ಅಪ್ಪು ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರು ಸಲ್ಲಿಸಲು ಮುಂದಾದ ಅಭಿಮಾನಿ


ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಸಾವಿನ ಕುರಿತು ಸಂಪೂರ್ಣ ತನಿಖೆ ಮಾಡುವಂತೆ ಒತ್ತಾಯಿಸಿ ಅಪ್ಪು ಅಭಿಮಾನಿಯೊಬ್ಬರು ದೂರು ಸಲ್ಲಿಸಲು ಮುಂದಾಗಿದ್ದಾರೆ.

ಪುನೀತ್ ರಮಣಶ್ರೀ ಆಸ್ಪತ್ರೆಗೆ ಹೋದ ಸಮಯದಲ್ಲಿನ ಆಸ್ಪತ್ರೆಯ ಸಿಸಿಟಿವಿ ವಿಡಿಯೋಗಳನ್ನ ಬಹಿರಂಗ ಪಡಿಸಬೇಕು. ಆರಂಭದಲ್ಲಿ ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್ ಗೆ ಯಾವ ಯಾವ ಚಿಕಿತ್ಸೆಯನ್ನ ನೀಡಲಾಯಿತು. ವಿಕ್ರಮ್ ಆಸ್ಪತ್ರೆಗೆ ತಡವಾಗಿ ಹೊಗಲು ಕಾರಣವೇನು? ವಿಕ್ರಂ ಆಸ್ಪತ್ರೆಗೆ ಹೊಗಲು ರಮಣಶ್ರೀ ಆಸ್ಪತ್ರೆಯವರು ಯಾಕೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ ಅನ್ನೋ ಪ್ರಶ್ನೆಗಳನ್ನ ಅಭಿಮಾನಿ ಎತ್ತಿದ್ದಾರೆ.

ಈ ಕುರಿತು ಸಮಗ್ರ ತನಿಖೆ ಮಾಡಿ ಸತ್ಯಾಸತ್ಯತೆಯನ್ನ ಜನರ ಮುಂದಿಡಬೇಕೆಂದು ಅರುಣ್ ಪರಮೇಶ್ವರ್ ಎಂಬುವವರು ಸದಾಶಿವನಗರ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *