ಬೆಂಗಳೂರು: ನಟ ಪುನೀತ್ ರಾಜ್‍ಕುಮಾರ್ ನಿಧನ ಹಿನ್ನೆಲೆ ಅವರ ಕುಟುಂಬಸ್ಥರನ್ನ ನಿರ್ಮಲಾನಂದ ಶ್ರೀಗಳು ಹಾಗೂ ಸಚಿವ ಸುಧಾಕರ್ ಭೇಟಿ ಮಾಡಿದ್ದಾರೆ.
ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪುನಿತ್ ರಾಜ್ ಕುಮಾರ್ ನಿವಾಸಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದ ಶ್ರೀಗಳು ಹಾಗೂ ಸಚಿವ ಸುಧಾಕರ್ ಭೇಟಿ ಮಾಡಿದ್ದಾರೆ. ಈ ವೇಳೆ ಅಪ್ಪು ಕುಟುಂಬಸ್ಥರಿಗೆ ಶ್ರೀಗಳು ಹಾಗೂ ಸಚಿವರು ಸಾಂತ್ವಾನ ಹೇಳಿದ್ದಾರೆ.
ಈ ವೇಳೆ ಮಾತನಾಡಿ ನಿರ್ಮಾಲನಂದ ಸ್ವಾಮೀಜಿಗಳು, ಕನ್ನಡ ನಾಡಿನ ಅಭಿಜಾತ ಕಲೆಗಾರ ಪುನೀತ್. ಅವರು ದೇಹ ಬಿಟ್ಟು ಒಂದು ತಿಂಗಳಾಯ್ತು. ರಾಜ್ ಕುಮಾರ್ ನಮ್ಮ ನಾಡಿನ ಕಲೆಯನ್ನು ಮುಗಿಲೆತ್ತರಕ್ಕೆ ಕೊಂಡ್ಯೊಯ್ದವರು. ನಮ್ಮ ಮಠಕ್ಕೂ ರಾಜ್ ಕುಮಾರ್ ಫ್ಯಾಮಿಲಿಗೂ ಅವಿನಾಭಾವ ಸಂಬಂಧ ಇದೆ. ಇಂದು ಬಂದು ಸಾಂತ್ವನ ಹೇಳಿದ್ದೇವೆ. ಆಗಿರುವ ನಷ್ಟ ಭರಿಸೋದು ಕಷ್ಟ. ದುಖಃವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದರು.
ಶ್ರೀಗಳೊಂದಿಗೆ ಆಗಮಿಸಿದ್ದ ಸಚಿವ ಸುಧಾಕರ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನಿರ್ಮಲಾನಂದ ಸ್ವಾಮೀಜಿ ಅವರು ಪುನೀತ್ ರಾಜ್ ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಂದು ಪಾರ್ಥಿವ ಶರೀರಕ್ಕೆ ಅಂತಿಮ ದರ್ಶನ ಸಲ್ಲಿಸಿದ ಬಳಿಕ ಇಂದು ಕುಟುಂಬಕ್ಕೆ ಧೈರ್ಯ ತುಂಬಲು ಸ್ವಾಮೀಜಿ ಅವರು ಆಗಿಮಿಸಿದ್ದಾರೆ. ನಮ್ಮ ಇಡೀ ಸಂಸ್ಥೆ ಪುನೀತ್ ರಾಜ್‍ಕುಮಾರ್ ಕುಟುಂಬದ ಜೊತೆಗೆ ಇರುತ್ತೆ. ಅಶ್ವಿನಿ ಅವರಿಗೆ ಆದಿಚುಂಚನಗಿರಿ ಕಾಲಬೈರವೇಶ್ವರ ದೇವರ ಆಶೀರ್ವಾದ ಇರುತ್ತೆ. ಅಶ್ವಿನಿ ಅವರಿಗೆ ಆಹ್ವಾನ ಕೂಡ ಕೊಟ್ಟಿದ್ದೇವೆ. ಆದಷ್ಟು ಬೇಗ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಕೊಂಡು ಹೊಗಲು ಹೇಳಿದ್ದೇವೆ. ಅವರ ಜೊತೆಗೆ ನಿರಂತರವಾಗಿ ಮಠ ಹಾಗೂ ಸ್ವಾಮೀಜಿ ಲಕ್ಷಾಂತರ ಭಕ್ತರು ಜೊತೆಗೆ ಇರ್ತಾರೆ. ಸ್ವಾಮೀಜಿ ಆಶೀರ್ವಾದ ಕುಟುಂಬಕ್ಕೆ ಸದಾ ಇರುತ್ತೆ ಎಂದು ತಿಳಿಸಿದರು.