ಅಭಿಮಾನಿಗಳು ನಮ್ಮನೆ ದೇವರು ನಿರ್ಮಾಪಕರು ನಮಗೆ ಅನ್ನದಾತರು ಎಂದು ಹೇಳಿದ ಅಣ್ಣಾವ್ರು ಅಭಿಮಾನಿಗಳ ಪಾಲಿಗೆ ದೇವರಾದ್ರು.. ಅಣ್ಣಾವ್ರ ಹಾದಿಯಲ್ಲೇ ಸಾಗಿದ ಅಣ್ಣಾವ್ರ ಮಕ್ಕಳನ್ನ ಇಂದಿಗೂ ಅಭಿಮಾನಿ ದೇವರುಗಳ ಹೃದಯದಲ್ಲಿಟ್ಟು ಪೂಜಿಸ್ತಾರೆ.. ಜೊತೆಗೆ ನಿರ್ಮಾಪಕರಿಗೆ ಕೈ ಮುಗಿದು ಅನ್ನದಾತ ಸುಖಿಭವೋ ಅಂತಾರೆ ಜೊತೆಗೆ ನಿರ್ದೇಶಕರಿಗೆ ಶರಣಾಗ್ತಾರೆ.
ಅದ್ರೆ ಈಗ್ಯಾಕೆ ಈ ವಿಷ್ಯ ಅಂದ್ರೆ ಮಗನಿಗಿಂತ ಹೆಚ್ಚಾಗಿದ್ದ ತಮ್ಮನ ಕಳೆದುಕೊಂಡು, ನೋವಲ್ಲಿರುವ ಶಿವಣ್ಣ , ನೋವಲ್ಲೂ ಸಿನಿಮಾ ಕಾಯಕದ ಕಡೆ ಮುಖ ಮಾಡಿದ್ದಾರೆ.. ತಮ್ಮನ ಪುಣ್ಯ ಸ್ಮರಣೆ ಮುಗಿದ ಕೂಡಲೇ ಭಜರಂಗಿ -2 ನಿರ್ಮಾಪಕರ ಕೈ ಹಿಡಿದಿದ್ದ ಶಿವಣ್ಣ.. ತನಗಾಗಿ ಕಥೆ ಬರೆದು, ಸಿನಿಮಾ ಕನಸ್ಸಲ್ಲಿದ್ದ ನಿರ್ದೇಶಕ ಎ. ಹರ್ಷ ಜೊತೆಗೆ ನಿಂತಿದ್ದಾರೆ.
ಒಂದು ಗಾದೆ ಮಾತಿದೆ.. ನೂಲಿನಂತೆ ಸೀರೆ ತಾಯಿಯಂತೆ ಮಕ್ಕಳು.. ಈ ಮಾತು ಅಣ್ಣಾವ್ರ ಮಕ್ಕಳಿಗೆ ಒಪ್ಪುತ್ತೆ.. ಯಾಕಂದ್ರೆ ಅಣ್ಣಾವ್ರು ಯಾವತ್ತು ನಿರ್ಮಾಪಕರು, ನಿರ್ದೇಶಕರಿಗೆ ತೊಂದರೆ ಕೊಟ್ಟವರಲ್ಲ.. ಅಣ್ಣಾವ್ರಂತೆ ಅವರ ಮಕ್ಕಳು ನಾವು ಸ್ಟಾರ್ಗಳೆಂಬ ಅಹಂನಲ್ಲಿ ಎಂದಿಗೂ ನಿರ್ಮಾಪಕರು, ನಿರ್ದೇಶಕರಿಗೆ ತೊಂದರೆ ಕೊಟ್ಟಿಲ್ಲ..ಅದಕ್ಕೆ ತಾಜಾ ಉದಾಹರಣೆ ಶಿವಣ್ಣ ಅಭಿನಯದ ಭಜರಂಗಿ-2 ರಿಲೀಸ್ ದಿನ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನಗಲಿದ್ರು.. ತಮ್ಮನ ಅಗಲಿಕೆಯ ನೋವಲ್ಲೂ ಶಿವಣ್ಣ ತಮ್ಮನ ಪುಣ್ಯಸ್ಮರಣೆ ಕಾರ್ಯ ಮುಗಿಸಿ. ಭಜರಂಗಿ 2 ಪ್ರಚಾರಕ್ಕೆ ಇಳಿದು ನಿರ್ಮಾಪಕರ ನೆರವಿಗೆ ನಿಂತಿದ್ದಾರೆ.
