ಬೆಂಗಳೂರು: ಅಪ್ಪಾಜಿ ಸಿಎಂ ಸ್ಥಾನದಿಂದ ನಿರ್ಗಮನದ ವಿಚಾರ ಚರ್ಚೆಯಾಗುತ್ತಿದೆ. ಆದರೆ ಅವರು ಐದು ವರ್ಷ ಪೂರೈಸಬೇಕು. ಸಿಎಂ ಸೀಟಿನಿಂದ ಕೆಳಗೆ ಇಳಿಯಬಾರದು. ಸಿಎಂ ಸ್ಥಾನ ಗಟ್ಟಿಯಾಗಿರಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದತ್ತು ಪುತ್ರ ವಿಶ್ವನಾಥ್ ಬಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಅಪ್ಪಾಜಿಯವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು, ಅವರು ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕೆಂದು ಪ್ರಾರ್ಥಿಸುತ್ತೇನೆ ಎಂದು ಭಾವುಕರಾಗಿ ನುಡಿದರು.

ಮೂಲತಃ ಉತ್ತರ ಕರ್ನಾಟಕ ಮೂಲದ ವಿಶ್ವನಾಥ್ ಬೆಂಗಳೂರಿನಲ್ಲಿ ವಾಸವಾಗಿದ್ದರು. 2010ರಲ್ಲಿ ಬಿಎಸ್‍ವೈ ಸಿಎಂ ಆಗಿದ್ದಾಗ ಮಳೆ ಹಾನಿ ವೀಕ್ಷಿಸಲು ಗಾಳಿ ಅಂಜನೇಯ ದೇಗುಲಕ್ಕೆ ತೆರಳಿದ್ದರು. ಆಗ 11 ವರ್ಷದ ವಿಶ್ವನಾಥ್ ಸಿಎಂ ನೋಡಲು ದೇವಸ್ಥಾನದ ಗೋಡೆ ಎಗರಿ, ಸರ್ಕಸ್ ಮಾಡಿ ಸಿಎಂ ಬಳಿಗೆ ಬಂದಿದ್ದರು.

ಈ ವೇಳೆ ಪುಟ್ಟ ಹುಡುಗನನ್ನು ನೋಡಿದ ಬಿಎಸ್‍ವೈ ಖುಷಿ ಪಟ್ಟು, ನಿನ್ನನ್ನು ನಾನು ದತ್ತು ಪಡೆದು, ವಿದ್ಯಾಭ್ಯಾಸ ನೋಡಿಕೊಳ್ಳುತ್ತೇನೆ ಎಂದು ವಿಶ್ವನಾಥ್ ಗೆ ಭರವಸೆ ಕೊಟ್ಟಿದ್ದರು. ಅಷ್ಟೇ ಅಲ್ಲ ವಿಶ್ವನಾಥ್ ಗೆ ಈಗ ಕೆಆರ್‍ಡಿಎಲ್ ನಲ್ಲಿ ಡಿ ಗ್ರೂಪ್ ನೌಕರ ಹುದ್ದೆಯನ್ನು ಕೂಡ ಕೊಡಿಸಿದ್ದಾರೆ. ಈಗ ಸಿಎಂ ಬದಲಾವಣೆಯ ಬಗ್ಗೆ ಚರ್ಚೆಯಾಗುತ್ತಿರುವ ವಿಚಾರಕ್ಕೆ ಸಿಎಂ ದತ್ತು ಪುತ್ರ ಬೇಸರ ವ್ಯಕ್ತಪಡಿಸಿದ್ದಾರೆ.

The post ಅಪ್ಪಾಜಿಯ ಸಿಎಂ ಸ್ಥಾನ ಗಟ್ಟಿಯಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವೆ: ಬಿಎಸ್‍ವೈ ದತ್ತು ಪುತ್ರ ವಿಶ್ವನಾಥ್ appeared first on Public TV.

Source: publictv.in

Source link