ಅಪ್ಪು ಪ್ರೇರಣೆ.. ನೇತ್ರದಾನ‌ ಪತ್ರಕ್ಕೆ ಸಹಿ ಹಾಕಿದ ಶಾಸಕ ಜಮೀರ್ ಅಹ್ಮದ್


ಬೆಂಗಳೂರು: ಕನ್ನಡಿಗರ ಪ್ರೀತಿಯ ನಟ ಪುನೀತ್​ ರಾಜ್​ಕುಮಾರ್ ತಮ್ಮ ನಿಧನದ ನಂತರ ನಾಲ್ಕು ಮಂದಿಗೆ ಬೆಳಕು ನೀಡಿದ್ದರು. ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡ ನೋವಿನಲ್ಲೂ ಕಳೆದ 12 ದಿನಗಳಿಂದ ಸಾವಿರಾರು ಅಭಿಮಾನಿಗಳು ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಸದ್ಯ ಚಾಮರಾಜಪೇಟೆ ಕ್ಷೇತ್ರದ ಜಮೀರ್​ ಅಹ್ಮದ್ ಅವರು ಕೂಡ ಇದೇ ಹಾದಿಯಲ್ಲಿ ಮುನ್ನಡೆದಿದ್ದು, ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ.

ಇಂದು ಮಿಂಟೋ ಕಣ್ಣಿನ ಆಸ್ಪತ್ರೆಗೆ ಆಗಮಿಸಿದ್ದ ಜಮೀರ್ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಕುರಿತ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರೋ ಜಮೀರ್ ಅವರು, ಮರಣದ ನಂತರ ಈ ದೇಹ ಮಣ್ಣಲ್ಲಿ ಮಣ್ಣಾಗುವ ಮೊದಲು ಒಂದಿಬ್ಬರ ಬಾಳಿಗೆ ಬೆಳಕಾಗಬೇಕೆಂದು ನೇತ್ರದಾನ ಮಾಡಲು ನಿರ್ಧರಿಸಿ, ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿದ್ದೇನೆ. ನನ್ನಿಂದ ಎರಡು ಜೀವಗಳು ಜಗತ್ತು ನೋಡುವಂತಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ನಾಲ್ಕು ಜನರ ಉಪಯೋಗಕ್ಕೆ ಬಂದಾಗಲೇ ಮನುಷ್ಯ ಜೀವನ ಸಾರ್ಥಕ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ದಾಖಲೆ ಬರೆದ ಅಪ್ಪು ಫ್ಯಾನ್ಸ್; ಇಂದು ಒಂದೇ ದಿನ ನೇತ್ರದಾನ ಮಾಡಿದ್ದೆಷ್ಟು ಜನ ಗೊತ್ತಾ?

ಇನ್ನು ಪುನೀತ್ ರಾಜ್​ಕುಮಾರ್ ಅವರ 11ನೇ ಪುಣ್ಯ ಸ್ಮರಣೆ ದಿನ ದಾವಣಗೆರೆಯಲ್ಲಿ ಗೀತಾ ನಮನ ಕಾರ್ಯಕ್ರಮ ಆಯೋಜಿಸಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರು ಕೂಡ ನೇತ್ರದಾನ ಪತ್ರಕ್ಕೆ ಸಹಿ ಹಾಕೋ ಅಭಿಯಾನ ನಡೆಸಿದ್ದರು. ರೇಣುಕಾಚಾರ್ಯ ಅವರ ಪತ್ನಿ ಸುಮಾ ಅವರು ತಮ್ಮ ಅವಿಭಕ್ತ ಕುಟುಂಬದ 68 ಮಂದಿಯೂ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ್ದರು.

ಇದನ್ನೂ ಓದಿ: ಶಾಸಕ ರೇಣುಕಾಚಾರ್ಯ ಪತ್ನಿ ಮಾದರಿ ಕಾರ್ಯ

News First Live Kannada


Leave a Reply

Your email address will not be published. Required fields are marked *