ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕನಸಿನ ಯೋಜನೆ “ಗಂದಧ ಗುಡಿ” ಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದು ಅಶ್ವಿನಿ ಪುನೀತ್ ರಾಜ್ಕುಮಾರ್ ಟ್ವೀಟ್ ಮಾಡಿದ್ದಾರೆ. ಅಪ್ಪು ಅವರ ಕನಸಿನ ಯೋಜನೆ “ಗಂದಧ ಗುಡಿ” ವೈಲ್ಡ್ ಲೈಫ್ ಡಾಕ್ಯೂಮೆಂಟರಿ ಟೀಸರ್ ಇಂದು ಬಿಡುಗಡೆಯಾಗಿದ್ದು ಉತ್ತಮ ರೆಸ್ಪಾನ್ಸ್ ಸಕ್ಕಿದೆ. ಸದ್ಯ “ಗಂದಧ ಗುಡಿ” ಟೀಸರ್ ಯೂಟ್ಯೂಬ್ನಲ್ಲಿ ನಂ.1 ಟ್ರೆಂಡಿಗ್ನಲ್ಲಿದ್ದು ಎರಡು ಲಕ್ಷದ ಮೂವತ್ತೊಂದು ಸಾವಿರ ಜನ ಲೈಕ್ ಮಾಡಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮಾಯಿ ಅವರಿಂದ ಹಿಡಿದು ಸ್ಯಾಂಡಲ್ವುಡ್ನ ಬಹುತೇಕ ಎಲ್ಲಾ ಕಲಾವಿದರು “ಗಂದಧ ಗುಡಿ” ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಅಪ್ಪು ಪತ್ನಿ ಅಶ್ವಿನಿ ಈ ಬಗ್ಗೆ ಟ್ವೀಟ್ ಮಾಡಿ “ಈ ಗಂದಧ ಗುಡಿಯನ್ನು ನಾಡಿನ ಪ್ರತಿಯೊಬ್ಬರಿಗೂ ತಲುಪಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು. ಈ ನಿಟ್ಟಿನಲ್ಲಿ ನೀವು ನೀಡುತಿರುವ ಸಹಕಾರ ಮತ್ತು ಪ್ರೋತ್ಸಾಹಕ್ಕೆ ನಾವು ಸದಾ ಆಭಾರಿ” ಎಂದು ಬರೆದುಕೊಂಡಿದ್ದಾರೆ.