ಅಪ್ಪು ಮತ್ತು ದೇವರು ಆ ಗುಟ್ಟು ಬಿಚ್ಚಿಟ್ಟ ಖ್ಯಾತ ಸ್ಟಂಟ್​ ಮಾಸ್ಟರ್​ ರವಿವರ್ಮಾ

ಅಪ್ಪು ನಮ್ಮನ್ನೆಲ್ಲ ಅಗಲಿ ತಿಂಗಳಾಗುತ್ತಾ ಬಂದ್ರು, ಅವರ ನೆನಪೂ ಮಾತ್ರ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಅಪ್ಪು ಅವರ ಜೊತೆ 14 ಸಿನಿಮಾಗಳಲ್ಲಿ ಫೈಟ್​ ಮಾಸ್ಟರ್​ ಆಗಿ ಕೆಲಸ ಮಾಡಿದ ರವಿ ವರ್ಮ ಅಪ್ಪು ನೆನಪಿನ ಬುತ್ತಿ ಬಿಚ್ಚಿಟ್ಟಿದ್ದಾರೆ.

‘ಅಪ್ಪು’ ಸಿನಿಮಾದಿಂದ ಪ್ರಾರಂಭವಾದ ರವಿ-ಅಪ್ಪು ಸ್ನೇಹ, ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ ‘ಜೇಮ್ಸ್’ ವರೆಗೂ ಮುಂದುವರೆದಿದೆ. ‘ಅಪ್ಪು’ ಸಿನಿಮಾದಲ್ಲಿ ಕೇವಲ ಫೈಟರ್​ ಆಗಿದ್ದ ರವಿವರ್ಮನನ್ನು ಅಂದೇ ಗುರುತಿಸಿದ್ದರು ಅಪ್ಪು, ಅದನ್ನು ನೆನಪಿನಲ್ಲಿಟ್ಟುಕೊಂಡು ‘ವಂಶಿ’ ಸಿನಿಮಾದಲ್ಲಿ ಮಳೆಯಲ್ಲಿ ಫೈಟ್​ ಮಾಡೋ ಅವಕಾಶವನ್ನು ನೀಡಿದ್ರಂತೆ ಅಪ್ಪು. ಅಲ್ಲಿಂದ ಪ್ರಾರಂಭವಾದ ಅಪ್ಪು- ರವಿ ಕಾಂಬೊ ಮೈನವಿರೇಳಿಸೋ ಸ್ಟಂಟ್​ಗಳನ್ನು ನೀಡಿದ್ದಾರೆ ಈ ಜೋಡಿ.

‘ಜಾಕಿ’ ಸಿನಿಮಾದಲ್ಲಿ ಮಾಡಿದ ಫೈಟ್​ ಗಾಗಿ ರವಿ ವರ್ಮ ಬಾಲಿವುಡ್​ಗೂ ಎಂಟ್ರಿ ಕೊಟ್ರು. ಪ್ರಭುದೇವಾ ಜೊತೆ ಕೆಲಸ ಮಾಡೋ ಅವಕಾಶವನ್ನು ಸಹ ಪಡೆದುಕೊಂಡ್ರು ರವಿ. ಅಷ್ಟೆ ಅಲ್ಲ ಬಿಡುಗಡೆಗೆ ಸಿದ್ಧವಾಗಿರುವ ‘ಜೇಮ್ಸ್’​ ಮತ್ತು ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯಲ್ಲಿ ಮೂಡಿಬರುತ್ತಿರುವ ‘ಲಕ್ಕಿ  ಮ್ಯಾನ್’​ ಸಿನಿಮಾದಲ್ಲೂ ಅಪ್ಪು ಮತ್ತು ರವಿ ವರ್ಮ ಸ್ಟಂಟ್ಸ್​ ಜೋರಾಗಿಯೇ ಇದೆ. ಲಕ್ಕಿ ಮ್ಯಾನ್​ ಸಿನಿಮಾದಲ್ಲಿ ಅಪ್ಪು ದೇವರ ಪಾತ್ರ ಮಾಡಿದ್ದಾರಂತೆ. ಕೊನೆಯ ಸಿನಿಮಾದಲ್ಲಿ ಇಂತಹ ಪಾತ್ರ ಸಿಕ್ಕಿದ್ದು ನಿಜಕ್ಕೂ ವಿಪರ್ಯಾಸವೇ ಸರಿ

News First Live Kannada

Leave a comment

Your email address will not be published. Required fields are marked *