ಅಪ್ಪು ಮೇಲಿನ ಜನರ ಪ್ರೀತಿ ಅನುಸಾರ ಸರ್ಕಾರ ಅವರನ್ನು ಗೌರವಿಸಲಿದೆ: ಬಸವರಾಜ ಬೊಮ್ಮಾಯಿ ಹೇಳಿಕೆ | CM Basavaraj Bommai visits Puneeth Rajkumar House at Bengaluru


ಅಪ್ಪು ಮೇಲಿನ ಜನರ ಪ್ರೀತಿ ಅನುಸಾರ ಸರ್ಕಾರ ಅವರನ್ನು ಗೌರವಿಸಲಿದೆ: ಬಸವರಾಜ ಬೊಮ್ಮಾಯಿ ಹೇಳಿಕೆ

ಪುನೀತ್ ರಾಜ್​​ಕುಮಾರ್ ನಿವಾಸದಲ್ಲಿ ಕುಟುಂಬಸ್ಥರನ್ನು ಭೇಟಿಯಾದ ಬಸವರಾಜ ಬೊಮ್ಮಾಯಿ

ಬೆಂಗಳೂರು: ಅಕ್ಕರೆಯ ಅಪ್ಪು ಕಳೆದುಕೊಂಡು 8 ದಿನಗಳಾಯಿತು. ಮುಂದೆ ಆಗಬೇಕಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ನಟ ಪುನೀತ್ ರಾಜ್​ಕುಮಾರ್​ ಕನ್ನಡದ ಆಸ್ತಿ ಎಂದು ಪುನೀತ್ ರಾಜ್​ಕುಮಾರ್​ ಕುಟುಂಬಸ್ಥರನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಪುನೀತ್ ಸಮಾಧಿ ದರ್ಶನ ಪಡೆಯುತ್ತಿದ್ದಾರೆ. ಮುಂದಿನ ಕಾರ್ಯಕ್ರಮ ಸುಸೂತ್ರವಾಗಿ ನಡೆಸುವ ಬಗ್ಗೆ ಚರ್ಚೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕುಟುಂಬಸ್ಥರ ನಡೆಸುವ ಎಲ್ಲ ಕಾರ್ಯಗಳ ಜತೆ ಸರ್ಕಾರವಿರುತ್ತೆ. ನಮ್ಮ ಕುಟುಂಬದ ಒಬ್ಬರನ್ನ ಕಳೆದುಕೊಂಡಂತಹ ಭಾವನೆಯಿದೆ. ಹಾಗಾಗಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದೇವೆ. ಇಡೀ ರಾಜ್ಯ ನಿಮ್ಮ ಜೊತೆಯಿದೆ ಎಂದು ಧೈರ್ಯ ಹೇಳಿದ್ದೇವೆ. ನವೆಂಬರ್ 16 ರಂದು ಫಿಲ್ಮ್​ ಚೇಂಬರ್​ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಫಿಲ್ಮ್ ಚೇಂಬರ್​ ಕಾರ್ಯಕ್ರಮಕ್ಕೆ ಸರ್ಕಾರದ ಬೆಂಬಲವಿರುತ್ತೆ. ಮುಂದಿನ ದಿನಗಳಲ್ಲೂ ಪುನೀತ್​ಗೆ ಸರ್ಕಾರ ಗೌರವ ಕೊಡಲಿದೆ. ಅಪ್ಪು ಮೇಲೆ ಜನರ ಪ್ರೀತಿ ಅನುಸಾರ ಸರ್ಕಾರ ಗೌರವಿಸಲಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ನಟ ಪುನೀತ್ ಪತ್ನಿ ಅಶ್ವಿನಿಗೆ ಸಿಎಂ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ಪುನೀತ್ ಅಕ್ಟೋಬರ್ 29 ರಂದು ನಿಧನರಾಗಿದ್ದರು. ಇಂದು (ನವೆಂಬರ್ 5) ಬೆಂಗಳೂರಿನ ಸದಾಶಿವನಗರದ ಪುನೀತ್ ನಿವಾಸದಲ್ಲಿ ಕುಟುಂಬಸ್ಥರನ್ನು ಬಸವರಾಜ ಬೊಮ್ಮಾಯಿ ಭೇಟಿ ಆಗಿದ್ದಾರೆ. ಸಚಿವರಾದ ಆರ್.ಅಶೋಕ್, ಸಿ.ಎನ್.ಅಶ್ವತ್ಥ್​ ನಾರಾಯಣ, ರಾಘವೇಂದ್ರ ರಾಜ್​ಕುಮಾರ್, ಎಸ್.ಎ. ಗೋವಿಂದರಾಜು, ಚಿನ್ನೇಗೌಡ, ಯುವರಾಜ್​ಕುಮಾರ್​ ಮತ್ತಿತರರು ಉಪಸ್ಥಿತರಿದ್ದರು.

ಹವಾಮಾನ ವೈಪರೀತ್ಯ, ಸಿಎಂ ಚಿತ್ರದುರ್ಗ ಪ್ರವಾಸ ರದ್ದು
ಇಂದು ಸಂಜೆಗೆ ಚಿತ್ರದುರ್ಗದಲ್ಲಿ ನಿಗದಿಯಾಗಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರ ಎಲ್ಲಾ ಕಾರ್ಯಕ್ರಮ ರದ್ದುಗೊಳಿಸಲಾಗಿತ್ತು. ರಸ್ತೆ ಮೂಲಕ ಚಿತ್ರದುರ್ಗಕ್ಕೆ ತೆರಳಲು ಬೊಮ್ಮಾಯಿ ಚಿಂತನೆ ನಡೆಸಿದ್ದರು. ಆದ್ರೆ ತಡವಾಗುತ್ತೆಂಬ ಕಾರಣಕ್ಕೆ ಚಿತ್ರದುರ್ಗ ಪ್ರವಾಸ ರದ್ದು ಮಾಡಿದ್ದಾರೆ. ಹೀಗಾಗಿ ಚಿತ್ರದುರ್ಗದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ರದ್ದು ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿ ಗ್ರಾಮದಲ್ಲಿ ತರಳಬಾಳು ಮಠದಿಂದ ಶಿವ ಸಂಚಾರ ನಾಟಕೋತ್ಸವ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಗೆ ನಾಟಕೋತ್ಸವಕ್ಕೆ ಸಿಎಂ ಆಗಮಿಸಬೇಕಿತ್ತು.

ಇದನ್ನೂ ಓದಿ: Puneeth Rajkumar: ಮುಂದುವರಿದ ಅಪ್ಪು ಅಭಿಮಾನಿಗಳ ಸಾವಿನ ಸರಣಿ; ಮತ್ತೆ ಇಬ್ಬರು ನಿಧನ

ಇದನ್ನೂ ಓದಿ: Bengaluru Rain: ರಾಜಕಾಲುವೆಯಲ್ಲಿ ಹೂಳು ತುಂಬಿರುವುದೇ ಹೆಚ್ಚು ಸಮಸ್ಯೆ- ತುರ್ತು ಸಭೆ ಬಳಿಕ ಸಿಎಂ ಬೊಮ್ಮಾಯಿ

TV9 Kannada


Leave a Reply

Your email address will not be published. Required fields are marked *