ಅಪ್ಪು​​ ನುಡಿ ನಮನ: ಯಾವ್ಯಾವ ಸ್ಟಾರ್ಸ್​​ ಬರಲಿದ್ದಾರೆ ಎಂಬ ಮಾಹಿತಿ ನೀಡಿದ ಸಾರಾ ಗೋವಿಂದು


ಸ್ಯಾಂಡಲ್​​ವುಡ್​​​ ನಟ ಪುನೀತ್​​ ರಾಜ್​​ಕುಮಾರ್​​ ನುಡಿ ನಮನ ಇನ್ನೇನು ಶುರುವಾಗಲಿದೆ. ನಗರದ ಗಾಯತ್ರಿ ವಿಹಾರ್​ ಮೈದಾನದ ಮಂಟಪದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕಾಲಿವುಡ್​​, ಬಾಲಿವುಡ್​​​, ಟಾಲಿವುಡ್​​ ಗಣ್ಯರ ದಂಡೇ ಆಗಮಿಸಿದೆ. ಈ ಸಂಬಂಧ ಮಾತಾಡಿದ ಕಾರ್ಯಕ್ರಮದ ರೂವಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಮತ್ತು ಚಿತ್ರ ನಿರ್ಮಾಪಕ ಸಾ.ರಾ. ಗೋವಿಂದು ಅವರು, ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತೆ ಎಂದರು.

ನಾಗೇಂದ್ರ ಪ್ರಸಾದ್​ ಹಾಡಿನ ಮೂಲಕ ಚಾಲನೆಯಾಗುತ್ತೆ. ಮೈಸೂರಿನ ಶಕ್ತಿಧಾಮದ ಮಕ್ಕಳು ಹಾಡು ಹಾಡುತ್ತಾರೆ. ಒಟ್ಟು 3 ಗಂಟೆಗಳ ಕಾಲ ಕಾರ್ಯಕ್ರಮ ನಡೆಸಲಾಗುತ್ತೆ. ತಮಿಳು ನಟ ವಿಶಾಲ್​, ತೆಲುಗು ನಟರಾದ ಜಗಪತಿ ಬಾಬು, ಶ್ರೀಕಾಂತ್​, ಅಲಿ ​​ಭಾಗಿಯಾಗಲಿದ್ದಾರೆ ಎಂದರು.

ಇದನ್ನೂ ಓದಿ: ರಾಘಣ್ಣನ ಪ್ರೀತಿಯಿಂದ ತಬ್ಬಿ ಸಂತೈಸಿದ ಬಹುಭಾಷಾ ನಟ ಪ್ರಕಾಶ್​​ ರೈ

The post ಅಪ್ಪು​​ ನುಡಿ ನಮನ: ಯಾವ್ಯಾವ ಸ್ಟಾರ್ಸ್​​ ಬರಲಿದ್ದಾರೆ ಎಂಬ ಮಾಹಿತಿ ನೀಡಿದ ಸಾರಾ ಗೋವಿಂದು appeared first on News First Kannada.

News First Live Kannada


Leave a Reply

Your email address will not be published. Required fields are marked *