ಅಪ್ಪು ಆಘಾತ ಬೆನ್ನಲ್ಲೇ ಅಲರ್ಟ್ ಆದ ನಾಡಿನ ಜನ; ಹೃದಯ ಪರೀಕ್ಷೆಗೆ ನಾಡಿನೆಲ್ಲೆಡೆ ಶುರುವಾಯ್ತು ನೂಕು ನುಗ್ಗಲು | People who are alert to the shock of Puneeth Rajkumar death and they visit hospital


https://www.youtube.com/watch?v=3Eqo8lmklNoಅಪ್ಪು ಆಘಾತ ಬೆನ್ನಲ್ಲೇ ಅಲರ್ಟ್ ಆದ ನಾಡಿನ ಜನ; ಹೃದಯ ಪರೀಕ್ಷೆಗೆ ನಾಡಿನೆಲ್ಲೆಡೆ ಶುರುವಾಯ್ತಾ ನೂಕು ನುಗ್ಗಲು

ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಗಲಿಕೆಯ ನೋವು ಜನರಿಂದ ಇನ್ನೂ ದೂರವಾಗಿಲ್ಲ. ಆದರೆ ಅದೇ ದುಖಃ, ಅದೇ ಭಯ ಎಲ್ಲರಲ್ಲೂ ಕಾಡಿತ್ತು. ಸದ್ಯ ಹೃದಯಾಘಾತದ ಬಗ್ಗೆ ಸಾರ್ವಜನಿಕರು ಹೆದರಿದ್ದಾರೆ‌. ಪುನೀತ್ ಮೃತಪಟ್ಟ ನಂತರದ ಎರಡ್ಮೂರು ದಿನ ಜಿಮ್​ಗಳಿಗೆ ಒಬ್ಬರು ಕೂಡ ತಲೆ ಹಾಕಿರಲಿಲ್ಲ. ಆ ಭಯ ಎಷ್ಟರ ಮಟ್ಟಿಗೆ ಇದೆ ಎನ್ನುವುದಕ್ಕೆ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು ಸೇರಿದಂತೆ ಕ್ಲಿನಿಕ್​ಗಳಿಗೆ ಭೇಟಿ ನೀಡುತ್ತಿರುವ ಜನರೇ ಸಾಕ್ಷಿ. ಪುನೀತ್ ರಾಜ್‍ ಕುಮಾರ್ ಅಗಲಿಕೆಗೂ ಮುನ್ನ ಹೃದಯ ತಪಾಸಣೆಗೆ ಬರುತ್ತಿದ್ದ ಜನರ ಸಂಖ್ಯೆ ಈಗ ನಾಲ್ಕು ಪಟ್ಟು ಹೆಚ್ಚಾಗಿದೆ. ಮೊದಲು ಒಂದು ಆಸ್ಪತ್ರೆ ಅಥವಾ ಮೆಡಿಕಲ್ ಕಾಲೇಜಿನಲ್ಲಿ ಪ್ರತಿನಿತ್ಯ 100 ರಿಂದ 125 ಜನರು ಬಂದು ತಪಾಸಣೆ ಮಾಡಿಸುತ್ತಿದ್ದರು. ಆದರೆ ಈಗ ಅದು 350 ರಿಂದ 400 ಆಗಿದೆ.

ಜಿಮ್​ಗೆ ಹೋಗುತ್ತಿದ್ದವರು, ಡ್ಯಾನ್ಸರ್​ಗಳು, ಡ್ಯಾನ್ಸ್ ಕ್ಲಾಸ್​ಗೆ ಹೋಗುತ್ತಿದ್ದವರು ಎಲ್ಲರು ಕೂಡ ಆಸ್ಪತ್ರೆ ಭೇಟಿ ಬಳಿಕ ವಾಪಾಸ್ ಜಿಮ್ ಮತ್ತು ಡ್ಯಾನ್ಸ್ ಕ್ಲಾಸ್​ಗೆ ತೆರಳುತ್ತಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಬಳಿ ಜಿಮ್ನಾಸ್ಟಿಕ್ ಮತ್ತು ಡ್ಯಾನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ.

TV9 Kannada


Leave a Reply

Your email address will not be published. Required fields are marked *