ಅಪ್ಪು ಸಮಾಧಿ ಬಳಿ ಜಮೀರ್​ ಪುತ್ರನ ‘ಬನಾರಸ್’​ ಪೋಸ್ಟರ್​ ರಿಲೀಸ್​


ಬೆಂಗಳೂರು: ಬೆಲ್​ ಬಾಟಮ್​ ಖ್ಯಾತಿಯ ಜಯತೀರ್ಥ ನಿರ್ದೇಶನದಲ್ಲಿ ಮೂಡಿಬರುತ್ತಿರುವ ” ಬನಾರಸ್” ಚಿತ್ರದ ಪೋಸ್ಟರ್ ರಿಲೀಸ್​ ಆಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಮಾಧಿ ಬಳಿ ಚಿತ್ರತಂಡ ಇಂದು ಬೆಳಿಗ್ಗೆ ಪೋಸ್ಟರ್ ಲಾಂಚ್ ಮಾಡಿದೆ.

ಕಂಠೀರವ ಸ್ಟುಡಿಯೋದಲ್ಲಿನ ಡಾ. ರಾಜಕುಮಾರ್​, ಪಾರ್ವತಮ್ಮನವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಪುನೀತ್​ ಸಮಾಧಿಗೆ ಪುಷ್ಪಾರ್ಚನೆ ಸಲ್ಲಿಸಿ ಮೌನಚರಣೆ ಮಾಡಿ ಪೋಸ್ಟರ್ ಲಾಂಚ್ ಮಾಡಿದೆ. ಮಾಜಿ ಸಚಿವ ಜಮೀರ್​ ಅಹ್ಮದ್​ ಪುತ್ರ ಝೈದ್ ಖಾನ್ ನಟನೆಯ ಚೊಚ್ಚಲ ಚಿತ್ರ ಇದಾಗಿದ್ದು ಅಂದುಕೊಂಡಂತೆ ನಡೆದಿದ್ದರೆ ಅಪ್ಪು ಈ ಪೋಸ್ಟ್​ರ್​ನ್ನ ರಿಲೀಸ್​​ ಮಾಡಬೇಕಿತ್ತು. ಆದರೆ ಅವರ ಅಕಾಲಿಕ ನಿಧನದಿಂದ ಚಿತ್ರತಂಡ ಅವರ ಸಮಾಧಿ ಬಳಿ ಪೋಸ್ಟರ್​ ಲಾಂಚ್​ ಮಾಡಿ ಗೌರವ ಸಲ್ಲಿಸಿದೆ.

ಬನಾರಸ್ ಚಿತ್ರದಲ್ಲಿ ನಾಯಕನಾಗಿ ಝೈದ್ ಖಾನ್ ನಟಿಸಿದ್ರೆ, ನಾಯಕಿಯಾಗಿ ಪಂಚತಂತ್ರ, ಮತ್ತು ರಾಬರ್ಟ್​ ಖ್ಯಾತಿಯ ನಟಿ ಸೋನಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ ಲಾಂಚ್ ಬಳಿಕ ಅಂಬರೀಶ್​ ಸಮಾಧಿಗೂ ಬನಾರಸ್ ಟೀಮ್ ನಮನ ಸಲ್ಲಿಸಿದೆ.

News First Live Kannada


Leave a Reply

Your email address will not be published. Required fields are marked *