ಅಪ್ಪು ನಮ್ಮನ್ನ ಅಗಲಿ ಇಂದಿಗೆ ಸರಿಯಾಗಿ ಒಂದು ತಿಂಗಳು ಕಳೆದಿದೆ. ಆದರೆ ”ಅಪ್ಪು” ನೆನೆಪು ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅಭಿಮಾನಿಗಳ ಮನ- ಮಾನಸದಲ್ಲಿ ಅವಿತು ಕೂತಿರಿವ ”ಅಪ್ಪು” ಇನ್ನು ನೆನಪು ಮಾತ್ರ. ಆದರು ಅವರ ಅಸಂಖ್ಯಾತ ಅಭಿಮಾನಿಗಳು, ಕುಟುಂಬಸ್ಥರು ವಾಸ್ತವ ಅರಿತುಕೊಂಡು ನಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ.
ಇದನ್ನೂ ಓದಿ:ನನಗೆ ಅಪ್ಪು ಜತೆ ಕಳೆದ ಕ್ಷಣಗಳು ‘ಪರಮಾತ್ಮ’ನೊಂದಿಗೆ ಕಳೆದಂಗೆ ಭಾಸವಾಗುತ್ತಿದೆ-ರಾಘಣ್ಣ
ಆದರೆ ಅವರು ದಿಢೀರ್ನೆ ನಮ್ಮನ್ನಗಲಿ ಹೋದದ್ದು ಮಾತ್ರ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ವಿಚಾರವಾಗಿ ರಾಘಣ್ಣ ಮತ್ತೆ ಭಾವುಕಾರಾಗಿದ್ದಾರೆ. ಅಪ್ಪು ಬಳಿ ಹಣ ಇತ್ತು, ಅಂತಸ್ತು ಇತ್ತು, ಬೆಲೆಬಾಳುವ ಐಶಾರಾಮಿ ಕಾರಗಳಿದ್ದವು. ಮನೆಯಲ್ಲಿ ಸಾಕಷ್ಟು ಜನ ಇದ್ದರು. ಆದರೆ ಅವನ ಬಳಿ 5 ನಿಮಿಷ ಸಮಯ ಇರಲಿಲ್ಲ.
ಅವನಿಗೆ ಜೀವನದಲ್ಲಿ ಎಲ್ಲವನ್ನು ಕೊಟ್ಟ ಭಗವಂತ ಇನ್ನೊಂದೈದು ನಿಮಿಷ ಹೆಚ್ಚಿಗೆ ಕೊಟ್ಟಿದ್ದರೆ ಇಂದು ಅಪ್ಪು ಇಂದು ನಮ್ಮೊಂದಿಗೆ ಇರುತ್ತಿದ್ದನೇನೋ ಎಂದು ರಾಘಣ್ಣ ಪುನೀತ್ ನೆನೆದು ಭಾವುಕರಾಗಿದ್ದಾರೆ.
ಇದನ್ನೂ ಓದಿ:‘ನನ್ನ ತಮ್ಮ ಮೃತ್ಯುಂಜಯ, ಮೃತ್ಯು ಬಳಿಕ ಅಪ್ಪು ಜಯವನ್ನು ನೋಡುತ್ತಿದ್ದೇನೆ’- ರಾಘಣ್ಣ