ದಿವಂಗತ ಕನ್ನಡ ಸೂಪರ್ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಕನಸಿನ ಯೋಜನೆಯಾದ ‘ಗಂಧದ ಗುಡಿ’ಯ ಟೀಸರ್ ಬಿಡುಗಡೆಯಾಗಿದೆ. ‘ಗಂಧದಗುಡಿ’ ಕಾಡಿನ ಡಾಕ್ಯುಮೆಂಟರಿಯನ್ನು ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಮ್ಮ ಪಿಆರ್ಕೆ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ರಿಲೀಸ್ ಮಾಡಿದ್ದಾರೆ. ಇನ್ನು ಈ ಕುರಿತು ಮಾತನಾಡಿದ ಶಿವರಾಜ್ಜುಮಾರ ಕಾಡಿನ ಬಗ್ಗೆ ಇರುವ ಡಾಕ್ಯೂಮೆಂಟರಿಯನ್ನ ನೋಡಲು ಕಾತುರನಾಗಿದ್ದೇನೆ ಎಂದಿದ್ದಾರೆ.
ಈ ಬಗ್ಗೆ ನ್ಯೂಸ್ಫಸ್ಟ್ಗೆ ಪ್ರತಿಕ್ರಿಯಿಸಿದ ಅವರು ಗಂಧದ ಗುಡಿ ಅಂದ್ರೆ ತಟ್ಟನೆ ನೆನಪಾಗೋದು ಅಪ್ಪಾಜಿ, ಅವರ ಜೊತೆ ಈ ಹೆಸರನ್ನು ಕೇಳಿದಾಗ ಅಪ್ಪಾಜಿ, ಎಂ.ಪಿಶಂಕರ್, ಕಾಡಿನ ಆ ಪ್ರಕೃತಿಯ ಸೌಂದರ್ಯ ಎಲ್ಲವು ನೆನಪಾಗುತ್ತದೆ ಎಂದಿದ್ದಾರೆ. ಗಂಧದ ಗುಡಿ ಅನ್ನೋ ಒಂದೂ ಡಾಕ್ಯೂಮೆಂಟರಿಯಲ್ಲಿ ಪುನೀತ್ ರಾಜ್ ಕುಮಾರ್ ಕಾಣಿಸಿಕೊಂಡಿದ್ದಾರೆ.. ನಾಡಿನ ವನ್ಯಜೀವಿಗಳು ಹಾಗೂ ಅರಣ್ಯ ಸಂಪತ್ತು ಎಂಥದ್ದು ಅನ್ನೋ ಅರಿವು ಮೂಡಿಸೋ ಸಾಕ್ಷ್ಯ ಚಿತ್ರವಿದು ಎಂಬದು ಟೈಟಲ್ ಟೀಸರ್ ಸಾರಿ ಹೇಳ್ತಿದೆ.
ಇನ್ನು ವೈಲ್ಡ್ ಲೈಫ್ ಫೋಟೋಗ್ರಫರ್ ಅಮೋಘ ವರ್ಷ ಈ ಗಂಧದಗುಡಿ ಸಾಕ್ಷಾಚಿತ್ರದ ಸಾರಥಿ.. ಪುನೀತ್ ರಾಜ್ ಕುಮಾರ್ ಈ ಗಂಧದಗುಡಿ ಡಾಕ್ಯೂಮೆಂಟರಿಗಾಗಿ ಒಂದರಿಂದ ಎರಡು ವರ್ಷ ಕೆಲಸ ಮಾಡಿದ್ದಾರೆ.. ಒಂದರಿಂದ ಎರಡು ವರ್ಷ ಕರ್ನಾಟಕ ಅರಣ್ಯಗಳಲ್ಲಿ ಕೆಲ ಕಾಲ ಇದ್ದು ಅಲ್ಲಿನ ಪ್ರಕೃತಿಯನ್ನ ಸವಿದು ಈ ಡಾಕ್ಯೂಮೆಂಟರಿಯನ್ನ ಸಿನಿಮಾ ರೇಂಜ್ನಲ್ಲಿ ಮಾಡಲಾಗಿದೆ.
The post ಅಪ್ಪು ಗಂಧದಗುಡಿ ನೋಡಿದ್ರೆ ಅಪ್ಪಾಜಿ , MP ಶಂಕರ್ ನೆನಪಾಗುತ್ತಿದ್ದಾರೆ-ಶಿವಣ್ಣ appeared first on News First Kannada.