ಅಪ್ಪು ಮೇಲಿನ ಅಭಿಮಾನಕ್ಕೆ ”ಜೇಮ್ಸ್”​ ಡೈರೆಕ್ಟರ್​ ಚೇತನ್ ಮಾಡಿದ್ದೇನು ಗೋತ್ತಾ..?


ಕೋಟಿ ಕೋಟಿ ಅಭಿಮಾನಿಗಳಂತೆ ನಿರ್ದೇಶಕ ಚೇತನ್ ಕುಮಾರ್ ಕೂಡ ಅಪ್ಪು ಅವರ ಅಭಿಮಾನಿ. ಅಪ್ಪು ಜೊತೆ ಸಿನಿಮಾ ಮಾಡ್ಬೇಕು ಅಂತ ದೊಡ್ಡ ಕನಸು ಕಂಡಿದ್ದರು. ಆ ಕನಸು ಜೇಮ್ಸ್ ಚಿತ್ರದೊಂದಿಗೆ ನೆರವೇರಿತು. ಆದ್ರೆ ವಿಧಿಯಾಟ ನಿರ್ದೇಶಕರ ಕಲ್ಪನೆಗೂ ಮೀರಿದಾಗಿತ್ತು.. ಅಪ್ಪು ಅಕಾಲಿಕ ಅಗಲಿಕೆ ಇಡೀ ಕರುನಾಡಿಗೆ ಬರಸಿಡಿಲಾದ್ರೆ ಚೇತನ್ ಕುಮಾರ್ ಜೇಮ್ಸ್ ತಂಡಕ್ಕೆ ಕಗ್ಗತ್ತಲು.. ಮುಂದೇನು ಮಾಡೋದು ಅಂತ ದಿಕ್ಕು ಕಾಣದೆ ಕುಳಿತ್ತಿದ್ದ ಚೇತನ್ ಕುಮಾರ್​ಗೆ ದಾರಿ ತೋರಿಸಿದ್ದು ಪುನೀತ್ ರಾಜ್ ಕುಮಾರ್​.. ಅರೇ ಅದು ಹೇಗೆ ಅನ್ನೋರು ಈ ಸ್ಟೋರಿನಾ ಓದ್ಲೇಬೇಕು..

ದೂರದಿಂದ ನೋಡಿದವರು ಹತ್ತಿರದಿಂದ ನೋಡಿದವರು ನೋಡದೇ ಇದ್ದವರು ಇಡೀ ಕರ್ನಾಟಕದವರು ಅಪ್ಪು ಅವರ ಸ್ನೇಹಿತ ಮಹಾಶಯರು ಈ ಎಲ್ಲರೂ ಅಕ್ಟೋಬರ್ 29ನೇ ತಾರೀಖ್ ಅಪ್ಪು ಅಗಲಿಕೆಯ ಅಚ್ಚರಿಯ ಆಘಾತವನ್ನ ಅರಗಿಸಿಕೊಳ್ಳಲಾಗದೆ ಪರದಾಡಿದ್ದಾರೆ.. ಇನ್ನು ಕಡೆ ದಿನ ಅಪ್ಪು ಅವರ ಜೊತೆಗೆ ಇದ್ದು ಪ್ರತಿನಿತ್ಯ ಅಪ್ಪು ಅವರ ಜೊತೆ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದ ಚೇತನ್ ಕುಮಾರ್​ ಗೆ ಅಪ್ಪು ಇನ್ನಿಲ್ಲ ಅನ್ನೋ ಆಘಾತ ಎಷ್ಟು ಗಾಡವಾಗಿ ಕಾಡಿರಬಹುದು ಊಹಿಸಿ.. ಅಕ್ಷರಶಃ ಕಂಗಾಲಾಗಿದ್ದರು ಚೇತನ್ ಕುಮಾರ್.. ಜೇಮ್ಸ್ ನಿರ್ದೇಶಕರಿಗೆ ನಡೆದ ದಾರಿಯಲ್ಲಾ ಆ ಕ್ಷಣ ಕತ್ತಲು ಕಗ್ಗತ್ತಲು..

