ಬೆಂಗಳೂರು: ಸ್ಯಾಂಡಲ್ವುಡ್ನ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ಕೆಂದ್ರ ಕೌಶಲ್ಯಾಭಿವೃದ್ದಿ (ರಾಜ್ಯ) ಸಚಿವ ರಾಜೀವ್ ಚಂದ್ರಶೇಖರ್ ಭೇಟಿ ನೀಡಿದ್ದಾರೆ.
ಇಂದು ಬೆಳಗ್ಗೆ ನಿವಾಸಕ್ಕೆ ಆಗಮಿಸಿದ ಅವರು ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ರನ್ನ ಭೇಟಿ ಮಾಡಿ ಧೈರ್ಯ ತುಂಬಿದರು. ಬಳಿಕ ಮನೆಯಲ್ಲಿನ ಪುನೀತ್ ಭಾವಚಿತ್ರಕ್ಕೆ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು.
ಇತ್ತೀಚೆಗೆ ನಮ್ಮನ್ನು ಬಿಟ್ಟು ಅಗಲಿದ ನಾಡು ಕಂಡ ಅಪ್ರತಿಮ ಹೃದಯವಂತ ಕಲಾವಿದ, ಪವರ್ ಸ್ಟಾರ್ ಶ್ರೀ ಪುನೀತ್ ರಾಜ್ಕುಮಾರ್ ಮನೆಗೆ ಇಂದು ತೆರಳಿ, ಶ್ರೀ @NimmaShivanna ಸೇರಿದಂತೆ ಪುನೀತ್ ಅವರ ಕುಟುಂಬದವರಿಗೆ ಸಾಂತ್ವನ ಹೇಳಲಾಯಿತು. ಪುನೀತ್ ಎಲ್ಲ ಅಭಿಮಾನಿಗಳ ಮನೆಯ ಮಗನಾಗಿದ್ದರು, ನಾವೆಲ್ಲರೂ ಅವರ ಕುಟುಂಬದ ಶೋಕದಲ್ಲಿ ಭಾಗಿಯಾಗಿದ್ದೇವೆ. pic.twitter.com/5NndVbxELc
— Rajeev Chandrasekhar 🇮🇳 (@Rajeev_GoI) November 5, 2021