ಬೆಂಗಳೂರು: ಪುನೀತ್ ರಾಜ್ಕುಮಾರ್, ನಾನು ಒಂದು ಹೊಟ್ಟೆಯಲ್ಲಿ ಹುಟ್ಟಿಲ್ಲ ಅಂದ್ರು ನಾನು ಅಪ್ಪು ಅಣ್ಣ-ತಮ್ಮನಂತೆ. ಆತ ಎಷ್ಟು ಕೆಲಸ ಮಾಡಿದ್ದಾನೆ ಅಂತ ಎಲ್ಲರಿಗೂ ಗೊತ್ತಿದೆ. ಆದರೆ ಅಪ್ಪು ಹಠಾತ್ ನಿಧನ ಜೀರ್ಣಿಸಿಕೊಳ್ಳಲಾದ ಸಂಗತಿ.. ಹೈದರಾಬಾದ್ನಲ್ಲಿದ್ದ ನಮಗೆ ಈ ಸುದ್ದಿ ಶಾಕ್ ಕೊಟ್ಟಿತ್ತು ಎಂದು ತೆಲುಗು ನಟ ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.
ಪುನೀತ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಾರ್, ಒಳ್ಳೆ ವ್ಯಕ್ತಿ ಏಕಾಏಕಿ ಇಲ್ಲ ಅಂದಾಗ ತಡೆದುಕೊಳ್ಳಲಾಗಲಿಲ್ಲ. ಆದರೆ ದೇವರು ಮಾಡಿದನ್ನು ನಾವು ಫಾಲೋ ಆಗಲೇ ಬೇಕು.. ತೆಲುಗು ಸಿನಿಮಾ ರಂಗದ ಪರ ಅವರ ಕುಟುಂಬಸ್ಥರಿಗೆ ಸಂತ್ವಾನ ಹೇಳುವ ಕಾರ್ಯ ಮಾಡಿದ್ದೇವೆ.
ಪುನೀತ್ ನಿಧನ ದಿನ ಯಾಕೆ ಬಂದಿಲ್ಲ ಎಂದರೇ ಸ್ಥಳದಲ್ಲಿ ಜನವಾಹಿನಿಯ ಪ್ರವಾಹ ನಡುವೆ ನಾವು ಬಂದು ಮತ್ತಷ್ಟು ಸಮಸ್ಯೆ ಉಂಟು ಮಾಡಬಾರದು ಎಂಬ ಕಾರಣಕ್ಕೆ ಅಂದು ಬರಲಿಲ್ಲ. ಆದರೆ ಪುನೀತ್ ಇಲ್ಲದ ಮನೆಗೆ ಬರುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಕೆಲವು ಸತ್ಯಗಳನ್ನು ನಾವು ಒಪ್ಪಿಕೊಳ್ಳಲೇ ಬೇಕು.. ಅಂತಿಮ ಯಾತ್ರೆಗೆ 25 ಲಕ್ಷ ಜನ ಬಂದಿದ್ದಾರೆ ಅಂದ್ರೆ ಪುನೀತ್ ಎಷ್ಟು ದೊಡ್ಡ ಮನುಷ್ಯ ಇರಬೇಕು.. ಆತನ ವ್ಯಕ್ತಿತ್ವವೇ ಎಲ್ಲವನ್ನು ಹೇಳುತ್ತೆ. ಅವರ ಕುಟುಂಬಸ್ಥರಿಗೆ ಇದನ್ನು ತಡೆದುಕೊಳ್ಳುವ ಧೈರ್ಯ ನೀಡಬೇಕು. ಕಾಲೇಜು ಕುಮಾರ ಎಂಬ ಸಿನಿಮಾ ಕಂಠೀರವ ಶೂಟಿಂಗ್ ಮಾಡುತ್ತಿದ್ದ ವೇಳೆ ಮದುವೆ ಆಹ್ವಾನ ಪತ್ರಿಕೆ ನೀಡಲು ಬಂದಿದ್ದರು. ಒಂದೇ ಒಂದು ಹೇಳ್ತೀನಿ.. ಪುನೀತ್ ರಾಜ್ಕುಮಾರ್ ನನ್ನ ಸಹೋದರ ಎಂದು ಕನ್ನಡದಲ್ಲೇ ಹೇಳಿ ಕಣ್ಣೀರಿಟ್ಟರು.