋಡ್ ಪ್ರಸಾರವಾದ ಮೇಲಂತು ಈ ಮಗುವಿನ ಅಬ್ಬರ ಸಖತ್ ಜೋರಾಗಿದೆ.
ನಮ್ಮ ವಂಶಿಕಾ ಮಾತಿನ ಮಲ್ಲಿ ಅನ್ನೋದು ತಿಳಿದಿರುವ ವಿಚಾರ. ಆದ್ರೆ ಈ ಪುಟ್ಟ ವಯಸ್ಸಿನಲ್ಲಿಯೇ ಡ್ಯಾನ್ಸ್ ಹಾಡು ಡೈಲಾಗ್ ಉಷ್ ಅಪ್ಪಾ!! ಯಾವುದ್ರಲ್ಲೂ ಕೂಡಾ ಕಮ್ಮಿಯಿಲ್ಲಾ. ವಂಶಿಕಾಳ ಸೋಶಿಯಲ್ ಮೀಡಿಯಾ ಪೇಜ್ ನೋಡಿದ್ರೆ, ಇವಳು ಮಲ್ಟಿ ಟ್ಯಾಲೆಂಟೆಡ್ ಗೊಂಬೆ ಅನ್ನೋದು ಕ್ಲಿಯರ್ ಕಟ್ ಆಗಿ ತಿಳಿಯತ್ತೆ.
ಮುಖ್ಯ ವಿಷಯ ಏನಪ್ಪಾ ಅಂದ್ರೆ.. ನನ್ನಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಶುರುವಾಗಿದ್ದು ಯಾವಾಗ ಹೇಳಿ… ಕಳೆದ ನವೆಂಬರ್ 21 ರಂದು ಬರೀ 15 ಡೇಸ್ನಲ್ಲಿ ನಮ್ ವಂಶಿ 60 ಪ್ಲಸ್ ಬಾರಿಸಿದ್ದಾಳೆ.. ಅಂದ್ರೆ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಸದ್ಯ ವಂಶಿಕಾಗೆ 60 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಆಗಿದ್ದಾರೆ.
ಇನ್ಸ್ಟಾದಲ್ಲಿ ಫಾಲೋವರ್ಸ್ ಜಾಸ್ತಿ ಆಗ್ಲಿ ಅಂತಾ ರೀಲ್ಸ್ ಮಾಡಿಕೊಂಡು ಡೈಲಾಗಿ ಹೇಳಿಕೊಂಡು ಒಂದಿಷ್ಟು ಜನ ಹರಸಾಹಸ ಪಡ್ತಾಯಿದ್ರೆ.. ಬೇಬಿ ವಂಶಿಕಾ.. ಮಾತಿಗೆ ಜನರು ಖುಷಿ ಪಟ್ಟು ಫಾಲೋ ಮಾಡ್ತಾಯಿದ್ದಾರೆ.
ವಂಶಿಕಾ ರೀಲ್ಸ್ ನೋಡಿದ್ರೇ ಎಷ್ಟು ಮುದ್ದು ಅನಿಸುತ್ತೆ.. ಮೆಲೊಡಿ ಸಾಂಗ್ ಆಗ್ಲಿ ಕಪಾಂಗುಚ್ಚಿ ಹಾಡಾಗ್ಲಿ ಎಲ್ಲದಕ್ಕು ಬಿಂದಾಸ್ ಆಗಿ ಸ್ಟೆಪ್ಸ್ ಹಾಕಿದ್ದಾಳೆ. ಇನ್ನೂ ವಂಶಿಕ ಪುಟ್ಟ ಕಂಟದಲ್ಲಿ ಅದ್ಬುತವಾಗಿ ಹಾಡಿದ್ದಾಳೆ. ಆ ಹಾಡನ್ನಾ ಹಾಡಿದಾಗ ಅವ್ಳಿಗೆ ಬರಿ 2 ವರ್ಷವಷ್ಟೇ. ಒಟ್ಟಿನಲ್ಲಿ ಚಿಕ್ಕ ವಯಸ್ಸಿನಲ್ಲಯೆ ಇಷ್ಟು ಫೇಮಸ್ ಆಗಿರುವ ವಂಶಿಕಾನ ನೋಡೀ ಗ್ರೇಟ್ ಅನಿಸುತ್ತೆ.. ಹೀಗೇ ಮುಂದೆ ಕೂಡ ತಂದೆಯಂತೆ ದೊಡ್ಡ ಹೆಸರು ಮಾಡ್ಲಿ ವಂಶಿಕಾ.