ಪುನೀತ್ ರಾಜ್ ಕುಮಾರ್ ಚಿರನಿದ್ರೆಯ ಸ್ಥಳ ಪುಣ್ಯ ಅಭಿಮಾನದ ಕ್ಷೇತ್ರವಾಗುತ್ತಿದೆ. ಪ್ರತಿ ದಿನ ಏನಾದ್ರೊಂದು ವಿಶೇಷ ಅಭಿಮಾನಕ್ಕೆ ಸಾಕ್ಷಿಯಾಗುತ್ತಿರುವ ಅಪ್ಪು ಸಮಾಧಿ ಇವತ್ತು ಕೂಡ ಒಂದು ವಿಶೇಷ ಅಭಿಮಾನದ ಯಾತ್ರೆಗೆ ಸಾಕ್ಷಿ ಆಯ್ತು.
ಒಂದಲ್ಲ ಎರಡಲ್ಲ 3350 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಅಪ್ಪು ಸಮಾಧಿ ದರ್ಶನಕ್ಕೆ ಬಂದಿದ್ದ ಅಭಿಮಾನಿ ದೇವರು.
ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಸಮಾಧಿ ನಿತ್ಯ ಅಭಿಮಾನಿ ಸಾಗರವೇ ಸೇರುತ್ತಿರುವ ಸ್ಥಳ. ಅಪ್ಪು ಅಗಲಿಕೆಯ ನಂತರ ಪ್ರತಿ ದಿನ ಸಾವಿರಾರು ಜನ ನಾನಾ ಊರುಗಳಿಂದ ಬಂದು ಪುನೀತ್ ರಾಜ್ ಕುಮಾರ್ ಚಿರನಿದ್ರೆಗೆ ಜಾರಿರುವ ಸ್ಥಳವನ್ನ ನೋಡ್ಕೊಂಡು ಹೋಗುತ್ತಿದ್ದಾರೆ.
ಇವತ್ತು ಕೂಡ ಸಾವಿರಾರು ಅಭಿಮಾನಿಗಳು ಅಪ್ಪು ಸಮಾಧಿಗೆ ಭೇಟಿ ಕೊಟ್ಟಿದ್ದರು. ಆದ್ರೆ ಅಲ್ಲೊಬ್ಬ ವಿಶೇಷ ಅಭಿಮಾನಿ ಬಂದಿದ್ದರು.
ಆ ಅಭಿಮಾನಿ ಸುಮ್ನೆ ಬಂದಿರಲಿಲ್ಲ. ಸೈಕಲ್ ಮೇಲೆ ಬರೋಬ್ಬರಿ 47 ದಿವಸ 3350 ಕಿಲೋ ಮೀಟರ್ ದೂರದಿಂದ ಬಂದಿದ್ದ. ಆ ವಿಶೇಷ ಅಪ್ಪು ಅಭಿಮಾನಿಯ ಹೆಸರು ಗುರುಪ್ರಕಾಶ್ ಗೌಡ.
ಗುರುಪ್ರಕಾಶ್ ಗೌಡ ಅಪ್ಪಟ್ಟ ಅಪ್ಪು ಅವರ ಅಭಿಮಾನಿ. ತನ್ನ ನೆಚ್ಚಿನ ನಟನಿಗೆ ಗೌರವ ಪೂರ್ವಕ ನಮನವನ್ನ ಸಲಿಸ ಬೇಕು ಎಂಬು ಕಾರಣಕ್ಕೆ ಉತ್ತರ ಭಾರತದಿಂದ ಸೈಕಲ್ ಜಾಥವನ್ನ ಡಿಸೆಂಬರ್ 10ನೇ ತಾರೀಖ್ ಪ್ರಾರಂಭಿಸಿದ್ದ.
ಮಳೆ ಚಳಿ ಬಿಸಿಲು ಲೆಕ್ಕಿಸದೆ 3350 ಕಿಲೋ ಮೀಟರ್ ಸೈಕಲ್ ತುಳಿದು 42 ದಿನಗಳಲ್ಲಿ ಅಪ್ಪು ಸಮಾಧಿಯನ್ನ ತಲುಪಿದ್ದಾರೆ ಒಟ್ಟು 47 ದಿನ ಸಮಯ ಅದ್ರಲ್ಲಿ ಐದು ಸೈಕಲ್ ಕೆಟ್ಟು ಹೋಗಿತ್ತು.
ಗುರುಪ್ರಕಾಶ್ ಗೌಡ ಅಪ್ಪು ಅವರ ಸಮಾಧಿಗೆ ಇವತ್ತು ಒಂದು ಗಂಟೆಯ ಸುಮಾರಿಗೆ ಬರುತ್ತಿದಂಗೆ ಅದ್ದೂರಿ ಸ್ವಾಗತವನ್ನ ಅಪ್ಪು ಅಭಿಮಾನಿಗಳು ಮಾಡಿದ್ರು.
ಅದ್ರಲೂ ವಿಶೇಷವಾಗಿ ಅಪ್ಪು ಸಹೋದರ ರಾಘವೇಂದ್ರ ರಾಜ್ ಕುಮಾರ್ ಮತ್ತು ರಾಘಣ್ಣನ ದ್ವಿತಿಯ ಪುತ್ರ ಯುವರಾಜ್ ಕುಮಾರ್ ಅವರು ಅಭಿಮಾನಿಯ ಅಭಿಮಾನಕ್ಕೆ ಧನ್ಯವಾದವನ್ನ ಸಮರ್ಪಿಸಿದ್ರು.
ಅಪ್ಪು ಅವ್ರನ್ನ ನಾವು ಮನೆಯವ್ರು ಜಾಸ್ತಿ ಪ್ರೀತಿಸುತ್ತಾರಾ ಅಥವಾ ಅಭಿಮಾನಿಗಳು ಜಾಸ್ತಿ ಪ್ರೀತಿಸುತ್ತಾರಾ ಗೊತ್ತಿಲ್ಲ ಅಂತ ಮನಮುಟ್ಟುವ ಹಾಗೆ ರಾಘಣ್ಣ ಮಾತನಾಡಿದ್ರು.
ಡಿಸೆಂಬರ್ 10ರಂದು ಹಿಮಾಲಯದಿಂದ ಸೈಕಲ್ ಜಾಥವನ್ನ ಗುರು ಪ್ರಕಾಶ್ ಗೌಡ ಪ್ರಾರಂಭಿಸಿದ್ರು. ಇಂದು ಬೆಂಗಳೂರಿನ ಅಪ್ಪು ಸಮಾಧಿಯನ್ನ ತಲುಪಿದ ಗುರುಪ್ರಕಾಶ್ ಅಪ್ಪು ಸಮಾಧಿಗೆ ನಮನ ಸಲ್ಲಿಸಿ ಅಭಿಮಾನದಿಂದ ಮಾತನಾಡಿದ್ರು.
ಏನೇ ಹೇಳಿ ಅಭಿಮಾನಕ್ಕಿಂತ ದೊಡ್ಡದು ಯಾವುದಿದೆ. ಅಪ್ಪು ಅವರಿಗೆ ಅಭಿಮಾನಿಗಳು ಸಲ್ಲಿಸುತ್ತಿರುವ ಅಭಿಮಾನ ನೋಡ್ತಾ ಇದ್ರೆ ಎಂಥಹ ದೊಡ್ಡ ವ್ಯಕ್ತಿಯನ್ನ ಕರುನಾಡು ಕಳೆದುಕೊಂಡಿದೆ ಅನ್ನೋದನ್ನ ಊಹಿಸಲು ಅಸಾಧ್ಯ.