ಅಪ್ಪನ ಸ್ಥಿತಿ ಗಂಭೀರವಾಗಿದೆ, ಚಿತ್ರರಂಗ ಸಹಾಯಕ್ಕೆ ಬಂದ್ರೆ ಅನುಕೂಲ ಆಗ್ತಿತ್ತು -ಸತ್ಯಜಿತ್ ಪುತ್ರ ಕಣ್ಣೀರು

ಬೆಂಗಳೂರು: ಹಿರಿಯ ನಟ ಸತ್ಯಜಿತ್ ಅವರ ಆರೋಗ್ಯದ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಈ ಬಗ್ಗೆ ಸತ್ಯಜಿತ್ ಪುತ್ರ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ್ದು, ನಮ್ಮ ತಂದೆ ಅವರಿಗೆ ಐಸಿಯನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅವರಿಗೆ ಹಾರ್ಟ್ ಸ್ಟ್ರೋಕ್, ಲಿವರ್ ಹಾಗೂ ಕಿಡ್ನಿ ಸಮಸ್ಯೆಯಾಗಿದೆ. ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್‌ ಮಾಡಲಾಗ್ತಿದೆ ಎಂದರು.

ಚಿಕಿತ್ಸೆ ನೀಡುತ್ತಿದ್ದರೂ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ, ಸದ್ಯ ನಮ್ಮ ತಂದೆ ಪರಿಸ್ಥಿತಿ ಗಂಭೀರವಾಗಿದೆ. ಫ್ಯಾಮಿಲಿ ಸಮಸ್ಯೆಯಿಂದ ನಮ್ಮ ತಂದೆ ಅವರ ಆರೋಗ್ಯ ಹದಗೆಟ್ಟಿತು. ಈಗ ನಮ್ಮ ತಂದೆ ಅವರ ಆರೋಗ್ಯ ತೀರ ಹದಗೆಟ್ಟಿದೆ. ಇಷ್ಟಾಗಿದ್ದರೂ ನನ್ನ ಅಕ್ಕ ಅವರನ್ನು ನೋಡಲು ಆಸ್ಪತ್ರೆಗೆ ಬಂದಿಲ್ಲ.

ಸರ್ಕಾರ ಮತ್ತು ಚಿತ್ರರಂಗದ ಕಡೆಯಿಂದ ಇದುವರೆಗೂ ಯಾವುದೇ ಸಹಕಾರ ಸಿಕ್ಕಿಲ್ಲ. ಕಲಾವಿದರ ಸಂಘದ ಕಡೆಯಿಂದ ಸಿಗುವ ಇನ್ಶೂರೆನ್ಸ್ ಕೂಡ ಸಿಕ್ಕಿಲ್ಲ. ಈಗಾಲಾದರೂ ಸರ್ಕಾರ ಮತ್ತು ಚಿತ್ರರಂಗದ ಕಡೆಯಿಂದ ಸಹಾಯ ಸಿಕ್ಕಿದ್ರೆ ನಮ್ಮ ತಂದೆಯ ಚಿಕಿತ್ಸೆಗೆ ಸಹಾಯ ಆಗುತ್ತದೆ. ದಯವಿಟ್ಟು ಎಲ್ಲರು ನಮ್ಮ ತಂದೆ ಚೇತರಿಸಿಕೊಳ್ಳುವಂತೆ ಪ್ರಾರ್ಥನೆ ಮಾಡಿ. ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡರು.

News First Live Kannada

Leave a comment

Your email address will not be published. Required fields are marked *