ದೊಡ್ಮನೆ ಕುಟುಂಬ ಮತ್ತು ರೆಬಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದ ನಡುವೆ ಉತ್ತಮ ಒಡನಾಟವಿತ್ತು. ರಾಜ್ಕುಮಾರ್ ಅವರ ಚಿತ್ರದಲ್ಲಿ ಸುಮಲತಾ ಆಭಿನಯಿಸುತ್ತಿದ್ದಾಗ 4 ವರ್ಷದ ಅಪ್ಪು ಶೂಟಿಂಗ್ ಸೆಟ್ಗೆ ಬಂದು ನನ್ನ ಜೊತೆ ಆತ್ಮೀಯವಾಗಿರುತ್ತಿದ್ರು. ಅಲ್ಲದೇ ಕಣ್ಣಮುಚ್ಚಾಲೇ ಆಟವಾಡುತ್ತಿದ್ರು ಅಂತಾ ಸುಮಲತಾ ಹೇಳಿಕೊಂಡಿದ್ದಾರೆ. ಇನ್ನು ಚಿಕ್ಕ ವಯಸಿನಲ್ಲಿ ನಾನು ಸುಮಲತಾ ಅವರನ್ನೇ ಮದುವೆಯಾಗುತ್ತಿನಿ ಅಂತ ಪುನೀತ್ ಹೇಳುತ್ತಿದ್ದ ಎಂಬುದನ್ನೂ ಅವರ ಸ್ಮರಿಸಿಕೊಂಡಿದ್ದಾರೆ.
ಅಪ್ಪು ನಟನೆಯ ‘ದೊಡ್ಮನೆ ಹುಡುಗ’ ಚಿತ್ರದಲ್ಲಿ ಅಂಬಿ ಮತ್ತು ಸುಮಲತಾ ಪುನೀತ್ ಅವರ ಜೊತೆ ಅಭಿನಯಿಸಿದ್ರು. ಇದೀಗ ಸುಮಲತಾ ಅವರು ‘ದೊಡ್ಮನೆ ಹುಡುಗ’ ಚಿತ್ರದ ಪ್ರಮೋಷನ್ ಇವೆಂಟ್ ವೇಳೆ ಪುನೀತ್ ಮತ್ತು ಅಂಬಿ ಒಟ್ಟಿಗೆ ಸೆಲ್ಫಿ ಕ್ಲಿಕಿಸಿಕೊಂಡ ಪೋಟೋವನ್ನು ಹಂಚಿಕೊಂಡು ” ಅಪ್ಪು -ಅಂಬಿ ನೀವಿಬ್ಬರೂ ನಮ್ಮ ಜೊತೆಗಿಲ್ಲ ಎಂಬದನ್ನು ಒಪ್ಪಿಕೊಳ್ಳಲು ನನ್ನ ಹೃದಯದಿಂದ ಸಾಧ್ಯವಾಗುತ್ತಿಲ್ಲ” ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.
View this post on Instagram
The post ಅಪ್ಪು, ಅಂಬಿ ಒಡನಾಟದ ಭಾವುಕ ಕ್ಷಣಗಳನ್ನ ನೆನಪಿಸಿಕೊಂಡ ಸಂಸದೆ ಸುಮಲತಾ appeared first on News First Kannada.