ತುಮಕೂರು: ನಟ ಪುನೀತ್ ರಾಜ್ಕುಮಾರ್ ನಿಧನದ ಹಿನ್ನೆಲೆ ತುಮಕೂರು ಜಿಲ್ಲೆಯಲ್ಲಿ ಅವರ ಅಭಿಮಾನಿಗಳು ಕೇಶ ಮುಂಡನೆ ಮಾಡಿಸಿಕೊಂಡಿದ್ದಾರೆ.
ಜಿಲ್ಲೆಯ ತಿಪಟೂರಿನ ವಿವೇಕಾನಂದ ನಗರದಲ್ಲಿ ಅಪ್ಪು ಅಭಿಮಾನಿಗಳಾದ ತಂದೆ ಮತ್ತು ಮಗ ಕೇಶ ಮುಂಡನೆ ಮಾಡಿಸಿಕೊಂಡಿದ್ದಾರೆ. ತಂದೆ ರವಿ ಹಾಗೂ ಮಗ ನಟರಾಜು ಕೇವಲ ಕೇಸ ಮುಂಡನೆ ಮಾಡಿಸಿಕೊಂಡಿದಷ್ಟಲ್ಲದೇ, ಪುನಿತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಿಥಿ ಕಾರ್ಯ ನೆರವೇರಿಸಿ ನಂತರ ನೆರೆದಿದ್ದವರಿಗೆಲ್ಲಾ ಅನ್ನ ಸಂತರ್ಪಣೆ ಮಾಡಿದ್ದಾರೆ.
11ನೇ ದಿನದ ತಿಥಿ ಕಾರ್ಯಕ್ಕೆ ನಾವು ಅಪ್ಪು ಸಮಾಧಿ ಬಳಿ ಹೋಗಬೇಕು, ಆದ್ದರಿಂದ ಕಾರ್ಯ ಮಾಡಿ ಕೇಶ ಮುಂಡನೆ ಮಾಡಿಸಿಕೊಂಡಿದ್ದೇವೆ ಅಂತಾ ಅಪ್ಪು ಅಭಿಮಾನಿಗಳು ಹೇಳಿದ್ದಾರೆ.