ಬೆಂಗಳೂರು: ಅಗಲಿದ ನಟ ಪುನೀತ್ ರಾಜ್ಕುಮಾರ್ ನೆನೆದು ಸಿಎಂ ಬಸವರಾಜ ಬೊಮ್ಮಾಯಿ ಮತ್ತೆ ಭಾವುಕರಾಗಿದ್ದಾರೆ.
ಶ್ರೀಮುರುಳಿ ನಟನೆಯ ‘ಮದಗಜ’ ಟ್ರೈಲರ್ ರಿಲೀಸ್ ಇವೆಂಟ್ನಲ್ಲಿ ಭಾಗವಹಿಸಿದ್ದ ಅವರು, ಮಾತನಾಡುವ ವೇಳೆ ಭಾವುಕರಾಗಿದ್ದಾರೆ. ಒಬ್ಬ ವ್ಯಕ್ತಿಗೆ ವಯಸ್ಸು ಮುಖ್ಯ ಅಲ್ಲ. ಅವರ ಸಾಧನೆ ಮುಖ್ಯ. ಅದನ್ನ ಅಪ್ಪು ಮಾಡಿದ್ದಾರೆ. ಬಹಳಷ್ಟು ಸಾಧಕರು ಸಣ್ಣ ವಯಸ್ಸಿನಲ್ಲಿ ಕಾಲವಾಗಿದ್ದಾರೆ. ಆದ್ರೆ ಹೆಜ್ಜೆ ಗುರುತು ಬಿಟ್ಟು ಹೋಗಿದ್ದಾರೆ. ಎಲ್ಲಿಯವರೆಗೂ ಕನ್ನಡದ ಹೃದಯ ಮಿಡಿಯುತ್ತದೋ ಅಲ್ಲಿಯವರೆಗೂ ಅಪ್ಪು ಜೀವಂತವಾಗಿರುತ್ತಾರೆ ಎಂದರು.
ಅಪ್ಪು ಅಗಲುವ ಮುನ್ನ ಎರಡು ದಿನ ಮುಂಚೆ ಫೋನ್ನಲ್ಲಿ ಮಾತನಾಡಿದ್ದರು. ಟೂರಿಸಂ ಬಗ್ಗೆ ಒಂದು ವೆಬ್ ಸೈಟ್ ಮಾಡಿದ್ದೀನಿ, ಅದನ್ನ ನೀವೇ ಬಿಡುಗಡೆ ಮಾಡಬೇಕು ಎಂದಿದ್ದರು. ಮುಂದಿನ ತಿಂಗಳು ನವೆಂಬರ್ 1 ರಂದು ರಿಲೀಸ್ ಆಗಬೇಕಿತ್ತು. ಹೀಗಾಗಿ ನಾನು ಅವರಿಗೆ ಅಪಾಯಿಂಟ್ಮೆಂಟ್ ಕೊಟ್ಟಿದ್ದೆ. ಆದ್ರೆ ದೇವರು ಆತನಿಗೆ ನನಗಿಂತ ಮೊದಲೇ ಅಪಾಯಿಂಟ್ಮೆಂಟ್ ಕೊಟ್ಬಿಟ್ಟ. ದುರದೃಷ್ಟವಶಾತ್ ಇಂದು ಅಪ್ಪು ಎಲ್ಲರನ್ನು ಬಿಟ್ಟು ಹೋಗಿದ್ದಾರೆ ಅಂತ ಭಾವುಕರಾಗಿ ಮಾತ್ನಾಡಿದ್ರು.