ಪವರ್​ ​ಸ್ಟಾರ್ ಪುನೀತ್ ರಾಜ್ ಕುಮಾರ್ ಕೊನೆಯ ಕಮರ್ಶಿಯಲ್​​ ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ. ಮಾರ್ಚ್ 17 ರಂದು ಅಪ್ಪು ಹುಟ್ಟುಹಬ್ಬಕ್ಕೆ ಜೇಮ್ಸ್ ಎಂಟ್ರಿಯಾಗಲಿದೆ. ಇತ್ತೀಚೆಗಷ್ಟೇ ಜೇಮ್ಸ್ ಟೀಸರ್​ ರಿಲೀಸ್ ಆಗಿದ್ದು, ಎಲ್ಲಾ ಕಡೆ ಧೂಳೆಬ್ಬಿಸಿದೆ.. ನಿರ್ದೇಶಕ ಚೇತನ್ ಕುಮಾರ್ ಪಾಲಿಗೆ ಅಪ್ಪು ಕೊನೆ ಚಿತ್ರಕ್ಕೆ ಡೈರೆಕ್ಷನ್ ಮಾಡಿದ್ದು ಸೌಭಾಗ್ಯವೋ ದೌರ್ಭಾಗ್ಯವೋ ದೇವರೇ ಹೇಳಬೇಕು.. ಈ ಬಗ್ಗೆ ಚೇತನ್ ಕುಮಾರ್ ಪಸ್ಟ್ ಟೈಮ್ ಮನಬಿಚ್ಚಿ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ್ದಾರೆ.. ಅವರ ಮಾತುಗಳಲ್ಲಿ ಮರೆಯಲಾಗದ ಮಾಣಿಕ್ಯ ಕರ್ನಾಟಕ ರತ್ನನ ನೆನಪಿನ ಹೊಳಪು ಎದ್ದು ಕಾಣುತ್ತಿದೆ..

ಕೈಮೇಲೆ ಅಪ್ಪು ಬಂದ ನಂತರ ಚೇತನ್​​ಗೆ ಸಿಕ್ತಾ ಪವರ್?

ಅಪ್ಪು ಅವರು ಚಿತ್ರ ತನ್ನ ಕೈ ಮೇಲೆ ಬಂದ ನಂತರ ಚೇತನ್ ಕುಮಾರ್ ಅವರಿಗೆ ಅದೇನೋ ಗೊತ್ತು ಗುತ್ತಿಲ್ಲದೇ ಒಂದು ಪವರ್ ಒಳಗೆ ಕೆಲಸ ಮಾಡಲು ಶುರು ಮಾಡಿತ್ತು.. ಅಪ್ಪು ಸರ್ ಹೋದ್ಮೇಲೆ ಸುಮಾರು 15 ದಿನ ಯಾವ ಕೆಲಸನೂ ಮಾಡೋಕೆ ಆಗಿಲ್ಲ… ಅಪ್ಪು ಸಮಾಧಿಗೆ ತೆರಳಿ ಮನಸಾರೆ ಕೈ ಮುಗಿದು ಜೇಮ್ಸ್ ಕೆಲಸಕ್ಕೆ ಮುಂದಾದ್ರು ಚೇತನ್ ಕುಮಾರ್.. ಪುನೀತ್ ಇನ್ನಿಲ್ಲ ಎಂಬ ನೋವಿನಲ್ಲಿದ್ದರೂ ಅವರ ಕೊನೆಯ ಚಿತ್ರವನ್ನು ಬಹಳ ಚೆನ್ನಾಗಿ ಪ್ರೆಸೆಂಟ್ ಮಾಡಬೇಕೆಂದು ನಿರ್ಧರಿಸಿ ತೆರೆಗೆ ತರುವ ಹಾದಿಯಲ್ಲಿದ್ದಾರೆ ಜೇಮ್ಸ್ ಡೈರೆಕ್ಟರ್.

