ಅಪ್ಪು ಪುಣ್ಯ ಸ್ಮರಣೆಗೆ ಹೇಗಿದೆ ಸಮಾಧಿ ಅಲಂಕಾರ? ವಿವಿಧ ಹೂವುಗಳಿಂದ ಪುನೀತ್​ಗೆ ನಮನ | Puneeth Rajkumar Samadhi decorated with flowers for 11th day rituals at Kanteerava Studio


ಪುನೀತ್​ ರಾಜ್​ಕುಮಾರ್​ ಕುಟುಂಬದವರು ಇಂದು (ನ.8) 11ನೇ ದಿನದ ಕಾರ್ಯ ನೆರವೇರಿಸುತ್ತಿದ್ದಾರೆ. ಈ ಪ್ರಯುಕ್ತ ಅಪ್ಪು ಸಮಾಧಿಯನ್ನು ಹಲವು ಬಗೆಯ ಹೂವುಗಳಿಂದ ಸಿಂಗರಿಸಲಾಗಿದೆ. ವಿಶೇಷವಾಗಿ ಅಲಂಕಾರಗೊಂಡ ಸಮಾಧಿಗೆ ಡಾ. ರಾಜ್​ಕುಟುಂಬದವರು ಪೂಜೆ ಸಲ್ಲಿಸಲಿದ್ದಾರೆ. ಪುನೀತ್​ಗೆ ಇಷ್ಟವಾದ ಅಡುಗೆಗಳನ್ನು ಮಾಡಿ ಸಮಾಧಿ ಮುಂದೆ ಇರಿಸಲಿದ್ದಾರೆ. ಅಪ್ಪು ನಿವಾಸದಲ್ಲಿ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಆರಂಭ ಆಗಿವೆ. 10 ಗಂಟೆ ಸುಮಾರಿಗೆ ಕುಟುಂಬದವರು ಸಮಾಧಿ ಬಳಿ ಆಗಮಿಸಲಿದ್ದಾರೆ.

ಭಾನುವಾರ (ನ.7) ರಾತ್ರಿಯಿಂದಲೇ ಸಮಾಧಿಯನ್ನು ಸಿಂಗರಿಸುವ ಕೆಲಸ ಆರಂಭ ಆಗಿತ್ತು. ಇಂದು ಮುಂಜಾನೆ ವೇಳೆಗೆ ಸಿದ್ಧತೆ ಪೂರ್ಣಗೊಂಡಿತ್ತು. 11ನೇ ದಿನದ ಈ ಕಾರ್ಯದಲ್ಲಿ ಕುಟುಂಬದವರ ಜೊತೆ ಕೆಲವೇ ಕೆಲವು ಮಂದಿ ಆಪ್ತರು ಮಾತ್ರ ಭಾಗಿ ಆಗಲಿದ್ದಾರೆ. ಮಧ್ಯಾಹ್ನ 12 ಗಂಟೆವರೆಗೂ ಸಮಾಧಿ ದರ್ಶನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಪುನೀತ್​ ರಾಜ್​ಕುಮಾರ್​ ಮನೆ ಮತ್ತು ಸಮಾಧಿ ಬಳಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಅಪ್ಪು ಸಮಾಧಿಗೆ ನಮಿಸಲು ಪ್ರತಿ ದಿನ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ:

ಪುನೀತ್​ ಸಮಾಧಿ ಬಳಿ ಬಂದು ಹಾಡು ಹೇಳಿದ ಮಕ್ಕಳು; ಪುಟ್ಟ ಹೃದಯಗಳಿಗೆ ಅಪ್ಪು ಎಂದರೆ ಪಂಚಪ್ರಾಣ

ಪುನೀತ್​ ನಿವಾಸಕ್ಕೆ ಬಂದು ಸಾಂತ್ವನ ಹೇಳಿದ ಜಯಪ್ರದಾ; ಅಪ್ಪು ನೆನೆದು ಕಣ್ಣೀರಿಟ್ಟ ಹಿರಿಯ ನಟಿ

TV9 Kannada


Leave a Reply

Your email address will not be published.