ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸಮಾಧಿ ಮುಂದೆ ಜೋಡಿಯೊಂದು ಮದುವೆಯಾಗಲು ನಿರ್ಧಾರ ಕೈಗೊಂಡಿರುವಕುರಿತು ಅಪ್ಪು ಸಹೋದರ ರಾಘವೇಂದ್ರ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಿಗ್ಗೆ ಕಂಠೀರವ ಸ್ಟುಡಿಯೋದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮದುವೆಗೆ ಕಾನೂನಿನ ಪ್ರಕಾರ ಅದರದೇ ಆದ ವಯೋಮಿತಿಗಳಿರುತ್ತವೆ. ಮದುವೆಯಾಗಲಿ ಇಚ್ಛಿಸಿದ ಜೋಡಿಯ ಕುರಿತು ಹೆಚ್ಚಿನ ಮಾಹಿತಿ ನಮಗಿಲ್ಲ. ಆದರೆ ಅವರು ಕುಟುಂಬ ಸಮೇತರಾಗಿ ಬಂದು ಮಾತನಾಡಿದರೆ ಖಂಡಿತ ಅನುಮತಿ ನೀಡುವುದಾಗಿ ತಿಳಿಸಿದ್ದಾರೆ.
ಡಾ.ರಾಜ್ಕುಮಾರ್ ಕಟುಂಬ ಮತ್ತು ವಿಶೇಷವಾಗಿ ಅಪ್ಪು ಕರ್ನಾಟಕದ ಆಸ್ತಿ ಇದ್ದಂತೆ. ನಮ್ಮ ಬದುಕು ಖಾಸಗಿಯಾಗಿಲ್ಲ ನಾವು ಬಣ್ಣ ಹಚ್ಚಿದಾಗಿನಿಂದ ನಮ್ಮ ಜೀವನ ಸಾರ್ವಜನಿಕ ಬದುಕಾಗಿದೆ. ಅಭಿಮಾನಿಗಳೇ ನಮ್ಮ ದೇವರು ಅಂತ ಅಪ್ಪಾಜಿ ಅವಾಗಿನಿಂದ ಹೇಳಿಕೊಂಡು ಬಂದಿದ್ದಾರೆ. ಹೀಗಾಗಿ ಪ್ರೇಮಿಗಳ ಎರಡು ಕುಟುಂಬದವರು ಬಂದು ತಮ್ಮ ನಿರ್ಧಾರ ತಿಳಿಸಿದರೆ ಸಂತೋಷದಿಂದ ಮದುವೆ ಮಾಡಿಕೊಳ್ಳುಲು ಅವಕಾಶ ನೀಡುವೆವು ಎಂದಿದ್ದಾರೆ.