ಮೊನ್ನೆ 11ನೇ ತಾರೀಖ್ ಒಂದು ಪವರ್ ಫುಲ್ ಟೀಸರ್ ಅನ್ನ ಜೇಮ್ಸ್ ತಂಡ ಅಪ್ಪು ಅಭಿಮಾನಿ ದೇವರುಗಳಿಗೆ ಅರ್ಪಣೆ ಮಾಡಿದೆ.. ಆಗ ಅಪ್ಪು ಅಭಿಮಾನಿ ದೇವರುಗಳಿಂದ ಚೇತನ್​​ಗೆ ಸಿಕ್ಕ ಪ್ರಶಂಸೆ ಎಂಥದ್ದು ಗೊತ್ತಾ?

ಚೇತನ್​​ಗೆ ಕರೆ ಮಾಡಿ ಕಣ್ಣೀರಿಟ್ಟ ಪವರ್ ಫ್ಯಾನ್ಸ್
ಜೇಮ್ಸ್ ಟೀಸರ್ ನೋಡಿದ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಬಹಳಷ್ಟು ಜನ ನಿರ್ದೇಶಕ ಚೇತನ್ ಕುಮಾರ್ ಅವರಿಗೆ ಕಾಲ್ ಮಾಡಿ ಥ್ಯಾಂಕ್ಸ್ ಹೇಳಿದ್ದಾರೆ. ಅದರಲ್ಲಿ ಬಹುತೇಕರು ಈ ಟೈಂನಲ್ಲಿ ಅಪ್ಪು ಸರ್ ಇರಬೇಕಿತ್ತು ಎಂದು ಕಣ್ಣೀರು ಹಾಕಿದ್ರಂತೆ. ಅಪ್ಪು ಸರ್ ಈ ಟೈಂಮಲ್ಲಿ ಇದ್ದ್ದಿದ್ರೆ ಅನ್ನೋ ಎಮೋಷನ್ ಜಾಸ್ತಿ, ದೈಹಿಕವಾಗಿ ಇಲ್ಲ ಅಂದ್ರೂ ನಮ್ಮ ಜೊತೆಯಲ್ಲಿದ್ದು, ನಮ್ಮನ್ನ ಮುನ್ನಡೆಸಿಕೊಂಡು ಹೋಗ್ತಿದ್ದಾರೆ ಎಂಬ ನಂಬಿಕೆ ವ್ಯಕ್ತಪಡಿಸ್ತಾರೆ ಚೇತನ್.

ಕಂಪ್ಲೀಟ್ ಶೂಟಿಂಗ್ ಮುಗಿಸಿದ್ದರು ಪವರ್​ಸ್ಟಾರ್
ಪುನೀತ್ ಅವರ ಅಕಾಲಿಕ ನಿಧನದ ನಂತರ ಜೇಮ್ಸ್ ಕುರಿತು ಆತಂಕ ಎದುರಾಗಿತ್ತು. ಅಪ್ಪು ಪೂರ್ತಿ ಶೂಟಿಂಗ್ ಮಾಡಿದ್ರಾ, ಈ ಸಿನಿಮಾ ರಿಲೀಸ್ ಆಗಲ್ವಾ ಎಂಬ ಗೊಂದಲ ಕಾಡಿತ್ತು. ಆದರೆ, ಟಾಕಿ ಪೋಷನ್ ಕಂಪ್ಲೀಟ್ ಮಾಡಿಕೊಟ್ಟಿದ್ದ ಅಪ್ಪು, ಒಂದು ಹಾಡನ್ನ ಮಾತ್ರ ಬಾಕಿ ಉಳಿಸಿಕೊಂಡಿದ್ದರಂತೆ. ಈಗ ಆ ಡುಯೇಟ್ ಹಾಡನ್ನು ಡ್ರಾಪ್ ಮಾಡಲಾಗಿದೆ.

