ಅಪ್ಪುನ ತುಂಬಾ ಮಿಸ್​ ಮಾಡ್ಕೊತಿದೀನಿ.. ಮತ್ತೆ ಮತ್ತೆ ನೆನೆದು ಕಣ್ಣೀರಿಟ್ಟ ಶಿವಣ್ಣ


ದುನಿಯಾ ವಿಜಿ ಅಭಿನಯದ ‘ಸಲಗ’ ಸಿನಿಮಾ ಸೂಪರ್​ ಹಿಟ್ ಆದ ಹಿನ್ನಲ್ಲೆಯಲ್ಲಿ ಸಲಗ ಚಿತ್ರತಂಡ ನಿನ್ನೆ ಚಿತ್ರದ ಸಕ್ಸಸ್ ಮೀಟ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿಶೇಷ ಅಂದ್ರೆ ಕಾರ್ಯಕ್ರಮಕ್ಕೆ ಶಿವಣ್ಣ , ಗೋಲ್ಡನ್​ ಸ್ಟಾರ್​ ಗಣೇಶ್​ , ಲವ್ಲಿ ಸ್ಟಾರ್​ ಪ್ರೇಮ್, ಶ್ರೀನಗರ ಕಿಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ವೇಳೆ ವೇದಿಕೆ ಮೇಲೆ ಮಾತನಾಡುವಾಗ ಶಿವಣ್ಣ ಅವರು ಪುನೀತ್​ ಅವರನ್ನು ನೆನದು ನಾನು ಅಪ್ಪುನ ತುಂಬಾನೇ ಮಿಸ್​ ಮಾಡ್ಕೊತಿದ್ದೀನಿ ಅಂತ ಹೇಳಿದ್ದಾರೆ. ಕಳೆದ ಬಾರಿ ಸಲಗ ಚಿತ್ರದ ಪ್ರೀ ರಿಲೀಸ್​ ಇವೆಂಟ್​ಗೆ ಅಪ್ಪು ಕೂಡ ಇದ್ದರು. ಆ ಇವೆಂಟ್​ ಅನ್ನು ನಾನು ಯಾವತ್ತು ಮರೆಯೊಲ್ಲ. ಅಪ್ಪು ಬಗ್ಗೆ ಮಾತನಾಡುವಾಗೆಲ್ಲ ತುಂಬ ನೋವಾಗುತ್ತೆ .

ಮೊನ್ನೆ ಜೇಮ್ಸ್​ ಡಬ್​ ಮಾಡ್ಬೇಕಾದ್ರು ಆಷ್ಟೇ ತುಂಬ ನೆನಪಾದ್ರು. ನಾನು ಜೇಮ್ಸ್​ ಸಿನಿಮಾಗೆ ಹೇಗ್​ ಡಬ್​ ಮಾಡಿದೆ ಅಂತ ನನಗೆ ಗೊತ್ತಿಲ್ಲ . ಅ ದೇವರೇ ನನಗೆ ಶಕ್ತಿ ಕೊಟ್ಟಿದ್ದು ಅನಿಸುತ್ತೆ. ಆದ್ರೆ ಎಲ್ಲರ ಹೃದಯದಲ್ಲೂ ಅಪ್ಪು ಇದ್ದಾರೆ. ಈ ಸಂಭ್ರಮದಲ್ಲೂ ಅಪ್ಪು ಇದ್ದಾರೆ ಅಂತ ಶಿವಣ್ಣ ಭಾವುಕರಾಗಿದ್ದಾರೆ.

News First Live Kannada


Leave a Reply

Your email address will not be published.