ಬೆಂಗಳೂರು: ಕಳೆದವಾರ ಇಹಲೋಕ ತ್ಯಜಿಸಿದ ನಟ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಸಮಾಧಿ ವೀಕ್ಷಣೆಗೆ ಜನಸಾಗರವೇ ಹರಿದು ಬರುತ್ತಿದೆ. ಕಂಠೀರವ ಸ್ಟುಡಿಯೋದಲ್ಲಿನ ಸಮಾಧಿಗೆ ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ಅಗಲಿದ ನಟನನ್ನು ನೆನೆದು ಕಣ್ಣೀರು ಸುರಿಸುತ್ತಿದ್ದಾರೆ.
ಈ ವೇಳೆ ಪುಟ್ಟ ಕಂದಮ್ಮವೊಂದು ಅಪ್ಪುನನ್ನ ನೆನೆದು ಹಾಡು ಹಾಡಿದೆ. ಅಪ್ಪು ಸಾವಿನ ನಂತರ ತೀವ್ರ ವೈರಲ್ ಆಗಿರುವ ಪುನೀತ್ ಗಾಯನದ ‘ನಿನ್ನ ಕಂಗಳ ಬಿಸಿಯ ಹನಿಯು ನೂರು ಕಥೆಯ ಹೇಳಿದೆ’ ಹಾಡನ್ನು ಕಂದಮ್ಮ ಹಾಡಿ ನಮನ ಸಲ್ಲಿಸಿದೆ.
ಇನ್ನು ಇಂದು ಕೂಡ ಅಭಿಮಾನಿಗಳು ಸಾಗರೋಪಾದಿಯಲ್ಲಿ ಸ್ಟುಡಿಯೋಗೆ ಹರಿದು ಬರುತ್ತಿದ್ದು, ಅಪ್ಪು ಸಮಾಧಿ ಕಂಡು ಕಣ್ಣೀರಾಗುತ್ತಿದ್ದಾರೆ. ಭಾನುವಾರವಾಗಿರೋದ್ರಿಂದ ಸಮಾಧಿ ವೀಕ್ಷಿಸಲು ಆಗಮಿಸುತ್ತಿರೋ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ.