‘ಅಪ್ಪು ಇಲ್ಲ ಅಂತ ಒಪ್ಕೊಳ್ಳೋದೆ ಕಷ್ಟ ಆಗಿದೆ’ -ಶಿವಣ್ಣನಿಗೆ ಸಾಂತ್ವನ ಹೇಳಿ ಹೊರಟ ನಟಿ ಜಯಪ್ರದ


ಬೆಂಗಳೂರು: ಪುನೀತ್​ ರಾಜ್​ಕುಮಾರ್​ ನಮ್ಮೊಂದಿಗೆ ಇಲ್ಲ ಅಂತ ಒಪ್ಕೊಳ್ಳೋದೆ ಅಷ್ಟ ಆಗ್ತಿದೆ ಅಂತ ಹಿರಿಯ ನಟ ಜಯಪ್ರದಾ ಹೇಳಿದ್ದಾರೆ.

ಶಿವರಾಜ್​ಕುಮಾರ್ ಅವರಿಗೆ ಸಂತ್ವನ ಹೇಳಲು ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಯಪ್ರದಾ ಅವರು, ಅಪ್ಪು ಇಲ್ಲ ಅಂತ ಒಪ್ಕೊಳ್ಳೋದೆ ಕಷ್ಟ ಆಗಿದೆ. ನನಗೆ ಈ ಕುಟುಂಬ ಎಂದರೇ ತುಂಬಾ ಇಷ್ಟ.. ಅಪ್ಪಾಜಿ-ಅಮ್ಮ ಅವರೊಂದಿಗೆ ಕುಟುಂಬದಲ್ಲಿ ನಾನು ಸದಸ್ಯೆಯಾಗಿದ್ದೆ.

ಇವತ್ತು ಶಿವಣ್ಣ, ಇಡೀ ಕುಟುಂಬದ ದುಃಖದಲ್ಲಿ ಇದೇ ಎಂದರೇ ನನ್ನಿಂದ ತಡೆಯೋಕೆ ಆಗ್ತಿಲ್ಲ. ಅಪ್ಪು ನಟರಾಗಿ ಮಾತ್ರವಲ್ಲದೇ ವ್ಯಕ್ತಿಯಾಗಿಯೂ ಸಾಕಷ್ಟು ದೊಡ್ಡ ಹೆಸರು ಪಡೆದುಕೊಂಡಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ದೂರವಾಗಿದ್ದಾರೆ.. ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ. ಈ ಸಂದರ್ಭದಲ್ಲಿ ಎಲ್ಲರೂ ಕುಟುಂಬಕ್ಕೆ ಧೈರ್ಯ ತುಂಬಬೇಕಿದೆ ಎಂದು ಮನವಿ ಮಾಡಿದರು.

News First Live Kannada


Leave a Reply

Your email address will not be published. Required fields are marked *