ನಟ ಪುನೀತ್ ರಾಜ್‍ಕುಮಾರ್ ಕೋಟ್ಯಾಂತರ ಅಭಿಮಾನಿಗಳನ್ನ ಅಗಲಿ ಇಂದಿಗೆ 11 ದಿನ. ಅವರು ಇಲ್ಲ ಅನ್ನೋದೆ ಇಂದಿಗೂ ಜನರಿಗೆ ನಂಬಲಿಕೆ ಆಗ್ತಿಲ್ಲ. ಇವತ್ತು ಡಾ.ರಾಜ್ ಕುಟುಂಬಸ್ಥರು ಕಠೀರವ ಸ್ಟುಡಿಯೋದಲ್ಲಿ 11 ನೇ ದಿನದ ಕಾರ್ಯವನ್ನ ನೆರವೇರಿಸಿದ್ದಾರೆ.
ಇದನ್ನೂ ಓದಿ: ‘ಹೊಸ ಪ್ರತಿಭೆಗಳಿಗೆ ಅವಕಾಶ ನೀಡ್ಬೇಕು ಅಂತಿದ್ರು’ -ಅಪ್ಪು ಸಮಾಧಿ ಮೇಲೆ ಕೈ ಇಟ್ಟು ಕುಳಿತ ಸಿದ್ದಾರ್ಥ್
ಇಂದು ಕಂಠೀರವ ಸ್ಟುಡಿಯೋದಲ್ಲಿ ನಡೆದ ಪುಣ್ಯಸ್ಮರಣೆ ಕಾರ್ಯದಲ್ಲಿ ನಿರೂಪಕಿ ಅನುಶ್ರೀ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಪ್ಪು ಅವರು ಎಲ್ಲಿಯೂ ಹೋಗಿಲ್ಲ.. ಈ ಕ್ಷಣದಲ್ಲಿ ನನಗೆ ಮಾತುಗಳೇ ಬರ್ತಿಲ್ಲ. ಅಪ್ಪು ಸರ್ ಯಾವತ್ತು ಯಾರನ್ನು ದ್ವೇಷಿಸಿಲ್ಲ. ಎಲ್ಲರನ್ನೂ ಪ್ರೀತಿಯಿಂದಲೇ ಕಂಡವರು. ಹೀಗಾಗಿ ನಾವು ಎಲ್ಲರನ್ನು ಪ್ರೀತಿಸಿ ನಗು ನಗುತ್ತಾ ಇದ್ದರೆ ಪುನೀತ್ ಅವರು ನಮ್ಮ ಹೃದಯದಲ್ಲೇ ಇರ್ತಾರೆ ಎಂದರು..