ಅಪ್ಪು ಮೇಲೆ ತಮಿಳರ ಅಭಿಮಾನ; ದೇವಸ್ಥಾನದಲ್ಲಿ ಪುನೀತ್​​ ಫೋಟೋ ಇಟ್ಟು ಪೂಜೆ


ಸ್ಯಾಂಡಲ್​​ವುಡ್​​ ನಟ ಪವರ್​​ ಸ್ಟಾರ್​​ ಪುನೀತ್ ರಾಜ್​ಕುಮಾರ್​ ಇನ್ನಿಲ್ಲ ಎಂಬ ಸತ್ಯ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯವೇ ಇಲ್ಲ. ಹೀಗಿರುವಾಗಲೇ ಪದೇಪದೇ ಅಭಿಮಾನಿಗಳು ಪುನೀತ್ ಫೋಟೋ ಮತ್ತು ವಿಡಿಯೋಗಳನ್ನು ಶೇರ್​​ ಮಾಡುತ್ತಲೇ ಇರುತ್ತಾರೆ. ಇವು ಸಾಕಷ್ಟು ವೈರಲ್​​ ಆಗಿ ಅಭಿಮಾನಿಗಳನ್ನು ಇನ್ನಷ್ಟು ದುಃಖಿತರನ್ನಾಗಿ ಮಾಡುತ್ತಿವೆ. ಈ ನಡುವೆ ಮತ್ತೊಂದು ವಿಡಿಯೋ ವೈರಲ್​ ಆಗಿದ್ದು, ಪುನೀತ್​​ ರಾಜಕುಮಾರ್​​ ಅವರನ್ನು ಪದೇಪದೇ ನೆನಪು ಮಾಡಲಾಗುತ್ತಿದೆ.

ಹೌದು, ತಮಿಳುನಾಡಿನ ದೇವಸ್ಥಾನವೊಂದರಲ್ಲಿ ಅಪ್ಪು ಫೋಟೋ ಇಟ್ಟು ಪೂಜೆ ಮಾಡಲಾಗಿದೆ. ಇದಕ್ಕೆ ಹಲವರು ಭಾಷೆ ಯಾವುದಾದರೂ ಏನು ಅಭಿಮಾನ ಮುಖ್ಯ ಎಂದು ವಾಟ್ಸಪ್​​ನಲ್ಲಿ ವಿಡಿಯೋ ಶೇರ್​​ ಮಾಡುತ್ತಿದ್ದಾರೆ.

ಪುನೀತ್​​ ಇನ್ನಿಲ್ಲ ಎಂಬ ದುಃಖದ ಘಟನೆಯಿಂದ ಹೊರ ಬರೋಕೆ ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ಸಮಯ ಬೇಕಾಗಲಿದೆ. ​ಅಪ್ಪು​ ಸಿನಿಮಾ ರಿಲೀಸ್ ಆಗುವಾಗ ಫ್ಯಾನ್ಸ್​ ಕಟೌಟ್​ಗೆ ಹಾರಗಳನ್ನು ಹಾಕುತ್ತಿದ್ದರು. ಹಾಲಿನ ಅಭಿಷೇಕ ಮಾಡುತ್ತಿದ್ದರು. ಆದರೀಗ ಪುನೀತ್​ಗೆ ಮಾಲೆ ಹಾಕಿರುವ​ ಫೋಟೋಸ್​​ ನೋಡೋದು ತುಂಬಾ ಕಷ್ಟವೇ ಸರಿ.

ಇದನ್ನೂ ಓದಿ: ಅಪ್ಪು ಸಾವಿನ ಕುರಿತು ತನಿಖೆಗಾಗಿ ಅಭಿಮಾನಿ ದೂರು; ಅಪ್ಪುನೇ ಇಲ್ಲ ದೂರು ಯಾಕೆ? ಎಂದ ಶಿವಣ್ಣ

News First Live Kannada


Leave a Reply

Your email address will not be published. Required fields are marked *