ಅಪ್ಪು ಅಗಲಿ 7 ತಿಂಗಳು; ವಿಶೇಷ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್​ಕುಮಾರ್ | Raghavendra Rajkumar Shares Pic with Puneeth Rajkumar On his 7th month Deathರಾಘವೇಂದ್ರ ರಾಜ್​ಕುಮಾರ್ ಅವರು ಅಪ್ಪು ಜತೆಗಿನ ವಿಶೇಷ ವಿಡಿಯೋ  ಹಂಚಿಕೊಂಡು ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಇಂದು (ನವೆಂಬರ್ 29) ರಾಜ್​ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುವ ಸಾಧ್ಯತೆ ಇದೆ.

TV9kannada Web Team


| Edited By: Rajesh Duggumane

May 29, 2022 | 10:03 AM
ಏಳು ತಿಂಗಳ ಹಿಂದೆ ಈ ದಿನ ಕರ್ನಾಟಕದವರ ಪಾಲಿಗೆ ಕರಾಳ ದಿನ. ಅಕ್ಟೋಬರ್ 29ರಂದು ಪುನೀತ್ ರಾಜ್​ಕುಮಾರ್ (Puneeth Rajkumar)ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದು ಎರಗಿತ್ತು. ಕರ್ನಾಟಕದ ಜನತೆ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಯಿತು. ಈ ಘಟನೆ ನಡೆದು ಏಳು ತಿಂಗಳು ಕಳೆದಿದೆ. ಆದರೂ, ಪವರ್​ ಸ್ಟಾರ್ ನಮ್ಮ ಜತೆಗಿಲ್ಲ ಎಂಬ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಈ ಕಹಿ ದಿನವನ್ನು ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಅವರು ಅಪ್ಪು ಜತೆಗಿನ ವಿಶೇಷ ವಿಡಿಯೋ  ಹಂಚಿಕೊಂಡು ಅಪ್ಪು (Appu) ಅವರನ್ನು ನೆನಪಿಸಿಕೊಂಡಿದ್ದಾರೆ. ಇಂದು (ನವೆಂಬರ್ 29) ರಾಜ್​ ಕುಟುಂಬ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸುವ ಸಾಧ್ಯತೆ ಇದೆ. ಇಂದು ಅಂಬರೀಷ್ ಜನ್ಮದಿನ ಕೂಡ ಹೌದು. ಹೀಗಾಗಿ, ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಭಿಮಾನಿಗಳು ಕೂಡ ನೆರೆದಿದ್ದಾರೆ. ಅಂಬರೀಷ್ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

TV9 Kannada


Leave a Reply

Your email address will not be published. Required fields are marked *