ಅಪ್ಪು ಕನಸಿನ ಯೋಜನೆ ‘ಗಂಧದ ಗುಡಿ’ ಕೊಂಡಾಡಿದ RRR ಡೈರೆಕ್ಟರ್​​ ರಾಜಮೌಳಿ


ಟಾಲಿವುಡ್​ ಚಿತ್ರ ಬ್ರಹ್ಮ ಎಸ್​.ಎಸ್​ ರಾಜಮೌಳಿ ಅವರು ಪುನೀತ್​ ರಾಜ್​ ಕುಮಾರ್​ ಅವರ “ಗಂಧದ ಗುಡಿ” ಡಾಕ್ಯೂಮೆಂಟರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಅವರ ಕನಸಿನ ಯೋಜನೆ “ಗಂಧದ ಗುಡಿ”ಯ ಟೈಟಲ್​ ಟೀಸರ್​ ಡಿಸೆಂಬರ್​ 6 ರಂದು ಪಿಆರ್​ಕೆ ಆಡಿಯೋ ಮೂಲಕ ರಿಲೀಸ್​ ಆಗಿತ್ತು.

ಅಪ್ಪು ಅವರ “ಗಂಧದ ಗುಡಿ” ಡಾಕ್ಯೂಮೆಂಟರಿ ಬಗ್ಗೆ ಸ್ಯಾಂಡಲ್​ವುಡ್​ನ ಬಹುತೇಕ ಕಲಾವಿದರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರಂತೇ ಟಾಲಿವುಡ್​ ನಿರ್ದೇಶಕ ರಾಜಮೌಳಿ ಸೋಶಿಯಲ್​ ಮೀಡಿಯಾ ಮೂಲಕ ಅಪ್ಪು ಅವರ “ಗಂಧದ ಗುಡಿ” ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗಂಧದ ಗುಡಿ ಟೀಸರ್​ ಬಗ್ಗೆ ಟ್ವೀಟ್ ಮಾಡಿರುವ ರಾಜಮೌಳಿ ” ಗಂಧದ ಗುಡಿ ಬಹಳ ಅದ್ಭುತವಾಗಿದೆ. ಖಂಡಿತವಾಗಿಯೂ ಇದು ಪುನೀತ್​ ಅವರಿಗೆ ಸಲ್ಲಿಸುವ ಪ್ರಾಮಾಣಿಕ ಮತ್ತು ಹೃತ್ಪೂರ್ವಕ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ.

News First Live Kannada


Leave a Reply

Your email address will not be published. Required fields are marked *