ಅಪ್ಪು ಮಾಮ ಹೋದ್ಮೇಲೆ, ಎಷ್ಟು ನೋವು ಅನುಭವಿಸಿದೀನಿ ಅಂತಾ ನಂಗೆ ಗೊತ್ತು; ಶ್ರೀಮುರುಳಿ


ಕನ್ನಡದ ಪವರ್​ಸ್ಟಾರ್​ ಅಪ್ಪು ಅಗಲಿ ಇಂದಿಗೆ 16 ದಿನಗಳು ಕಳೆದಿವೆ. ಆದರೆ ಇನ್ನೂ ಕೂಡ ರಾಜ್ಯದ ಜನತೆಗೆ ಅಪ್ಪು ಉಲ್ಲದ ನೋವು ಆವರಿಸಿದೆ. ಅವರು ಇಲ್ಲ ಅನ್ನೋದನ್ನೇ ನಂಬೋಕೆ ಯಾರಿಗೂ ಸಾಧ್ಯವಾಗುತ್ತಿಲ್ಲ.. ಆ ನಗು.. ಅಸಂಖ್ಯಾತ ಪ್ರತಿಭಾವಂತರಿಗೆ ನೆಲೆ ಒದಗಿಸಬೇಕು ಅನ್ನೋ ಅಸಂಖ್ಯೆ ಕನಸುಗಳನ್ನು ತುಂಬಿಕೊಂಡಿದ್ದ ಆ ಕಣ್ಣುಗಳು ಕೋಟಿ ಕನ್ನಡಿಗರ ಹೃದಯದಲ್ಲಿ ಶಾಶ್ವತವಾಗಿದೆ.

ಇನ್ನು ನಟ ಶ್ರೀ ಮುರಳಿ ಅಪ್ಪು ಬಾರದ ಲೋಕಕ್ಕೆ ಪಯಣ ನೆನೆದು ಭಾವುಕರಾಗಿದ್ದಾರೆ, ಆ ಘಟನೆ ನಡೆಯುವ ಹಿಂದಿನ ದಿನ ನಾವಿಬ್ಬರು ಕೂಡ ಜಿಮ್​ನಲ್ಲಿ ಒಟ್ಟಿಗೆ ಇದ್ವಿ.. ಆಗ ಬಂದು ಬಂದು ನನಗೆ ಟಿಪ್ಸ್​ ಕೊಡ್ತಿದ್ದರು. ಇವತ್ತು ಅವರಿಲ್ಲ ಎಂದ್ಮೇಲೆ ನಾನು ಅನುಭವಿಸ್ತಿರೋ ನೋವು ನನಗೊಬ್ಬನಿಗೆ ಮಾತ್ರ ಗೊತ್ತು. ಹೀಗಾಗಿ ನಾವು ಎಷ್ಟು ದಿನ ಇರ್ತಿವಿ ಗೊತ್ತಿಲ್ಲ ಹಾಗಾಗಿ ಎಲ್ಲರ ಜೊತೆ ನಗುವಿನಿಂದ ಸಂತೋಷವಾಗಿ ಇಬೇಕು ಎಂದರು.

ಇದನ್ನೂ ಓದಿ:ಸೋನು ಸೂದ್​​ಗೆ ಪದ್ಮಶ್ರೀ ನೀಡದಿದ್ದಕ್ಕೆ ಫ್ಯಾನ್ಸ್​ ಬೇಸರ; ‘ಜನರ ಪ್ರೀತಿಯೇ ದೊಡ್ಡ ಪ್ರಶಸ್ತಿ’ ಎಂದ ನಟ

ಯಾರಿಗೆ ಒಳ್ಳೇದ ಮಾಡಕ್ಕಾಗುತ್ತೋ ನನಗೆ ಗೊತ್ತಿಲ್ಲ. ಆದರೆ ಯಾರು ಬೇರೆದವರಿಗೆ ಕೆಟ್ಟದನ್ನ ಮಾಡೋಕೆ ಮಾತ್ರ ದಯವಿಟ್ಟು ಯೋಚನೆ ಮಾಡಬೇಡಿ. ಜೀವನ ನಾವು ಅನ್ಕೊಂಡಗಿಲ್ಲ. ನನಗೆ ದೇವರ ಮೇಲೆ ತುಂಬ ಕೋಪ ಇದೆ ಅಪ್ಪು ಮಾಮಾನೇ ಇಲ್ಲ ಅಂದ್ಮೇಲೆ ಆ ದೇವರ ಬಳಿ ನಾನೇನು ಕೇಳಲಿ. ಅವ್ರು ಹೋದ್ಮೇಲೆ ನನಗೆ ಜೀವನದ ಮೇಲೆ ಭರವಸೆಯೇ ಇಲ್ಲದಾಗಿದೆ. ಹಾಗಾಗಿ ಇದ್ದಾಗಲೇ ಎಲ್ಲರ ಜೊತೆ ಚೆನ್ನಾಗಿ ಇಬೇಕು ಅಂತ ಶ್ರೀಮುರುಳಿ ತಮ್ಮ ಮಾತುಗಳನ್ನ ಹಂಚಿಕೊಂಡರು.

ಇದನ್ನೂ ಓದಿ: ಪ್ರೀತಿಸಿ ಮದ್ವೆ ಆಗಿ.. ಕನಸಿನ ಕೂಸಿನ ನಿರೀಕ್ಷೆಯಲ್ಲಿದ್ದ ದಂಪತಿ ಮಲಗಿದ್ದಲ್ಲೇ ಜೀವಂತ ಸಮಾಧಿ

 

News First Live Kannada


Leave a Reply

Your email address will not be published. Required fields are marked *