ಕೊರೊನಾ ಬಂದ ಸಂದರ್ಭದಿಂದಲೂ ಸಂಕಷ್ಟದಲ್ಲಿರೋ ಕನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಅಘಾತಗಳು ಎದುರಾಗುತ್ತಿದೆ. ಈಗ ನಾವು ಒಂದು ಪವರ್ ಅನ್ನು ಕಳೆದುಕೊಂಡಿದ್ದೇವೆ. ಭಗವಂತ ಇದನ್ನೂ ಇಲ್ಲಿಗೆ ಇದನ್ನು ಸಾಕು ಮಾಡಬೇಕು. ನಮಗೆ ಇನ್ನು ತಡೆದುಕೊಳ್ಳುವ ಶಕ್ತಿ ಇಲ್ಲ ಎಂದು ನಟಿ ತಾರಾ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತಾರಾ ಅವರು, ಅಪ್ಪು ವಯಸ್ಸು 46,ಅವ್ರ ಅಂತ್ಯಕ್ರಿಯೆ ನಡ್ದಿದ್ದು 46 ಗಂಟೆಗೆ.. ಅಲ್ಲದೇ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಅವರನ್ನು ಕಳೆದುಕೊಂಡಿದ್ದೇವೆ. ಕಾಕತಾಳೀಯ ಎಂದರೇ ಮೂವರ ಹುಟ್ಟಿದ ದಿನಾಂಕ 17 ಆಗಿದೆ. ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದಾನೆ ಅನ್ನೋದನ್ನ ಇಲ್ಲಿಗವರೆಗೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಕನ್ನಡ ಚಿತ್ರರಂಗ ಈಗ ಒಂದು ಪವರ್ ಅನ್ನು ಕಳೆದುಕೊಂಡಿದೆ. ದೇವು ಅನ್ನು ಹೇಗೆ ವಾಪಸ್ ಕೊಡ್ತಾನೆ ಅನ್ನೋದು ಗೊತ್ತಿಲ್ಲ.
ಅಶ್ವಿನಿ ಅವರನ್ನು ನೋಡೋಕೆ ಇಂದು ಮನೆಗೆ ಬಂದಿದ್ದೆ.. ಅವರ ತಂದೆ-ತಾಯಿ ಅವರಿಗೆ ಉತ್ತಮ ಸಂಸ್ಕಾರವನ್ನು ಕಲಿಸಿಕೊಟ್ಟಿದ್ದಾರೆ. ಈ ಸಂದರ್ಭವನ್ನು ಆಕೆ ನಿಭಾಯಿಸಿಕೊಳ್ಳುತ್ತಾರೆ ಅನಿಸುತ್ತೇ.. ಆದರೆ ನಮ್ಗೆ ಅದೆನೋ ಸಂಕಷ್ಟ.. ಆ ಮಗು ಇನ್ನೂ ಈ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಿಲ್ಲ. ಭಗವಂತ ಆಕೆಗೆ ಧೈರ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. ಅಭಿಮಾನಿಗಳು ಕೂಡ ಈ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ. ನೀವು ಆತ್ಮಹತ್ಯೆಗೆ ಮಾಡಿಕೊಂಡರೇ ಕುಟುಂಸ್ಥರಿಗೆ ಮತ್ತೆ ನೋವು ಎದುರಾಗುತ್ತೆ.. ನಿಮ್ಮನ್ನೇ ನಂಬಿರೋ ಕುಟುಂಬಸ್ಥರಿಗೂ ಇದರಿಂದ ನೋವಾಗುತ್ತದೆ ಎಂದು ಮನವಿ ಮಾಡಿದರು.