ಕೊಪ್ಪಳ: ಐತಿಹಾಸಿಕ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಅಭಿಮಾನಿಯೊಬ್ಬರು ಪುನೀತ್ ಫೋಟೋ ಹಿಡಿದು ಬಂದಿದ್ದಾರೆ. ಸ್ಯಾಂಡಲ್ವುಡ್ನ ರಾಜಕುಮಾರ ದಿವಂಗತ ಪುನೀತ್ ರಾಜುಕಮಾರ್ ಅಗಲಿ 2 ತಿಂಗಳ ಮೇಲಾಯ್ತು. ಆದರೆ ಅಪ್ಪು ಎಲ್ಲಿಯೂ ಹೋಗಿಲ್ಲ ನಮ್ಮ ಜೊತೆಯೇ ಇದ್ದಾರೆ ಎಂದು ಈಡೀ ಕರುನಾಡಿನ ಪ್ರೇಕ್ಷಕ ಕುಲಕೋಟಿ ಸಾರಿ ಹೇಳುತ್ತಿದೆ. ಇತ್ತೀಚಿಗೆ ದೂರದ ಶಬರಿಗಿರಿ ಅಯ್ಯಪ್ಪನ ಸನ್ನಿಧಿಯಲ್ಲೂ ಕೂಡ ಅಪ್ಪು ಅಭಿಮಾನ ರಾರಾಜಿಸಿತ್ತು. ಅದರ ಬೆನ್ನಲೇ ಇದೀಗ ಅಭಿಮಾನಿಯೊಬ್ಬರು ಗವಿಸಿದ್ದೇಶ್ವರ ಜಾತ್ರೆಯಲ್ಲಿ ಅಪ್ಪು ಪೋಟೋ ಹಿಡಿದು ಆಗಮಿಸಿದ್ದಾರೆ.
ಕೊಪ್ಪಳದ ಹಮಾಲರ ಕಾಲೋನಿಯ ಹನುಮಂತ ಎನ್ನುವ ಪುನೀತ್ ಅಭಿಮಾನಿ ಅಪ್ಪು ಪೋಟೋ ಹಿಡಿದು ಬಂದು ರಥೋತ್ಸವದ ದರ್ಶನ ಮಾಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು ಅಪ್ಪು ಅಜರಾಮರ ಎಂದು ಸಾರಿ ಹೇಳುತ್ತಿದೆ. ದೇಶದಲ್ಲಿ ಕೊರೊನಾ ಹಾಗೂ ಒಮಿಕ್ರಾನ್ ಆತಂಕ ಹೆಚ್ಚಾದ ಕಾರಣ ಮಠದ ಆಡಳಿತ ಮಂಡಳಿ ಅದ್ದೂರಿ ಜಾತ್ರೆಗೆ ಬ್ರೇಕ್ ಹಾಕಿ,ಸಂಪ್ರದಾಯ ಮುರಿಯದಂತೆ ಸರಳವಾಗಿ ಜಾತ್ರೆ ಮಾಡಲಾಗುತ್ತಿದೆ.