ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಸಾವಿನ ಕುರಿತು ಸಂಪೂರ್ಣ ತನಿಖೆ ಮಾಡುವಂತೆ ಒತ್ತಾಯಿಸಿ ಅಪ್ಪು ಅಭಿಮಾನಿಯೊಬ್ಬರು ದೂರು ಸಲ್ಲಿಸಲು ಮುಂದಾಗಿರುವ ಕುರಿತು ನಟ ಶಿವರಾಜ್ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ದೂರು ಕೋಡೋದು ಏಕೆ. ಅಪ್ಪುನೇ ಇವತ್ತು ನಮ್ ಜೊತೆ ಇಲ್ಲ ದೂರು ನೀಡಿ ಏನ್ ಮಾಡೋದು. ನಾವು ಇದೇ ಮಾಡಿ ಅದೇ ಮಾಡಿ ಅಂತ ಹೇಳಲ್ಲ. ಅವರವರ ಹೃದಯಕ್ಕೆ ಅದು ಅರ್ಥ ಆಗುತ್ತೆ. ನಾ ಏನ್ ಹೇಳಲಿ ಎಲ್ಲದಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಹೃದಯಕ್ಕೆ ಅಪ್ಪು ಏನೆಂದು ಗೊತ್ತು ಎಂದಿದ್ದಾರೆ.
ಆರಂಭದಲ್ಲಿ ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್ ಗೆ ಯಾವ ಯಾವ ಚಿಕಿತ್ಸೆಯನ್ನ ನೀಡಲಾಯಿತು. ವಿಕ್ರಮ್ ಆಸ್ಪತ್ರೆಗೆ ತಡವಾಗಿ ಹೊಗಲು ಕಾರಣವೇನು?. ವಿಕ್ರಂ ಆಸ್ಪತ್ರೆಗೆ ಹೊಗಲು ರಮಣಶ್ರೀ ಆಸ್ಪತ್ರೆಯವರು ಯಾಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ. ಅನ್ನೋ ಪ್ರಶ್ನೆಗಳನ್ನ ಅಭಿಮಾನಿ ಅರುಣ್ ಪರಮೇಶ್ವರ್ ಎಂಬುವವರು ಕೇಳಿದ್ದು ಈ ಕುರಿತು ಸಮಗ್ರ ತನಿಖೆ ಮಾಡಿ ಸತ್ಯಾಸತ್ಯತೆಯನ್ನ ಜನರ ಮುಂದಿಡಬೇಕೆಂದು ಸದಾಶಿವನಗರ ಠಾಣೆಗೆ ದೂರು ನೀಡಲು ಮುಂದಾಗಿದ್ದರು.
ಮರೆಯಾದ ಯುವರತ್ನ: ‘ಅಪ್ಪು’ಗೆ ನ್ಯೂಸ್ಫಸ್ಟ್ ಗೀತ ನಮನ