ಅಪ್ಪು ಕಂಡ ಕನಸು ಅವರ ಜೊತೆ ಕನಸಾಗಿಯೇ ಹೋಯ್ತು.. ಪುನೀತ್ ದೂರದೃಷ್ಟಿ ಎಷ್ಟರ ಮಟ್ಟಿಗಿತ್ತು ಗೊತ್ತಾ?


ಅದೆಷ್ಟು ಕನಸುಗಳು, ಅದೆಷ್ಟು ಯೋಚನೆ ಯೋಜನೆಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಕಳೆದೇ ಹೋದವು..ಅಪ್ಪು ಅವರು ಇರೋವಾಗ ಅವರ ವ್ಯಾಪ್ತಿ ಅವರ ದೂರ ದೃಷ್ಟಿ ಗೊತ್ತಾಗಲೇ ಇಲ್ಲ.. ಆದ್ರೆ ರಾಜರತ್ನ ಅಗಲಿಕೆಯ ನಂತರ ಅವರ ಕನಸುಗಳು ಎಂಥದ್ದಿದ್ದವು ಅವರಿದ್ದಾಗ ಅವರು ಮಾಡಲು ಹೊರಟ್ಟಿದ್ದ ಕಾರ್ಯವೇನು ಅನ್ನೋದು ಗೊತ್ತಾಗುತ್ತಿದೆ.. ಯುವರತ್ನ ಕನ್ನಡ ಚಿತ್ರರಂಗ ಹೆಮ್ಮೆ ಪಡುವಂಥದ ಫಿಲ್ಮ್ ಸಿಟಿ ಕಟ್ಟುವ ಕನಸು ಕಂಡಿದ್ದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲದೇ ಅದೆಷ್ಟೋ ಕನಸುಗಳಿಗೆ ಕಣ್ಣುಗಳೇ ಇಲ್ದಂಗೆ ಆಗಿದೆ.. ಯೋಚನೆ ಯೋಜನೆಗೆ ಮನಸುಗಳೇ ಇಲ್ದಂಗೆ ಆಗಿದೆ.. ಹೆಸರಿಗೆ ಅಪ್ಪು ಒಬ್ಬರು.. ಆದ್ರೆ ಅವರ ಶಕ್ತಿ ಭಕ್ತಿ ಸ್ಫೂರ್ತಿ ಕನಸು ಕಂಚನಗಂಗದಷ್ಟು ದೊಡ್ಡದು.. ಕೋಟಿ ಕೋಟಿ ಕಂಗಳಿಗೆ ಆಸರೆಯಾಗುವಂಥದ್ದು.

ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗ ಬಾರದು ಎನ್ನುವಂತೆ ಅಪ್ಪು ಅವರ ಉಪಕಾರ ಹಾಗೂ ಕನಸಿನ ಪ್ರಾಕಾರ ಅವರ ಜೊತೆಗಿದ್ದವರಿಗೆ ಗೊತ್ತಾಗಿಲ್ಲ.. ಅಪ್ಪು ಮಾಡುತ್ತಿದ್ದ ಪುಣ್ಯದ ಕೆಲಸ ಅವರ ಧರ್ಮ ಪತ್ನಿಗೂ ಗೊತ್ತಿರಲಿಲ್ಲ ಅವರ ಅಣ್ಣ ಶಿವಣ್ಣನಿಗೂ ಗೊತ್ತಿರಲಿಲ್ಲ.. ಇದಲ್ವಾ ಉಪಕಾರದ ಉಪನಿಷತ್ತು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕನಸುಗಳಲ್ಲೊಂದನ್ನ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನ್ಯೂಸ್ ಫಸ್ಟ್ ನ ಜೊತೆಗೆ ಹೇಳಿಕೊಂಡಿದ್ದಾರೆ.. ಹೆಬ್ಬುಲಿ ನಿರ್ಮಾಪಕರ ಮಾತುನ್ನ ಕೇಳಿದ್ರೆ ಗೊತ್ತಾಗುತ್ತೆ ಅಪ್ಪು ಅವರು ತಾನು ಬೆಳೆಯೋದ್ರ ಜೊತೆಗೆ ತನ್ನ ಚಿತ್ರರಂಗದ ಬಳ್ಳಿಯನ್ನ ಬೆಳೆಸ ಬೇಕು ಅನ್ನೋ ದೂರ ದೃಷ್ಟಿಯವರಾಗಿದ್ದರು ಅನ್ನೋದು ಗೊತ್ತಾಗುತ್ತದೆ.

ಅಪ್ಪು ಕನಸಿನ ಬಗ್ಗೆ ಉಮಾಪತಿ ಮನಸಿನ ಮಾತು
ಹೆಬ್ಬುಲಿ , ರಾಬರ್ಟ್ , ಒಂದಲ್ಲಾ ಎರಡಲ್ಲಾ ಸಿನಿಮಾಗಳನ್ನ ಮಾಡಿರುವ ಮದಗಜ ಸಿನಿಮಾವನ್ನ ತೆರೆಗೆ ತರಲು ಸಜ್ಜಾಗಿರುವ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮುಂದಿನ ದಿನಗಳಲ್ಲಿ ಅಪ್ಪು ಅವರಿಗೊಂದು ಸಿನಿಮಾ ಮಾಡಬೇಕಿತ್ತು.. ಸೋಮವಾರ ಅಡ್ವಾನ್ಸ್ ಕೊಟ್ಟು ಮಾತನಾಡಿ ಹೋಗಿದ್ದ ಉಮಾಪತಿ ಅವರಿಗೆ ಅಪ್ಪು ಅವರೇ ಅಡ್ವಾನ್ಸ್ ಕೊಟ್ಟು ತನ್ನ ಹೊಸ ಕನಸಿನ ಬಗ್ಗೆ ಹೇಳಿಕೊಂಡಿದ್ರಂತೆ. ಅಪ್ಪು ಅಗಲಿಕೆಯ ನಂತರ ನಿಜವಾದ ಅಪ್ಪು ಅವರ ನೆನಪಿನ ಹುಟ್ಟು ಪ್ರತಿಯೊಬ್ಬರ ಮನಸಿನಲ್ಲಿ ಆಗುತ್ತಿದೆ.. ಎಂಥ ವ್ಯಕ್ತಿಯನ್ನ ನಾವು ಕಳೆದುಕೊಂಡೆವು ಅನ್ನೋ ಅರಿವು ಆಗುತ್ತಿದೆ.. ವಿ ಆಲ್ ಮಿಸ್ ಯೂ ಅಪ್ಪು ಸಾರ್ ಎಂದಿದ್ದಾರೆ.

News First Live Kannada


Leave a Reply

Your email address will not be published.