ಅಪ್ಪು ಸರ್​ ಹೆಚ್ಚಾಗಿ ಮಾತಾಡ್ತಿದ್ದ 1 ವಿಷ್ಯ ಅಂದ್ರೆ.. ನಟ ಅಚ್ಯುತ್ ಕುಮಾರ್


ನ್ಯೂಸ್​​ಫಸ್ಟ್​​ನೊಂದಿಗೆ ಮಾತನಾಡುವಾಗ ಹಿರಿಯ ನಟ ಅಚ್ಯುತ್ ಕುಮಾರ್​​, ಅಪ್ಪು ಕುರಿತ ಹೊಸ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಹೌದು, ಅಪ್ಪು ನಮ್ಮನ್ನಗಲಿ ಬಹಳ ದಿನಗಳು ಕಳೆದರೂ ಎಲ್ಲರ ಹೃದಯದಲ್ಲಿ ಮಾತ್ರ ಸುಂದರ ನೆನಪುಗಳ ಮೂಲಕ, ಅಧ್ಬುತ ಸ್ಪೂರ್ತಿಯ ರೀತಿಯಲ್ಲಿ ಎಂದೆಂದಿಗೂ ಉಳಿದಿರುತ್ತಾರೆ ಎಂದರೇ ತಪ್ಪಾಗುವುದಿಲ್ಲ ಎಂದರು.

ಅಪ್ಪು ಅವರೊಂದಿಗಿನ ಒಂದಿಷ್ಟು ನೆನಪುಗಳನ್ನು ಹಂಚಿಕೊಂಡ ಅಚ್ಯುತ್ ಕುಮಾರ್, ಅವರು ಬಹಳಾ ಸಿನಿಮಾ ಪ್ರೇಮಿ. ಕೇವಲ ನಮ್ಮ ದೇಶದ ಸಿನಿಮಾಗಳನ್ನು ಮಾತ್ರವಲ್ಲದೇ ಬೇರೆ ಬೇರೇ ದೇಶದ ಸಿನಿಮಾಗಳನ್ನು ನೋಡಿ ವಿಮರ್ಶೆ ಮಾಡುವುದು. ಅವುಗಳಲ್ಲಿನ ಹೊಸತನ ಹುಡುಕೋದು ಅವರಿಗೆ ಹವ್ಯಾಸ ಎಂದು ಹೇಳಿದರು. ನಮ್ಮ ಸ್ಯಾಂಡಲ್​​ವುಡ್​ನ ಸಿನಿಮಾಗಳನ್ನು ನೋಡಿದಾಗ ಇಷ್ಟವಾದರೆ, ವಿಮರ್ಶೆಯಿದ್ದರೆ ನೇರವಾಗಿ ಕಲಾವಿದರಿಗೆ ಕರೆ ಮಾಡಿ ಚರ್ಚೆ ಮಾಡುತ್ತಿದ್ದರು ಎಂದರು.

ಅಪ್ಪುಗೆ ತಾವು ನಾಯಕ ನಟನಾಗಿ ಮಾಡುವ ಸಿನಿಮಾಗಳನ್ನು ಬಿಟ್ಟು ಬೇರೆ ಸಿನಿಮಾಗಳನ್ನು ಮಾಡಬೇಕು ಎಂಬ ತುಡಿತ ಇತ್ತು. ಅಂದರೆ ಹೊಸಬರ ಕಥೆಗಳು ಇಷ್ಟವಾದರೆ ಪ್ರೋತ್ಸಾಹಿಸುತ್ತಿದ್ದರು. ಅದಕ್ಕಾಗಿ ಸಿನಿಮಾಗಳನ್ನು ತಮ್ಮ ಪಿಆರ್​ಕೆ ಪ್ರೊಡಕ್ಷನ್ಸ್​​ನಿಂದ ರೂಪಿಸುವ ಹೊಸ ಪ್ರಯತ್ನ ಮಾಡುತ್ತಿದ್ದರು. ನಾನು ನಟಿಸಲಾಗದ ಸಿನಿಮಾಗಳನ್ನು ನಮ್ಮ ಪ್ರೊಡಕ್ಷನ್​​​ ಹೌಸ್​ನಿಂದ ಮಾಡುತ್ತೇನೆ ಎಂದಿದ್ದರು ಎಂದು ಹೇಳಿದರು.

News First Live Kannada


Leave a Reply

Your email address will not be published.