ಪುನೀತ್ ರಾಜ್ಕುಮಾರ್ ಅವರ ಅಗಲಿಕೆ ಕನ್ನಡ ಚಿತ್ರರಂಗ, ಅಭಿಮಾನಿಗಳು, ಡಾ.ರಾಜ್ ಕುಟುಂಬಸ್ಥರು ಮಾತ್ರವಲ್ಲದೇ ಭಾರತ ಸಿನಿರಂಗಕ್ಕೆ ಬಹುದೊಡ್ಡ ಶಾಕ್ ನೀಡಿತ್ತು. ಸಿನಿಮಾ ರಂಗದ ಹಲವು ಸ್ಟಾರ್ ನಟರು, ಕಲಾವಿದರು ಪುನೀತ್ ನಿಧನಕ್ಕೆ ಸಂತಪ ಸೂಚಿಸಿ ನಮನ ಸಲ್ಲಿಸಿದ್ದರು. ಸದ್ಯ ತಮಿಳು ನಟ ವಿಶಾಲ್ ಕೃಷ್ಣ ರೆಡ್ಡಿ ಅವರು ಗಿಡ ನೆಟ್ಟು ಪುನೀತ್ ಅವರಿಗೆ ನಮನ ಸಲ್ಲಿಕೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ವಿಶಾಲ್, ಪುನೀತ್ ನಿರ್ವಹಿಸುತ್ತಿದ್ದ ಹೆಣ್ಣು ಮಕ್ಕಳ ಶಿಕ್ಷಣದ ಕಾರ್ಯವನ್ನು ತಾವು ಮುಂದುವರಿಸುವುದಾಗಿ ಹೇಳಿದ್ದರು. ವಿಶಾಲ್ ಅವರ ಈ ಕಾರ್ಯಕ್ಕೆ ಕನ್ನಡಿಗರಾಗಿರುವ ಅವರ ತಂದೆ ಜೆ.ಕೆ ರೆಡ್ಡಿ ಕೂಡ ಸಹಕಾರ ನೀಡೋದಾಗಿ ತಿಳಿಸಿದ್ದರು.
Happy to be part of the #GreenIndiaChallenge
Let’s plant as many #Trees as possible, GB pic.twitter.com/CYNEr5XtLt
— Vishal (@VishalKOfficial) November 1, 2021
ಇದನ್ನೂ ಓದಿ: ವಿಕ್ರಂ ಆಸ್ಪತ್ರೆಗೆ ರೆಫರ್ ಮಾಡಿದ್ದೇ ತಪ್ಪಾಯ್ತಾ?..ಏನಂದ್ರು ಶಿವಣ್ಣ
ಈ ನಡುವೆ ತಮ್ಮ ‘ಎನಿಮಿ’ ಸಿನಿಮಾದ ಪ್ರಚಾರದಲ್ಲಿ ತೊಡಗಿರೋ ವಿಶಾಲ್, ಹೈದರಾಬಾದ್ನಲ್ಲಿ ಗಿಡ ನೆಟ್ಟು ನಮನ ಸಲ್ಲಿಕೆ ಮಾಡಿದ್ದರು. ಈ ಕುರಿತು ಟ್ವೀಟ್ ಮಾಡಿರೋ ವಿಶಾಲ್, ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನದಲ್ಲಿ ಭಾಗಿಯಾಗಲು ಸಂತಸವಾಗಿದೆ. ಎಷ್ಟು ಸಾಧ್ಯವೇ ಅಷ್ಟು ಗಿಡಗಳನ್ನು ಬೆಳೆಸಿ ಎಂದು ಮನವಿ ಮಾಡಿದ್ದರು. ರಾಜ್ಯ ಸಭಾ ಸದಸ್ಯರಾಗಿರುವ ತೆಲಂಗಾಣದ ಸಂತೋಷ್ ಕುಮಾರ್ ಅವರು ಗ್ರೀನ್ ಇಂಡಿಯಾ ಚಾಲೆಂಜ್ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಇದನ್ನೂ ಓದಿ: ಪುನೀತ್ ನೋಡಿಕೊಳ್ಳುತ್ತಿದ್ದ ಮಕ್ಕಳ ವಿದ್ಯಾಭ್ಯಾಸ ನೋಡಿಕೊಳ್ತೀನಿ ಎಂದ ಮಗನ ಬಗ್ಗೆ ಹೆಮ್ಮೆ-ವಿಶಾಲ್ ತಂದೆ
ಈ ವೇಳೆ ಮಾತನಾಡಿದ ವಿಶಾಲ್, ಸಮಾಜಕ್ಕೆ ಹಸಿರು ಅತ್ಯಗತ್ಯವಾಗಿದೆ. ಅರಣ್ಯ ಪ್ರದೇಶವನ್ನು ಹೆಚ್ಚು ಮಾಡುವ ಕಾರ್ಯ ಮಾಡಬೇಕಿದೆ. ಈ ಅಭಿಯಾನದಲ್ಲಿ ಭಾಗಿಯಾಗಲು ಅವಕಾಶ ನೀಡಿದಕ್ಕೆ ಧನ್ಯವಾದ. ಪ್ರತಿ ಭಾರೀ ಈ ಕಡೆ ಬಂದರೇ ಖಂಡಿತ ನಾನು ನೆಟ್ಟಿರುವ ಮರದ ಬಳಿ ಬಂದು ಹೋಗುತ್ತೇನೆ. ಏಕೆಂದರೆ ಮರಕ್ಕೆ ಪುನೀತ್ ರಾಜ್ಕುಮಾರ್ ಅವರ ಹೆಸರಿಟ್ಟಿದ್ದೇನೆ. ಆದ್ದರಿಂದ ಏನೋ ನಾಟಿ ಮಾಡಿದ್ದೀನಿ, ಹೊರಟು ಹೋದೆ ಅಂತ ಮರೆತು ಹೋಗದೆ ನಾಟಿ ಮಾಡಿರೋ ಸಸಿಯನ್ನು ಮರವನ್ನಾಗಿ ಮಾಡುವ ಕಾರ್ಯ ಮಾಡುತ್ತೇವೆ ಎಂದು ವಿಶಾಲ್ ಹೇಳಿದ್ದಾರೆ.
ಇದನ್ನೂ ಓದಿ: ‘ಅಪ್ಪು ಆತ್ಮಕ್ಕೆ ಶಾಂತಿ ಸಿಗಲಿ ಅಂತ 1,800 ವಿದ್ಯಾರ್ಥಿಗಳ ಜವಾಬ್ದಾರಿ ತೆಗೆದುಕೊಂಡಿದ್ದೇನೆ’ ವಿಶಾಲ್ ಮಾತು
ಮರೆಯಾದ ಯುವರತ್ನ: ಅಪ್ಪುಗೆ ನ್ಯೂಸ್ಫಸ್ಟ್ ಗೀತ ನಮನ
https://www.youtube.com/watch?v=4bxvqcmZw4o