ಚಾಮರಾಜನಗರ/ತುಮಕೂರು: ಸ್ಯಾಂಡಲ್ವುಡ್ ನಟ ಪುನೀತ್ ರಾಜ್ಕುಮಾರ್ ಅಕಾಲಿಕ ನಿಧನದ ನಂತರ ಅವರ ಅಭಿಮಾನಿಗಳ ಸರಣಿ ಸಾವು ಮುಂದುವರೆದಿದೆ. ರಾಜ್ಯದಲ್ಲಿ ಇಂದು ಕೂಡ ಇಬ್ಬರು ಅಭಿಮಾನಿಗಳು ಸಾವನ್ನಪ್ಪಿದ್ದು ಪುನೀತ್ ಅಭಿಮಾನಿಗಳ ಸಾವಿನ ಸಂಖ್ಯೆ ಬರೋಬ್ಬರಿ 14 ಕ್ಕೇರಿದಂತಾಗಿದೆ.
ತುಮಕೂರು ತಾಲೂಕಿನ ಅರೆಗುಜ್ಜನಹಳ್ಳಿಯಲ್ಲಿ ಪುನೀತ್ ಅಭಿಮಾನಿಯೊಬ್ಬರು ಊಟ, ತಿಂಡಿ ಬಿಟ್ಟು ಸಾವನ್ನಪ್ಪಿದ್ದಾರೆ. ರವಿಕುಮಾರ್(27) ಸಾವನ್ನಪ್ಪಿದ ಅಭಿಮಾನಿ. ಪುನೀತ್ ಸಾವಿನಿಂದ ಅಪಾರವಾಗಿ ನೊಂದಿದ್ದ ಅಭಿಮಾನಿ, ಅಂತಿಮ ದರ್ಶನಕ್ಕೆ ಹೋಗಿ ಬಂದು ಕಳೆದ ಐದಾರು ದಿನಗಳಿಂದ ಊಟ ತಿಂಡಿ ಬಿಟ್ಟಿದ್ದನಂತೆ. ಪರಿಣಾಮ ಕಳೆದ ನಾಲ್ಕು ದಿನದಿಂದ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು ಎನ್ನಲಾಗಿದೆ. ನಿನ್ನೆ ಕುಂಟುಂಬ್ಥರು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾದೇ ಅಭಿಮಾನಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿ ಕೂಡ ಅಭಿಮಾನಿಯೋರ್ವ ಮೃತಪಟ್ಟಿದ್ದಾನೆ. ಶಿವಮೂರ್ತಿ(31) ಮೃತ ಅಭಿಮಾನಿ.
ಇದನ್ನೂ ಓದಿ:ಪುನೀತ್ ಸಮಾಧಿ ದರ್ಶನ ಪಡೆದು ಕಣ್ಣೀರಿಟ್ಟ ತಮಿಳು ನಟ ಸೂರ್ಯ
ಪಟ್ಟಣದ ಭೀಮನಗರ ನಿವಾಸಿಯಾದ ಅಭಿಮಾನಿ ಪುನೀತ್ ರಾಜ್ ಕುಮಾರ್ ಹಠಾತ್ ನಿಧನದಿಂದ ಆಘಾತಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ನೆಚ್ಚಿನ ನಟ ಸಾವಿನಿಂದ ಊಟ ತ್ಯಜಿಸಿದ್ದ ಅಭಿಮಾನಿ ಆರೋಗ್ಯ ಕ್ಷೀಣಿಸಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾನೆ. ಹಲವು ಬಾರಿ ಪುನೀತ್ ರನ್ನ ಭೇಟಿಯಾಗಿದ್ದ ಅಭಿಮಾನಿ ಅಪ್ಪು ನಿಧನದ ಸುದ್ದಿ ತಿಳಿದು ಪುನೀತ್ ಜೊತೆ ತೆಗೆಸಿಕೊಂಡಿದ್ದ ಪೋಟೋ ನೋಡಿ ನಿತ್ಯ ಕಣ್ಣೀರು ಹಾಕ್ತಿದ್ದರಂತೆ.