ಜೇಮ್ಸ್.. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಹೈ-ವೋಲ್ಟೇಜ್ ಪವರ್​ ಚಿತ್ರ.. ಈ ಸಿನಿಮಾ ಸೆಟ್ಟೇರಿದಾಗಿಂದ್ಲೂ ಚಿಕ್ಕ ಚಿಕ್ಕ ವಿಷ್ಯಗಳಿಂದಲೇ ಭರ್ಜರಿಯಾಗಿ ಸೌಂಡ್​ ಮಾಡ್ತಿದೆ.. ಈಗ್ಯಾಕಪ್ಪ ಈ ಮ್ಯಾಟರು ಹೇಳ್ತಿದ್ದೀವಿ ಅಂದ್ರೆ.. ಜೇಮ್ಸ್​ ಚಿತ್ರದ ಜಬರ್ದಸ್ತ್ ಪೋಟೋವೊಂದು ಈಗ ವೈರಲ್ ಆಗಿದ್ದು.. ಅಪ್ಪು​ ಸ್ಟೈಲಿಶ್ ಲುಕ್​​ಗೆ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.

ಜೇಮ್ಸ್​ ಚಿತ್ರ ದೊಡ್ಮನೆ ಅಭಿಮಾನಿಗಳಿಗೆ ಭರ್ಜರಿ ಬಾಡೂಟ ಅಂದ್ರೆ ತಪ್ಪಲ್ಲ.. ಯಾಕಂದ್ರೆ ಕ್ಲಾಸ್ ಮಾಸ್​ಗಳ ಬಾಸ್​ ಅಪ್ಪು ಹಾಗೂ ಪಂಚ್​ ಡೈಲಾಗ್​ಗಳ ಜನಕ ಚೇತನ್​ ಕಾಂಬಿನೇಷನ್​ ಒಟ್ಟಾಗಿದೆ. ಈ ಜೋಡಿ ಒಂದಾಗ್ತಿದಂತೆ ಅಭಿಮಾನಿಗಳಲ್ಲಿ ನಿರೀಕ್ಷೆಯ ಬೆಟ್ಟ ಬೆಳೆದು ನಿಂತಿದೆ.

 

ಅಭಿಮಾನಿಗಳ ಅಭಿಲಾಷೆಗೆ ತಕ್ಕಂತೆ ನಿರ್ದೇಶಕ ಚೇತನ್ ಜೇಮ್ಸ್​ ಟೀಂ ಕಡೆಯಿಂದ ಆಗಾಗ ಒಂದೊಂದು ಸರ್ಪ್ರೈಸ್​ ಕೊಡ್ತಾನೆ ಬರ್ತಿದ್ದಾರೆ. ಅದೇ ರೀತಿ ಈಗ ಜೇಮ್ಸ್​ ಬತ್ತಳಿಕೆಯಿಂದ ಫ್ಯಾನ್ಸ್​ಗಳ ಅಡ್ಡಕ್ಕೆ ಹೊಸ ಬಾಣವೊಂದು ಬಂದು ತಲುಪಿದೆ.. ಆ ಬಾಣ ಯಾವ್ದಪ್ಪ ಅಂದ್ರೆ ಜೇಮ್ಸ್​ ಚಿತ್ರದಲ್ಲಿ ಅಪ್ಪುವಿನ ನಯಾ ಲುಕ್​.

 

ಜೇಮ್ಸ್​ ಫಿಲ್ಮ್ ಟೀಂ ಪವರ್​ ಸ್ಟಾರ್​ ಪವರ್​ ಪುಲ್​ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಹರಿ ಬಿಟ್ಟಿದ್ದು.. ಈ ಫೋಟೋ ಅಭಿಮಾನಿಗಳ ಬಳಗದಲ್ಲಿ ಪ್ರವಾಹದಂತೆ ಪಸರಿಸ್ತಿದೆ. ಇನ್ನು ಸಖತ್ ಸೌಂಡ್ ಮಾಡ್ತಿರುವ ಅಪ್ಪುವಿನ ಹೊಸ ಅವತಾರದ ಹಿಂದೆ ಒಂದು ಸ್ವಾರಸ್ಯವಿದೆ. ಇಂಟರ್ವಲ್​ ಬ್ಲಾಕ್​ನಲ್ಲಿ ಬರುವ ಫೈಟಿಂಗ್​ನಲ್ಲಿ ಅಪ್ಪು ಕ್ಲಾಸಿ ಲುಕ್​ ನಲ್ಲಿ ಫೈಟರ್​ಗಳಿಗೆ ಪಂಚ್​ ಕೋಡೊ ಸನ್ನಿವೇಶವನ್ನ ಶೂಟ್ ಮಾಡಲಾಗುತ್ತಿದೆ. ಇನ್ನು ಈ ಆ್ಯಕ್ಷನ್​ ಎಪಿಸೋಡ್​ ಅನ್ನು ಫ್ಯಾಲೇಸ್ ಗ್ರೌಂಡ್​ ಅಲ್ಲಿ ಶೂಟ್ ಮಾಡಲಾಗುತ್ತಿದ್ದು, ಸ್ಟಂಟ್ ಬ್ರದರ್ಸ್ ರಾಮ್​ ಲಕ್ಷ್ಮಣ್ ಪವರ್​ ಸ್ಟಾರ್​ಗೆ ಪವರ್ ಪುಲ್ ಫೈಟ್​​ನ ಪಾಠ ಹೇಳಿಕೊಟ್ಟಿದ್ದಾರೆ. ಈ ವರ್ಷ ಪ್ರೇಕ್ಷಕರ ಮುಂದೆ ಜೇಮ್ಸ್ ಬರೋದು ಕನ್ಫರ್ಮ್​​​

The post ಅಪ್ಪು ಅಭಿಮಾನಿಗಳಿಗೆ ಜೇಮ್ಸ್​​ ತಂಡದ ಸರ್ಪ್ರೈಸ್​.. ‘ದಿಲ್ ಖುಷ್’ ಎಂದ ಫ್ಯಾನ್ಸ್ appeared first on News First Kannada.

Source: newsfirstlive.com

Source link