ಅಪ್ಪು ನಿವಾಸಕ್ಕೆ ಭೇಟಿ ಕೊಟ್ಟು ಅಶ್ವಿನಿಗೆ ಸಿಎಂ ಸಾಂತ್ವನ; 11ನೇ ದಿನದ ಕಾರ್ಯದ ಬಗ್ಗೆ ಹೇಳಿದ್ದೇನು..?


ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಅಶ್ವಿನಿ ಅವರಿಗೆ ಸಾಂತ್ವಾನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಸಚಿವರಾದ ಆರ್ ಅಶೋಕ್, ಡಾ. ಸಿ.ಎನ್ ಅಶ್ವತ್ಥ ನಾರಾಯಣ, ರಾಘವೇಂದ್ರ ರಾಜ್​​ಕುಮಾರ್​, ಚಿನ್ನೇಗೌಡ, ಎಸ್ ಎ ಗೋವಿಂದರಾಜ್, ಯುವರಾಜಕುಮಾರ ಮತ್ತು ಇತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಸಿಎಂ, ಪುನೀತ್​ರನ್ನು ಕಳೆದುಕೊಂಡು 8 ದಿನಗಳಾಗಿದೆ. ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಸಂತ್ವಾನ ಹೇಳಲು ಬಂದಿದ್ದೆವು. ಅವರೊಂದಿಗೆ ಮಾತನಾಡಿ ಮುಂದೇ ಅವರಿಗೆ ಆಗಬೇಕಾದ ಹಲವು ಕಾರ್ಯಗಳ ಬಗ್ಗೆ ಕುಟುಂಬಸ್ಥರು ತೀರ್ಮಾನ ಮಾಡುತ್ತಿದ್ದಾರೆ. ಪುನೀತ್ ಕನ್ನಡಿಗರ ಆಸ್ತಿ.. ಇಂದಿಗೂ ಕಂಠೀರವ ಸ್ಟುಡಿಯೋದಲ್ಲಿ ಸಾರ್ವಜನಿಕರು ಅವರ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಮುಂದಿನ ಕಾರ್ಯಗಳು ಕೂಡ ಶಾಂತಿಯಿಂದ ನಡೆಯಬೇಕು ಎಂದು ಕುಟುಂಬಸ್ಥರು ಚರ್ಚೆ ಮಾಡಿದ್ದಾರೆ.

ಅಪ್ಪು ಅವರಿಗೆ ಯಾವ ರೀತಿ ಪ್ರೀತಿ, ಅಭಿಮಾನ ಇತ್ತು ಅದಕ್ಕೆ ತಕ್ಕಂತೆ ಎಲ್ಲಾ ರೀತಿಯ ಕಾರ್ಯಕ್ರಮಗಳನ್ನು ಮಾಡಲು, ಗೌರವವನ್ನು ಕೊಡಲು ನಮ್ಮ ಸರ್ಕಾರ ಸಿದ್ಧವಾಗಿದೆ. ಈ ಈ ಕಾರ್ಯಕ್ರಮ ಆದ ಮೇಲೆ ನಾವು ಮತ್ತೆ ಇನ್ನೊಮ್ಮೆ ಕುಳಿತುಕೊಂಡು ಕುಟುಂಬಸ್ಥರ ಜೊತೆ ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

 

The post ಅಪ್ಪು ನಿವಾಸಕ್ಕೆ ಭೇಟಿ ಕೊಟ್ಟು ಅಶ್ವಿನಿಗೆ ಸಿಎಂ ಸಾಂತ್ವನ; 11ನೇ ದಿನದ ಕಾರ್ಯದ ಬಗ್ಗೆ ಹೇಳಿದ್ದೇನು..? appeared first on News First Kannada.

News First Live Kannada


Leave a Reply

Your email address will not be published.