ಶಿವಣ್ಣ ಬಂದ್ಮೇಲೆನೇ ಜೇಮ್ಸ್​ಗೆ ಪವರ್ ಸಿಕ್ಕಿದ್ದು

ಪುನೀತ್ ರಾಜ್ ಕುಮಾರ್ ಪಾತ್ರಕ್ಕೆ ಯಾರಿಂದ ವಾಯ್ಸ್ ಡಬ್ ಮಾಡಿಸೋದು ಅಂತ ತಲೆಕೆಡಿಸಿಕೊಂಡಿದ್ದ ಡೈರೆಕ್ಟರ್, ಏಳೆಂಟು ಜನರನ್ನು ಕರೆಯಿಸಿ ಒಂದು ಸುತ್ತ ಪ್ರಯತ್ನ ಪಟ್ರಂತೆ. ಅದ್ಯಾಕೋ ಅದು ಸಮಾಧಾನ ಆಗಿಲ್ಲ. ಆಮೇಲೆ ಇದಕ್ಕೆ ಶಿವಣ್ಣ ಬಿಟ್ರೆ ಬೇರೆ ಯಾರೂ ಸೂಕ್ತವಲ್ಲ ಅಂತ ನಿರ್ಧರಿಸಲಾಯಿತು. ಸೆಂಚುರಿ ಸ್ಟಾರ್ ಬಂದ್ಮೇಲೆಯೇ ಅಪ್ಪು ಪಾತ್ರಕ್ಕೆ ಜೀವ ಬಂದಿದ್ದು.

ಜೇಮ್ಸ್ ಚಿತ್ರದಲ್ಲಿ ಅಣ್ಣಾವ್ರ ಮಕ್ಕಳು ನಟನೆ
ಶಿವಣ್ಣ, ರಾಘಣ್ಣ, ಪುನೀತ್ ಅವರನ್ನು ಒಂದೇ ಚಿತ್ರದಲ್ಲಿ ನೋಡಬೇಕು ಎನ್ನುವ ಆಸೆ ಕೋಟ್ಯಾಂತರ ಅಭಿಮಾನಿಗಳದ್ದು ಆಗಿತ್ತು. ಆದರೆ, ಅದಕ್ಕೆ ಸರಿಯಾದ ಸಮಯ ಬಂದಿರಲಿಲ್ಲ. ಇದೀಗ, ಜೇಮ್ಸ್ ಸಿನಿಮಾದ ವಿಶೇಷ ಪಾತ್ರಗಳಲ್ಲಿ ಅಣ್ಣಾವ್ರ ಮಕ್ಕಳು ಒಟ್ಟಿಗೆ ನಟಿಸುವ ಮೂಲಕ ದೊಡ್ಮನೆ ಫ್ಯಾನ್ಸ್​ ಆಸೆ ನೆರವೇರಿದೆ.

ಅಪ್ಪು ಆರ್ಮಿ ಲುಕ್ ಫಸ್ಟ್ ಯಾರು ನೋಡಿದ್ದು?

ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಆರ್ಮಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಗೆಟಪ್​ಗೆ ರೆಡಿಯಾದಾಗ ಮೊದಲು ನೋಡಿದ್ದೇ ಅಪ್ಪು ಪತ್ನಿ ಅಶ್ವಿನಿ ಅವರಂತೆ.

ಈ ಮೊದಲೇ ಹೇಳಿದಂತೆ ನಿರ್ದೇಶಕ ಚೇತನ್ ಕುಮಾರ್ ಅಪ್ಪು ಅವರ ಅಭಿಮಾನಿ. ಈ ಅಭಿಮಾನವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿರುವ ಚೇತನ್, ಪವರ್ ಸ್ಟಾರ್ ಹೆಸರು ಕೈ ಮೇಲೆ ಇದ್ದರೆ ಅವರು ನನ್ನ ಜೊತೆಯಲ್ಲೇ ಇದ್ದಂತೆ, ಅದೊಂಥರ ಎನರ್ಜಿ’ ಎಂದಿದ್ದಾರೆ.

The post ಅಪ್ಪು ಮೇಲಿನ ಅಭಿಮಾನಕ್ಕೆ ”ಜೇಮ್ಸ್”​ ಡೈರೆಕ್ಟರ್​ ಚೇತನ್ ಮಾಡಿದ್ದೇನು ಗೋತ್ತಾ..? appeared first on News First Kannada.

News First Live Kannada


Leave a Reply

Your email address will not be published.