ಶಿವಣ್ಣ ಎಂದೂ ನಿರ್ಮಾಪಕ ಹಾಗೂ ನಿರ್ದೇಶಕರಿಗೆ ಕಿರಿಕಿರಿ ಉಂಟು ಮಾಡಿದವರಲ್ಲ. ಅಣ್ಣಾವ್ರಂತೆ ಸಿನಿಮಾಗಾಗೆ ಬದುಕನ್ನ ಮುಡುಪಿಟ್ಟಿರುವ ಅವರು, ತಮ್ಮನ ಅಗಲಿಕೆಯ ನೋವಲ್ಲೂ, ಸಿನಿಮಾಗಾಗಿ ಮಗುವಿನಂತೆ ನಿರ್ದೇಶಕ ಎ. ಹರ್ಷ ಜೊತೆ ನಿಂತಿದ್ದಾರೆ.. ಹೌದು ಭಜರಂಗಿ 2 ರಿಲೀಸ್ ಆದ ಕೆಲವೇ ದಿನಗಳಲ್ಲಿ ಶಿವಣ್ಣನ 125ನೇ ಚಿತ್ರ ‘ವೇದ’ ಚಿತ್ರದ ಶೂಟಿಂಗ್ ಶುರುವಾಗ ಬೇಕಿತ್ತು.. ಶಿವಣ್ಣನ ಬ್ಯಾನರ್ನಲ್ಲೇ ಬರ್ತಿರುವ ‘ವೇದ’ ಚಿತ್ರದ ಆರಂಭಕ್ಕೆ ನಿರ್ದೇಶಕ ಎ. ಹರ್ಷ ಎಲ್ಲಾ ತಯಾರಿ ಮಾಡಿಕೊಂಡಿದ್ರು. ಅದ್ರೆ ವಿಧಿಯಾಟವೇ ಬೇರೆ ಆಗಿತ್ತು.. ಭಜರಂಗಿ 2 ರಿಲೀಸ್ ದಿನವೇ ಶಿವಣ್ಣ ನೆಚ್ಚಿನ ತಮ್ಮನನ್ನು ಕಳೆದು ಕೊಂಡು ಕಣ್ಣೀರಲ್ಲೇ ಕೈ ತೊಳೆಯುವಂತಾಯ್ತು..
ಅದರೆ ನನ್ನಿಂದ ಯಾರಿಗೂ ಸಮಸ್ಯೆ ಆಗಬಾರದು ಎಂದು ಶಿವಣ್ಣ ತನ್ನ ನೋವನ್ನು ನುಂಗಿ ಈಗ ‘ವೇದ’ ಚಿತ್ರದ ಆರಂಭಕ್ಕೆ ಅಸ್ತು ಅಂದಿದ್ದಾರೆ.. ಯೆಸ್ ಇದೇ ತಿಂಗಳ 22ಕ್ಕೆ ‘ವೇದ’ಚಿತ್ರದ ಮುಹೂರ್ತ ನೇರವೇರಲಿದೆ.ಅಲ್ಲದೆ ಅಂದಿನಿಂದಲೇ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಲು ಶಿವಣ್ಣ ಗ್ರೀನ್ ಸಿಗ್ನಲ್ ಕೊಡುವ ಮೂಲಕ ನಿರ್ದೇಶಕ ಹರ್ಷ ಕನಸಿಗೆ ನೀರೆರೆದಿದ್ದಾರೆ.
ಶಿವಣ್ಣನ ಈ ಕೆಲಸಕ್ಕೆ ಈಡೀ ಚಿತ್ರರಂಗವೇ ತಲೆ ಭಾಗಿದ್ದು, ಶಿವಣ್ಣ ತಂದೆಗೆ ತಕ್ಕ ಮಗ ಅಂತಿದ್ದಾರೆ.. ಅಲ್ಲದೆ ನೋವಲ್ಲೂ ನಿರ್ಮಾಪಕರು ಹಾಗೂ ನಿರ್ದೇಶಕರ ಜೊತೆ ನಿಲ್ಲುವುದು ದೊಡ್ಮನೆಯ ಹುಟ್ಟು ಗುಣ ಎಂದು ಶಿವಣ್ಣನ ಕೊಂಡಾಡ್ತಿದ್ದಾರೆ.