ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇನ್ನಿಲ್ಲ ಎಂಬ ಸುದ್ದಿಯನ್ನು ಯಾರಿಂದಲೂ ನಂಬಲು ಸಾಧ್ಯವಿಲ್ಲ. ಇಂದಿಗೂ ಪುನೀತ್ ರಾಜ್ಕುಮಾರ್ ಸಮಾಧಿ ನೋಡಲು ರಾಜ್ಯದ ವಿವಿಧ ಮೂಲೆಗಳಿಂದ ಸಾಕಷ್ಟು ಮಂದಿ ಬೆಂಗಳೂರಿಗೆ ಬರುತ್ತಲೇ ಇದ್ದಾರೆ. ಹಲವು ಸಿನಿಮಾಗಳು ಅಪ್ಪುಗಾಗಿ ಅರ್ಪಣೆ ಮಾಡಲಾಗುತ್ತಿದೆ. ಈಗ ಅಪ್ಪು ಅಗಲಿಕೆ ನೋವಲ್ಲಿ ಆಶಿಕಾ ರಂಗನಾಥ್ ಕಣ್ಣೀರಿಟ್ಟಿದ್ದಾರೆ.
ನ್ಯೂಸ್ಫಸ್ಟ್ ಜತೆ ಮಾತಾಡಿದ ಆಶಿಕಾ ರಂಗನಾಥ್, ನಾನು ಪವರ್ ಸ್ಟಾರ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡೋ ಅವಕಾಶ ಕಳೆದುಕೊಂಡೆ. ಪುನೀತ್ ಸಾರ್ ಜತೆ ಕಾಲ ಕಳೆಯುವ ಆಸೆ ಕನಸಾಗಿಯೇ ಉಳಿದಿದೆ. ಇದುವರೆಗೂ ಅಪ್ಪು ಸಾರ್ ಅವರನ್ನು ಒಮ್ಮೆಯೂ ಭೇಟಿ ಮಾಡಿಲ್ಲ ಎಂದು ಗಳಗಳನೇ ಅತ್ತಿದ್ದಾರೆ. ದ್ವಿತ್ವ ಚಿತ್ರದಲ್ಲಿ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡಲು ಉತ್ಸುಕರಾಗಿದ್ದರು ಅಶಿಕಾ.