ಅಪ್ಪು​ ಜತೆಗಿನ ಕೊನೆಯ ಭೇಟಿ ಬಗ್ಗೆ ‘ಪುನೀತ ನಮನ’ ವೇದಿಕೆಯಲ್ಲಿ ಜಗ್ಗೇಶ್​ ಹೇಳಿದ್ದೇನು? | Actor Jaggesh talks about Puneeth Rajkumar in Puneetha Namana program in Bengaluru


‘ಪುನೀತ ನಮನ’ (Puneeth Namana) ಕಾರ್ಯಕ್ರಮದಲ್ಲಿ ನಟ ಜಗ್ಗೇಶ್​ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಂಗಳವಾರ (ನ.16) ನಡೆದ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ (Puneeth Rajkumar) ಬಗ್ಗೆ ಜಗ್ಗೇಶ್​ (Jaggesh) ಭಾವುಕವಾಗಿ ಮಾತನಾಡಿದ್ದಾರೆ. ‘ನಿರ್ದೇಶಕ ಸಂತೋಷ್​ ಆನಂದ್​ರಾಮ್​ ನನಗಾಗಿ ಒಂದು ಸ್ಕ್ರಿಪ್ಟ್​ ಸಿದ್ಧ ಪಡಿಸಿದ್ದಾಗ ಆ ಕಥೆಯನ್ನು ತನಗೂ ಹೇಳಬೇಕು ಅಂತ ಪುನೀತ್​ ಕೇಳಿದ್ದ. ಆತನಿಗೆ ಇದೆಲ್ಲ ಅವಶ್ಯಕತೆಯೇ ಇರಲಿಲ್ಲ. ಆದರೂ ನಮ್ಮ ಜೊತೆ ಕೂತು ಕಥೆ ಕೇಳಿದ್ದ. ಅಂಥ ಸುಂದರ ವ್ಯಕ್ತಿತ್ವ ಅವನದ್ದು. ನಿಧನರಾಗುವುದಕ್ಕೂ 5 ದಿನ ಮುಂಚೆ ಕೂಡ ಸಿಕ್ಕಿದ್ದ. ನಾನು ಮಾಡುವ ತಮಾಷೆಯನ್ನೆಲ್ಲ ಹೇಳಿಕೊಂಡು ನಗುತ್ತಿದ್ದ. ಒಂದೂವರೆ ನಿಮಿಷ ಟಾಟಾ ಮಾಡುತ್ತ, ಮಗುವಂತೆ ನಗುತ್ತಾ ಹೋದ’ ಎಂದು ಕೊನೆ ಬಾರಿ ಪುನೀತ್​ ಅವರನ್ನು ನೋಡಿದ ಕ್ಷಣವನ್ನು ಜಗ್ಗೇಶ್​ ನೆನಪಿಸಿಕೊಂಡು ಭಾವುಕರಾದರು. 

ಇದನ್ನೂ ಓದಿ:

‘ಶಿವಣ್ಣ ಮತ್ತು ನಾನು ಮುಖ ನೋಡಿಕೊಂಡ್ರೆ ನಾಚಿಕೆ ಆಗತ್ತೆ​’: ನೋವಿನಲ್ಲಿ ಕಣ್ಣೀರು ಹಾಕಿದ ರಾಘಣ್ಣ

Puneetha Namana: ‘​ನಾನು ಮನೆ ಖರೀದಿಗಾಗಿ ಇಟ್ಟುಕೊಂಡ ಹಣದಲ್ಲಿ ಈ ಸಹಾಯ ಮಾಡ್ತೀನಿ’: ವಿಶಾಲ್

TV9 Kannada


Leave a Reply

Your email address will not be published. Required fields are marked *